Cash on delivery: ಕ್ಯಾಶ್ ಆನ್ ಡೆಲಿವರಿ ಮೇಲೆ ಐ-ಫೋನ್ ಆರ್ಡರ್: ಹಣ ಕೊಡದೇ ಡೆಲಿವರಿ ಬಾಯ್ ಕೊಲೆ!

Share the Article

Cash on delivery: ಆನ್ ಲೈನ್ ನಲ್ಲಿ ಮೊಬೈಲ್ ಮೂಲಕ ಜಸ್ಟ್ ಬುಕ್ ಮಾಡಿದ್ರೆ ಸಾಕು, ಎಷ್ಟೇ ದುಬಾರಿಯ ವಸ್ತು ಆದ್ರು ಮನೆ ಬಾಗಿಲಿಗೆ ಬರುತ್ತೆ. ಅಂತೆಯೇ ಉತ್ತರ ಪ್ರದೇಶದಲ್ಲಿ ಕ್ಯಾಶ್ ಆನ್ ಡೆಲಿವರಿ (Cash on delivery) ಮೂಲಕ ವ್ಯಕ್ತಿಯೋರ್ವ ಐ-ಫೋನ್ ಆರ್ಡರ್ ಮಾಡಿದ್ದು, ನಂತರ ಐ-ಫೋನ್ ಗಾಗಿ ಹಣ ಕೊಡದೇ ಡೆಲಿವರಿ ಬಾಯ್ ನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಡೆಲಿವರಿ ಬಾಯ್ ನ್ನು ಕೊಲೆ ಮಾಡಿ ನಂತರ ಆತನ ದೇಹವನ್ನು ಲಕ್ನೋದ ಇಂದಿರಾ ಕಾಲುವೆಗೆ ಎಸೆಯಲಾಗಿದೆ ಮತ್ತು ಅದನ್ನು ಹುಡುಕಲು ಎಸ್‌ಡಿಆರ್‌ಎಫ್ ತಂಡವನ್ನು ಕರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿ ಪ್ರಕಾರ, ಚಿನ್ಹಾಟ್‌ನ ಗಜಾನನ್ ಎಂಬಾತ ಫ್ಲಿಪ್‌ಕಾರ್ಟ್‌ನಿಂದ ಸುಮಾರು 1.5 ಲಕ್ಷ ಮೌಲ್ಯದ ಐಫೋನ್ ಅನ್ನು ಆರ್ಡರ್ ಮಾಡಿ COD (ಕ್ಯಾಶ್ ಆನ್ ಡೆಲಿವರಿ) ಪಾವತಿ ಆಯ್ಕೆಯನ್ನು ಆರಿಸಿಕೊಂಡಿದ್ದರು.

ಇನ್ನು ಡೆಲಿವರಿ ಬಾಯ್ ಎರಡು ದಿನವಾದರೂ ಸಾಹು ಮನೆಗೆ ಬಾರದೇ ಇದ್ದಾಗ, ಆತನ ಕುಟುಂಬದವರು ಸೆಪ್ಟೆಂಬರ್ 25 ರಂದು ಚಿನ್‌ಹತ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ನಂತರ ದೂರಿನ ಆಧಾರದಲ್ಲಿ, ಸಾಹು ಅವರ ಕರೆ ವಿವರಗಳನ್ನು ಸ್ಕ್ಯಾನ್ ಮಾಡುವಾಗ ಪೊಲೀಸರು ಗಜಾನನನ ಸಂಖ್ಯೆಯನ್ನು ಪತ್ತೆಹಚ್ಚಿದರು ಮತ್ತು ಅವನ ಸ್ನೇಹಿತ ಆಕಾಶನನ್ನು ತಲುಪುವಲ್ಲಿ ಯಶಸ್ವಿಯಾದರು. ವಿಚಾರಣೆ ವೇಳೆ ಆಕಾಶ್ ಮತ್ತು ಸಹಚರರು ಸೇರಿ ಈ ಕೃತ್ಯ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.

Leave A Reply

Your email address will not be published.