Never wrestle with pigs: ಎಚ್ಡಿಕೆ ಹಂದಿ ಪದ ಬಳಕೆಗೆ ಕ್ಷಮೆಯಾಚಿಸಿ: ತಪ್ಪಿದರೆ ಕೇಡರ್ ಕಂಟ್ರೋಲ್ ಮೂಲಕ ಕ್ರಮ – ಅಧಿಕಾರಿಗೆ ಪ್ರಲ್ಹಾದ ಜೋಶಿ ಎಚ್ಚರಿಕೆ

Never wrestle with pigs: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ “ಹಂದಿ” ಪದ ಬಳಸಿ ಅವಹೇಳನ ಮಾಡಿದ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ವಿರುದ್ಧ ಕೇಡರ್ ಕಂಟ್ರೋಲ್ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿ ಎಚ್ಚರಿಸಿದ್ದಾರೆ.

 

ಗೌರವಯುತ ಪದ ಬಳಕೆ ಮಾಡುವುದು ಅಧಿಕಾರಿಯ ಕರ್ತವ್ಯ. ಆದರೆ, ಅದೇ ಅಧಿಕಾರಿಯೋರ್ವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ‌ ಏಕವಚನದಲ್ಲಿ ಮಾತನಾಡಿರುವುದು ಸರಿಯಲ್ಲ. ನಾನು ನೋಡಿದ ಹಾಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಏಕವಚನದಲ್ಲಿ ಮಾತನಾಡಿಲ್ಲ.

ಆದರೆ, ಅಧಿಕಾರಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಇದು ಅಧಿಕಾರಿಯ ಅಹಂಕಾರಿಯ ಪರಮಾವಧಿ‌. ಇದನ್ನು ನಾನು ಖಂಡಿಸುತ್ತೇನೆ. ಆ ಅಧಿಕಾರಿಗೆ ಜ್ಞಾನ ಇದ್ದರೆ ಕೂಡಲೆ ಕ್ಷಮಾಪಣೆ ಯಾಚಿಸಬೇಕು. ಅಧಿಕಾರಿಯ ಇಂತಹ ಹೇಳಿಕೆಯನ್ನು ಯಾವ ಕಾಲಕ್ಕೂ ಒಪ್ಪಲು ಸಾಧ್ಯವಿಲ್ಲ. ಈ ಸರ್ಕಾರವೇ ಖಾಯಂ ಅಧಿಕಾರದಲ್ಲಿ ಇರುತ್ತದೆ ಎನ್ನುವ ‌ಭ್ರಮೆಯಲ್ಲಿದ್ದರೆ‌ ಮುಂದೆ ಆ ಅಧಿಕಾರಿಯು ಬೆಲೆ ತೆರಬೇಕಾಗುತ್ತದೆ.

ಓರ್ವ ಅಧಿಕಾರಿಯು ಕೇಂದ್ರ ಸಚಿವರ ಬಗ್ಗೆ ಅತ್ಯಂತ ಕೆಟ್ಟ ಭಾಷೆ ಬಳಕೆ ಮಾಡಿದಿರುವುದು ರಾಜ್ಯದ ಆಡಳಿತಕ್ಕೆ ಹಿಡಿದ ಕೈಗನ್ನಡಿ. ರಾಜ್ಯದಲ್ಲಿ ಆಡಳಿತವೇ ಇಲ್ಲ. ಸರ್ಕಾರ ಯಾವುದಕ್ಕೂ ಸಹಕರಿಸುತ್ತಿಲ್ಲ. ಎಂಥೆಂಥ ಅಧಿಕಾರಿಗಳನ್ನು ಬೆಳೆಸುತ್ತಿದೆ ನೋಡಿ ಕಾಂಗ್ರೆಸ್ ಸರ್ಕಾರ ಎಂದರು.

ಹಿಂದೆ ಸಿದ್ದರಾಮಯ್ಯ ರಾಜ್ಯಪಾಲರ ಬಗ್ಗೆ ಮಾತನಾಡಿರುವುದು ವೈರಲ್ ಆಗಿದೆ. ನಿಮಗೆ ಮಾನ ಮರ್ಯಾದೆ ‌ಇಲ್ವಾ, ನ್ಯಾಯಾಲಯದ ಆದೇಶ ಕೊಟ್ಟ ಮೇಲೆ ನಾವು ಯಾವತ್ತೂ ಕಾಂಗ್ರೆಸ್ ತರಹ ವರ್ತನೆ ಮಾಡಿಲ್ಲ. ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ದಸರಾ ಉದ್ಘಾಟನೆಯಲ್ಲ, ಒಂದೇ ಒಂದು ಸಹಿ ಕೂಡಾ ಮಾಡಬಾರದು.

ಸಿದ್ದರಾಮಯ್ಯ ಸೋನಿಯಾ ಗಾಂಧಿ‌ ಹಾಗೂ ರಾಹುಲ್ ಗಾಂಧಿ ಅವರಿಗೂ ನೀವು ಬೇಲ್ ಮೇಲೆ ಇದೀರಿ ಎಂದು ಹೇಳಿದ್ದಾರೆ. ಸ್ನೇಹಮಯಿ ಕೃಷ್ಣ ವಿರುದ್ದವೂ ದೂರು ನೀಡಿರುವುದು. ಇದೆಲ್ಲಾ ಬ್ಲಾಕ್ ಮೇಲ್ ತಂತ್ರ ಎಂದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

1 Comment
  1. kalorifer sobası says

    Keep up the fantastic work!

Leave A Reply

Your email address will not be published.