Renukaswamy Murder Case: ಜಾಮೀನು ದೊರಕಿದ 10 ದಿನದ ಬಳಿಕ ಜೈಲಿನಿಂದ ಹೊರ ಬಂದ ಡಿ ಗ್ಯಾಂಗ್‌ ಸದಸ್ಯರು

Share the Article

Renukaswamy Murder Case: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಕುರಿತಂತೆ ಜಾಮೀನು ಪಡೆದಿದ್ದ ಮೂವರು ಆರೋಪಿಗಳು ಇಂದು (ಬುಧವಾರ) ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಜಾಮೀನು ದೊರಕಿ 10 ದಿನಗಳ ಬಳಿಕ ಆರೋಪಿ ನಂ.15 ಕಾರ್ತಿಕ್‌, ಆರೋಪಿ ನಂ.16 ಕೇಶವ ಮೂರ್ತಿ, ಆರೋಪಿ ನಂ.17 ನಿಖಿಲ್‌ ನಾಯಕ್‌ ಇವರನ್ನು ಶ್ಯೂರಿಟಿ ಪಡೆದು ತುಮಕೂರು ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.

ಸೆ.23 ರಂದು ಕೇಶವಮೂರ್ತಿಗೆ ಜಾಮೀನು ನೀಡಿದ್ದು, ಕಾರ್ತಿಕ್‌ ಮತ್ತು ನಿಖಿಲ್‌ಗೆ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲಿಗೆ ಪೊಲೀಸರ ಬಳಿ ಶರಣಾಗತಿ ಆಗಿದ್ದ ಆರೋಪಿಗಳಾದ ರವಿಶಂಕರ್‌, ಕಾರ್ತಿಕ್‌, ಕೇಶವಮೂರ್ತಿ, ನಿಖಿಲ್‌ರನ್ನು ಬೆಂಗಳೂರು ಪರಪ್ಪನ ಅಗ್ರಹಾರದ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್‌ ಮಾಡಲಾಗಿತ್ತು.

ಎರಡು ಲಕ್ಷ ಬಾಂಡ್‌ ಹಾಗೂ ತಲಾ ಇಬ್ಬರ ಶ್ಯೂರಿಟಿ ಮೇರೆಗೆ ಕಾರ್ತಿಕ್‌, ಕೇಶವ ಮೂರ್ತಿ ನಿಖಿಲ್‌ಗೆ ಜಾಮೀನು ಮಂಜೂರಾಗಿತ್ತು. ಹತ್ತು ದಿನಗಳ ಬಳಿಕ ಬಿಡುಗಡೆಯಾದ ಇವರು, ಕೇಶವಮೂರ್ತಿಗೆ ಹೈಕೋರ್ಟ್‌ ಹಾಗೂ ಇನ್ನಿಬ್ಬರಿಗೆ 57 ಸಿಸಿಹೆಚ್‌ ಕೋರ್ಟ್‌ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ತಡರಾತ್ರಿಯೇ ಮೇಲ್‌ ಮೂಲಕ ಜಾಮೀನು ಆದೇಶ ಬಂದಿದ್ದರೂ ಸಮಯ ಮೀರಿದ ಕಾರಣ ಇಂದು ಬೆಳಿಗ್ಗೆ 10 ಗಂಟೆಗೆ ತುಮಕೂರು ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಲು ನಕಾರ ವ್ಯಕ್ತಪಡಿಸಿದ ಇವರು, ನಮಗೆ ಏನೂ ಗೊತ್ತಿಲ್ಲ, ಎಲ್ಲವನ್ನೂ ತನಿಖಾಧಿಕಾರಿಗಳ ಮುಂದೆ ಹೇಳಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನೋರ್ವ ಆರೋಪಿ ರವಿಶಂಕರ್‌ ತುಮಕೂರು ಜೈಲಿನಲ್ಲಿಯೇ ಇದ್ದು, ಉಳಿದ ಮೂವರು ಬಿಡುಗಡೆ ಹೊಂದಿದ್ದಾರೆ.

 

View this post on Instagram

 

A post shared by Vishnu (@troll__brahma_999)

Leave A Reply

Your email address will not be published.