Allegation on ADGP: ಕುಮಾರಸ್ವಾಮಿಯವರನ್ನು ಹಂದಿಗೆ ಹೋಲಿಸಿದ ಎಡಿಜಿಪಿ: ಪೊಲೀಸ್‌ ಅಧಿಕಾರಿ ಹೀಗೆ ಹೇಳಲು ಕಾರಣವೇನು?

Share the Article

Allegation on ADGP: ಕುಮಾರಸ್ವಾಮಿ(MP H D Kumaraswami) ‘ಜಾಮೀನಿನ ಮೇಲೆ ಹೊರಗೆ ಇರುವ ಆರೋಪಿ. ಅಂತಹಾ ಎಚ್‌.ಡಿ. ಕುಮಾರಸ್ವಾಮಿ ನನ್ನ ವಿರುದ್ಧ ಅವಹೇಳನಕಾರಿ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಜತೆಗೆ ಬೆದರಿಕೆಯನ್ನೂ ಹಾಕಿದ್ದಾರೆ’ ಎಂದು ಲೋಕಾಯುಕ್ತ(Lokayukta) ವಿಶೇಷ ತನಿಖಾ ತಂಡದ ಎಡಿಜಿಪಿ ಎಂ.ಚಂದ್ರಶೇಖರ್(ADGP M Chandrashekar) ತಮ್ಮ ಸಹೋದ್ಯೋಗಿಗಳಿಗೆ ಶನಿವಾರ ಪತ್ರ(Letter) ಬರೆದಿದ್ದಾರೆ. ಆ ಪತ್ರ ಇದೀಗ ಭಾರೀ ಸುದ್ದಿಯಾಗುತ್ತಿದೆ. ಈ ಪತ್ರದಲ್ಲಿ ಹಂದಿಗಳೊಂದಿಗೆ(Pig) ಎಂದಿಗೂ ಗುದ್ದಾಡದಿರಿ ಎಂದು ಕುಮಾರಸ್ವಾಮಿಯವರನ್ನು ಹಂದಿಗೆ ಹೋಲಿಸಿದ್ದಾರೆ ಎಡಿಜಿಪಿ.

ನಿನ್ನೆ ಪತ್ರಿಕಾ ಗೋಷ್ಠಿ ಕರೆದ ಸಂಸದ ಹೆಚ್‌ ಡಿ ಕುಮಾರಸ್ವಾಮಿ ರಾಜ್ಯಪಾಲರ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ತನಿಖೆಗೆ ಅನುಮತಿ ಕೋರಿದ್ದ ಐಜಿಪಿ ಚಂದ್ರಶೇಖರ್ ಮೇಲೆ ಕೆಂಡಕಾರಿದ್ದರು. ಅಲ್ಲದೆ ಈ ಅಧಿಕಾರಿ ಸರಣಿ ಅಪರಾಧ, ಅಕ್ರಮಗಳಲ್ಲಿ ಶಾಮೀಲಾಗಿದ್ದಾರೆ. ರಾಜಕಾಲುವೆ ಮೇಲೆ 38 ಮಹಡಿ ನಿರ್ಮಾಣ ಮಾಡಿದ್ದಲ್ಲದೆ, ಅಧೀನ ಅಧಿಕಾರಿಗೆ 20 ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದಾಖಲೆ ಸಮೇತ ಗಂಭೀರ ಆರೋಪ ಮಾಡಿದ್ದರು.

ಇದರಿಂದ ಕುಪಿತಗೊಂಡ ಎಡಿಜಿಪಿ ಎಂ.ಚಂದ್ರಶೇಖರ್, ಹೆಚ್ ಡಿ ಕುಮಾರಸ್ವಾಮಿ ಮಾಡಿದ ಆರೋಪಗಳನ್ನು ಅಲ್ಲಗೆಳೆದಿದ್ದು, ಹೆಚ್‌ಡಿಕೆ ಎಷ್ಟೇ ಪ್ರಭಾವಿಯಾಗಿದ್ದರೂ ಅವರು ಆರೋಪಿಯೇ. ನಿಷ್ಪಕ್ಷಪಾತ ತನಿಖೆಯಿಂದ ನಮ್ಮನ್ನು ಹಿಮ್ಮೆಟ್ಟಿಸಲು ಈ ತಂತ್ರವನ್ನು ಅವರು ಅನುಸರಿಸುತ್ತಿದ್ದಾರೆ. ನಿಮ್ಮ ಮೇಲೆ ಇಂತಹ ಬಾಹ್ಯ ಒತ್ತಡಗಳು ಬರದೇ ಇರುವ ರೀತಿಯಲ್ಲಿ ಎಚ್ಚರವಹಿಸುತ್ತೇನೆ’ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ. ಜೊತೆಗೆ ಕುಮಾರಸ್ವಾಮಿಯವರನ್ನು ಅವರು ಹಂದಿಗೆ ಹೋಲಿಸಿದ್ದಾರೆ.

“ಹಂದಿಗಳೊಂದಿಗೆ ಎಂದಿಗೂ ಗುದ್ದಾಡಬೇಡಿ. ಗುದ್ದಾಡಿದರೆ ಹೊಲಸು ನಿಮಗೂ ಮೆತ್ತಿಕೊಳ್ಳುತ್ತದೆ, ಆಯಾ ಹೊಲಸು ಹಂದಿಗೂ ಮೆತ್ತಿಕೊಳ್ಳುತ್ತದೆ. ಆದ್ರೆ ಹಂದಿಗೆ ಆಯಾ ಹೊಲಸು ಇಷ್ಟವಾಗುತ್ತದೆ” ಎಂದು ಜಾರ್ಜ್ ಬರ್ನಾರ್ಡ್ ಶಾ ಮಾತನ್ನು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ. “‘ಕರ್ತವ್ಯ ನಿರ್ವಹಣೆ ಯಲ್ಲಿ ಅಪರಾಧಿಗಳು, ಆರೋಪಿಗಳನ್ನು ಎದುರು ಹಾಕಿಕೊಳ್ಳದೇ ಇರಲು ಸಾಧ್ಯವಿಲ್ಲ. ಆದರೆ, ನಾವು ನಮ್ಮ ಹಾದಿಯನ್ನು ಬಿಡಬಾರದು’ ಎಂದು ಅವರು ಅಧಿಕಾರಿಗಳಿಗೆ ತಿಳಿ ಹೇಳಿದ್ದಾರೆ.

Leave A Reply

Your email address will not be published.