Shocking news: ಹೆಂಡತಿಗೆ ಒಂದೇ ಒಂದು ಸುಳ್ಳು ಹೇಳಿ ಗುಟ್ಟಾಗಿ ಐದು ಮಹಿಳೆಯರನ್ನ ಮದುವೆಯಾದ ಕಿಲಾಡಿ ಗಂಡ!

Shocking news: ಇಲ್ಲೊಬ್ಬ ಕಿಲಾಡಿ ಮದುವೆ ಆಗಿ, ಮುದ್ದಾದ ಹೆಂಡತಿ ಮನೆಯಲ್ಲಿ ಇದ್ದರು ಸಹ ಆಕೆಗೆ ಪ್ರತೀ ಬಾರಿ ಬಿಸಿನೆಸ್ ಟ್ರಿಪ್ ಎಂದು ಸುಳ್ಳು ಹೇಳಿ ಐದು ಮಹಿಳೆಯರನ್ನು ವಿವಾಹವಾದ ಘಟನೆ ಹೆಂಡತಿಗೆ ತಡವಾಗಿ ಬೆಳಕಿಗೆ ಬಂದಿದೆ.

ಸಿಂಗ್‌ ಶೇಖರ್‌ ಎಂಬಾತ 2018ರಲ್ಲಿ ಮಮತಾ ಎಂಬಾಕೆಯನ್ನು ಮದುವೆಯಾಗಿದ್ದ. ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಈತ ವಿವಾಹದ ಬಳಿಕವೂ ಇತರೆ ಐವರು ಮಹಿಳೆಯರನ್ನು ಗೌಪ್ಯವಾಗಿ ವಿವಾಹವಾದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಆದರೆ ಈ ಕೃತ್ಯಕ್ಕೆ ಆತನ ಕುಟುಂಬ ಸದಸ್ಯರೇ ಬೆಂಬಲವಾಗಿ ನಿಂತಿದ್ದಾರೆ ಎನ್ನುವುದೇ ವಿಶೇಷ.

ಮುಖ್ಯವಾಗಿ ಮದುವೆಯಾದ ಬಳಿಕ ಸಿಂಗ್‌, ಕೆಲಸದ ಕಾರಣ ಹೇಳಿ ಪದೇ ಪದೇ, ಮನೆ ಬಿಟ್ಟು ಹೋಗುತ್ತಿದ್ದ. ಆದ್ರೆ ಸಂಶಯ ಬಂದು ಮಮತಾ ಈ ಬಗ್ಗೆ ಪರಿಶೀಲಿಸಿ, ಆತನನ್ನು ಹಿಂಬಾಲಿಸಿದಾಗ ಪತಿ, ತಾನು ಅವಿವಾಹಿತ ಎಂದು ಹೇಳಿ ಇನ್ನೂ ಐವರು ಮಹಿಳೆಯರನ್ನು ಮದುವೆಯಾಗಿದ್ದ ಎಂಬ ಆಘಾತಕಾರಿ ವಿಷಯ (Shocking news) ಪತ್ನಿಯ ಗಮನಕ್ಕೆ ಬಂದಿದೆ.

ಇದೀಗ ಈ ಕುರಿತು ಮಮತಾ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಸಿಂಗ್‌, ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇದೆ ಎಂದು ಮಮತಾ ದೂರಿನಲ್ಲಿ ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಆತನ ಪಾಸ್ಪೋರ್ಟ್‌ ವಶಪಡಿಸಿಕೊಳ್ಳಲಾಗಿದೆ. ಅದಲ್ಲದೆ ಪ್ರಾಥಮಿಕ ತನಿಖೆ ವೇಳೆ ಆತನ ಈ ಕೃತ್ಯಕ್ಕೆ ಆತನ ಕುಟುಂಬವೂ ಸಹಕರಿಸಿದ್ದು ಗೊತ್ತಾಗಿದೆ. ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಪೊಲೀಸರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.