MUDA Case: ನನಗೆ ಸ್ನೇಹಮಹಿ ಕೃಷ್ಣ ಯಾರು ಎಂಬುದೇ ಗೊತ್ತಿಲ್ಲ – ಸಿಎಂ ಸಿದ್ದರಾಮಯ್ಯ

Share the Article

MUDA Case: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ ಯಾರೆಂದು ಇದೀಗ ಇಡೀ ರಾಜ್ಯಕ್ಕೆ ತಿಳಿದಿದೆ. ಆದರೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೆಡ್ಡ ತೋಡಿದ್ದ ಈ ಕೃಷ್ಣ ಯಾರೆಂದು ಈವರೆಗೂ ತಿಳಿದಿಲ್ಲವಂತೆ. ನಾನು ಇವತ್ತಿನವರೆಗೂ ಅವರನ್ನ ನೋಡಿಯೇ ಇಲ್ಲ ಎಂದು ಅಚ್ಚರಿಯ ಹೇಳಿಕೆಯನ್ನು ಇಂದು ಮೈಸೂರಿನಲ್ಲಿ ಸಿಎಂ ಹೇಳಿದ್ದಾರೆ.

ಅವರ ಮೇಲೆ ಏನೇನೂ ಕೇಸ್‌ಗಳಿದೆ ಅಂತೆ. ಅದರ ಬಗ್ಗೆ ಕೂಡ ನನಗೆ ಗೊತ್ತಿಲ್ಲ. ಅವರು ಇಡಿಗೆ ಕೇಸ್ ಕೊಟ್ಟಿರಬಹುದು. ಹಾಗಂತ ಕೇಸ್ ಕೊಟ್ಟ ತಕ್ಷಣ ಅದು ತನಿಖೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವರು ಕೊಟ್ಟಿದ್ದಾರೆ ಕೊಡಲಿ ಬಿಡಿ ಎಂದರು.

ಈಗ ಮುಡಾ ವಿಚಾರ ನ್ಯಾಯಾಲಯದಲ್ಲಿದೆ, ಇದರ ಬಗ್ಗೆ ಹೆಚ್ಚು ಕಾಮೆಂಟ್ ಮಾಡುವುದಿಲ್ಲ. ಅಧೆನೆ ಇದ್ದರು ಕಾನೂನು ಪ್ರಕಾರ ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Leave A Reply