Darshan Thoogudeepa : ರೇಣುಕಾ ಸ್ವಾಮಿ ಹತ್ಯೆ ಪ್ರಕರಣ- ನಟ ದರ್ಶನ್ ಗೆ ಮರಣ ದಂಡನೆ ಶಿಕ್ಷೆ ?!

Share the Article

Darsha Thoogudeep: : ರೇಣುಕಾ ಸ್ವಾಮಿ ಹತ್ಯೆ ಆರೋಪಿ ನಟ ದರ್ಶನ್(Darshan Thoogudeep) ಬಳ್ಳಾರಿ ಜೈಲಿನಲ್ಲಿ ನರಳಾಡುತ್ತಿದ್ದು, ಸದ್ಯದಲ್ಲೇ ಜೈಲಿಂದ ರಿಲೀಸ್ ಆಗಿ, ಜಾಮೀನು ಪಡೆದು ಹೊರಗೆ ಬರುತ್ತಾರೆ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇಷ್ಟೇ ಅಲ್ಲದೆ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆದ ತಕ್ಷಣ ಅವರನ್ನು ಕರೆದುಕೊಂಡು ಬರಲು ಹೆಲಿಕಾಪ್ಟರ್ ಕೂಡ ಬುಕ್ ಮಾಡಲಾಗಿದೆ. ಆದರೆ ಈ ಬೆನ್ನಲ್ಲೇ ನಟ ದರ್ಶನ್ ತೂಗುದೀಪ್‌ಗೆ ‘ಮರಣ ದಂಡನೆ ಶಿಕ್ಷೆ’ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.

ಹೌದು, ಪವಿತ್ರಾ ಗೌಡಗೆ(Pavitra Gowda) ಕೆಟ್ಟ ಕೆಟ್ಟದಾಗಿ ಮೆಸೇಜ್‌ಗಳ ಕಳುಹಿಸಿ, ತನ್ನ ಮರ್ಮಾಂಗ ತೋರಿಸಿದ್ದ ಎಂಬ ಕಾರಣಕ್ಕೆ ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಎಂಬ ಚಿತ್ರದುರ್ಗದ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಹೀಗಾಗಿಯೇ ದರ್ಶನ್ ತೂಗುದೀಪ್ ಅವರೀಗ, ಬಳ್ಳಾರಿ ಜೈಲಿನಲ್ಲಿ ಲಾಕ್ ಆಗಿದ್ದಾರೆ. ಇಂತಹ ಸಮಯದಲ್ಲೇ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್‌ಗೆ ಮರಣ ದಂಡನೆ ಶಿಕ್ಷೆ ಗ್ಯಾರಂಟಿ, ಈಗಿರುವ ಪರಿಸ್ಥಿತಿ ನೋಡುತ್ತಿದ್ದರೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ಇನ್ನೂ 2 ವರ್ಷ ಹೊರಗೆ ಬರೋದಿಲ್ಲ ಎಂಬ ಸುದ್ದಿ ಹರಡಿದೆ.

ಆದರೆ ದರ್ಶನ್ ವಿರುದ್ಧ ಇನ್ನೂ ಕೊಲೆಯ ಆರೋಪ ಸಾಭೀತಾಗಿಲ್ಲ. ಪೋಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಕೋರ್ಟ್ ದರ್ಶನ್ ಗೆ ಮುಂದೆ ಬೇಲೋ ಇಲ್ಲಾ ಜೈಲೋ ಎಂದು ತಿಳಿಸಬೇಕು. ಅಲ್ಲಿ ತನಕ ಈ ಊಹಪೂಹಗಳಿಗೆ ಕಿವಿಗೊಡಬೇಡಿ.

Leave A Reply

Your email address will not be published.