Murder case: ಪತ್ನಿಯನ್ನು ಮಂಚಕ್ಕೆ ಕರೆದ ಗಂಡ: ಒಪ್ಪದ ಪತ್ನಿಯನ್ನು ಕೊಚ್ಚಿ ಕೊಲೆಗೈದ ಪತಿ!

Murder case: ಕ್ಷಣ ಕಾಲದ ಸುಖಕ್ಕಾಗಿ ಮನುಷ್ಯ ಏನು ಬೇಕಾದರೂ ಮಾಡಬಲ್ಲ ಅನ್ನೋದಕ್ಕೆ ಇದೊಂದು ಉದಾಹರಣೆ ಆಗಿದೆ. ಹೌದು, ಇಲ್ಲೊಬ್ಬ ಪತ್ನಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಕ್ಕೆ ಆಕೆಯನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಸೇಡಂ (Sedam) ತಾಲೂಕಿನ ಬಟಗೇರಾ (Batgera) ಗ್ರಾಮದಲ್ಲಿ ನಡೆದಿದೆ.
ಬೆಟಗೇರ ಗ್ರಾಮದ ನಿವಾಸಿ ನಾಗಮ್ಮ ಪತಿ ಶೇಖಪ್ಪನಿಂದ ಕೊಲೆ ಮಾಡಿ, ಹತ್ಯೆ ಮಾಡಿ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ತಾನಾಗಿಯೇ ಸರೆಂಡರ್ ಆಗಿದ್ದಾನೆ.
ಪೊಲೀಸರು ತನಿಖೆ ನಡೆಸಿದಾಗ, ಶೇಖಪ್ಪ ರಾತ್ರಿ ಎರಡು ಬಾರಿ ಲೈಂಗಿಕ ಕ್ರಿಯೆ ನಡೆಸೋಣ ಎಂದು ಒತ್ತಾಯ ಮಾಡಿದ್ದ. ಆದರೆ ಎರಡೂ ಬಾರಿಯೂ ಪತ್ನಿ ನಿರಾಕರಿಸಿದ್ದು, ಬಾಯಿಗೆ ಬಂದಂತೆ ಪತಿಯನ್ನು ನಿಂದಿಸಿದ್ದಾಳೆ. ಇದರಿಂದ ಕೋಪಗೊಂಡ ಶೇಖಪ್ಪ ನಿನ್ನನ್ನು ಕೊಚ್ಚಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದ. ಈ ವೇಳೆ ಕೊಚ್ಚಿ ಹಾಕು ನೋಡೋಣ ಎಂದು ನಾಗಮ್ಮ ಹೇಳಿದ್ದು, ಇದರಿಂದ ಮತ್ತೇ ಕುಪಿತಗೊಂಡ ಕುಡುಕನಾಗಿರುವ ಶೇಖಪ್ಪ ಪತ್ನಿಯನ್ನು ಹಗ್ಗದಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಸದ್ಯ ಮದ್ಯ ನಶೆಯಲ್ಲಿ ಇದ್ದ ಶೇಕಪ್ಪ, ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಕೊಲೆ ಮಾಡಿರುವುದಾಗಿ ಸದ್ಯ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ (Murder case)ದಾಖಲು ಮಾಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.