Flush Button: ಟಾಯ್ಲೆಟ್ ಕಮೋಡ್ನಲ್ಲಿ 2 ಫ್ಲಶ್ ಬಟನ್ಗಳು ಏಕಿರುತ್ತವೆ? ಇದುವರೆಗೂ ಯಾರೂ ತಿಳಿಯದ ಸತ್ಯವಿದು, ಇನ್ನಾದರೂ ಈ ತಪ್ಪು ಮಾಡಬೇಡಿ !!
Flush Button : ಇಂದು ಬಹುತೇಕ ಕಡೆಗಳಲ್ಲಿ ಪಾಶ್ಚಿಮಾತ್ಯ ಶೈಲಿಯ ಶೌಚಾಲಯಗಳು ಕಾಮನ್ ಆಗಿವೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಕಟ್ಟಿರುವ ಹೊಸ ಮನೆಗಳಲ್ಲಿ ಹಾಗೂ ಅಪಾರ್ಟ್ಮೆಂಟ್ಗಳಲ್ಲಿ ವೆಸ್ಟರ್ನ್ ಟಾಯ್ಲೆಟ್ ಅಥವಾ ಪಾಶ್ಚಿಮಾತ್ಯ ಶೌಚಾಲಯಗಳು ಸಾಮಾನ್ಯವಾಗಿರುತ್ತವೆ. ಬಹಳಷ್ಟು ಮನೆಗಳಲ್ಲಿ ಭಾರತೀಯ ಶೈಲಿಯ ಶೌಚಾಲಯ ಇರೋದೇ ಇಲ್ಲ ಅನ್ನೋದೂ ನಿಜ.
ಅಂದಹಾಗೆ ಟಾಯ್ಲೆಟ್ ಕಮೋಡ್ಗಳಿಗೆ ಫ್ಲಶ್ ಸಿಸ್ಟಮ್ಗಳು(Flush System) ಈಗ ಕ್ರಮೇಣ ಡ್ಯುಯಲ್-ಬಟನ್ ಫ್ಲಶ್ ಸಿಸ್ಟಮ್ಗಳಾಗಿ ಬದಲಾಗುತ್ತಿವೆ. ಈ ಫ್ಲಶ್ಗಳು ಎರಡು ಬಟನ್ಗಳನ್ನು ಹೊಂದಿರುತ್ತವೆ. ಯಾವ ಕಾರಣಕ್ಕಾಗಿ 2 ಬಟನ್ಗಳನ್ನು ಅಳವಡಿಸಲಾಗಿದೆ ಗೊತ್ತಾ? ಹೆಚ್ಚಿನವರು, ಹೆಚ್ಚಿನವರು ಎಂದೇನು ಅಲ್ಲ ಎಲ್ಲರೂ ಕೂಡ ಮಲಮೂತ್ರ ವಿಸರ್ಜನೆ ಆದಾಗ ಈ ಎರಡೂ ಬಟನ್ ಗಳನ್ನು ಪ್ರೆಸ್ ಮಾಡುತ್ತಾರೆ. ಆದರೆ ಈ ಎರಡು ಬಟನ್ ಇರುವುದು ಬೇರೆ ಬೇರೆ ಕಾರಣಗಳಿಗಾಗಿ. ಇದು ಯಾರಿಗೂ ತಿಳಿಯದ ವಿಚಾರ ಹಾಗಿದ್ರೆ ಅದನ್ನು ಸರಿಯಾಗಿ ಬಳಸುವುದು ಹೇಗೆ? ಅನ್ನೋದನ್ನು ತಿಳಿದುಕೊಳ್ಳುವುದು ಮುಖ್ಯ.
ಫ್ಲಶ್ನಲ್ಲಿ ನೀರು ತುಂಬಿರುತ್ತದೆ. ಫ್ಲಶ್ ಮೇಲೆ ಎರಡು ಬಟನ್ಗಳಿರುತ್ತವೆ. ಟಾಯ್ಲೆಟ್ ಫ್ಲಶ್ನಲ್ಲಿರುವ ಒಂದು ಬಟನ್ ಚಿಕ್ಕದಾಗಿದೆ ಮತ್ತು ಇನ್ನೊಂದು ದೊಡ್ಡದಾಗಿದೆ ಎಂದು ನೀವು ಗಮನಿಸಿರಬಹುದು. ಕೆಲವರು ಎರಡೂ ಬಟನ್ಗಳನ್ನು ಏಕಕಾಲದಲ್ಲಿ ಒತ್ತುತ್ತಾರೆ. ಕೆಲವರು ಒಂದು ಸಮಯದಲ್ಲಿ ಒಂದನ್ನು ಮಾತ್ರ ಒತ್ತುತ್ತಾರೆ. ಎರಡನ್ನೂ ಒತ್ತುವುದರಿಂದ ಹೆಚ್ಚಿನ ನೀರು ಬಿಡುಗಡೆಯಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ದೊಡ್ಡ ಬಟನ್ ಒತ್ತುವುದರಿಂದ ಒಮ್ಮೆಗೆ 5-7 ಲೀಟರ್ ನೀರು ಬಿಡುಗಡೆಯಾಗುತ್ತದೆ. ಸಣ್ಣ ಒತ್ತಿದಾಗ ಕೇವಲ ಮೂರರಿಂದ ನಾಲ್ಕು ಲೀಟರ್ ನೀರು ಮಾತ್ರ ಕಮೋಡ್ಗೆ ಹೋಗುತ್ತದೆ.
ಅಂದರೆ ನೀವು ಮೂತ್ರ ವಿಸರ್ಜಿಸಲು ಹೋದಾಗ ಸಣ್ಣ ಬಟನ್ ಅನ್ನು ಬಳಸಬೇಕು, ಏಕೆಂದರೆ ಅದನ್ನು ಹೊರಹಾಕಲು ಹೆಚ್ಚು ನೀರು ಅಗತ್ಯವಿಲ್ಲ. ಅದೇ ಸಮಯದಲ್ಲಿ, ಮಲ ವಿಸರ್ಜನೆ ಮಾಡಿದಾಗ ದೊಡ್ಡ ಬಟನ್ ಒತ್ತಬೇಕು. ಏಕೆಂದರೆ ಇದರ ಸ್ವಚ್ಛತೆಗೆ ಹೆಚ್ಚಿನ ನೀರು ಬೇಕಾಗುತ್ತದೆ. ಆದರೆ, ಹೆಚ್ಚಿನ ಜನರು ಇದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅನೇಕ ಬಾರಿ ಎರಡೂ ಬಟನ್ಗಳನ್ನು ಒತ್ತುತ್ತಾರೆ.
ಹೀಗೆ ಮಾಡುವುದರಿಂದ ಹೆಚ್ಚಿನ ನೀರು ಹೊರಬರುವುದಿಲ್ಲ. ಸಹಜವಾಗಿ, ಫ್ಲಶ್ ಟ್ಯಾಂಕ್ ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಎರಡೂ ಬಟನ್ಗಳನ್ನು ಪದೇ ಪದೇ ಒತ್ತುವುದರಿಂದ ಅವು ಹಾಳಾಗಬಹುದು. ಹಾಗಾಗಿ ಒಂದು ಸಮಯದಲ್ಲಿ ಒಂದು ಬಟನ್ ಒತ್ತುವುದು ಉತ್ತಮ. ಯಾವಾಗ ಯಾವ ಬಟನ್ ಒತ್ತಬೇಕು ಎನ್ನುವುದು ನೆನಪಿನಲ್ಲಿರಲಿ! ಅಲ್ಲದೆ ಸಿಂಗಲ್ ಫ್ಲಶ್ ಸಿಸ್ಟಮ್ಗಳಿಗೆ ಹೋಲಿಸಿದರೆ ಮನೆಗಳಲ್ಲಿ ಡ್ಯುಯಲ್ ಫ್ಲಶಿಂಗ್ ಅನ್ನು ಅಳವಡಿಸುವ ಮೂಲಕ ವಾರ್ಷಿಕವಾಗಿ 20,000 ಲೀಟರ್ ನೀರನ್ನು ಸಂರಕ್ಷಿಸಲು ಸಾಧ್ಯವಿದೆ ಎಂದು ಅಧ್ಯಯನಗಳು ತೋರಿಸುತ್ತವೆ
35zfh8