Israel sheep blasts: ಲೆಬನಾನ ಮೇಲೆ ಪ್ರತಿಕಾರ ತೀರಿಸಲು ಇಸ್ರೇಲ್ ನಿಂದ ಕುರಿಗಳ ಸ್ಪೋಟ; ಏನಿದು ಕುರಿಗಳ ಸ್ಫೋಟ?!

Israel sheep blasts: ಲೆಬನಾನ ಮೇಲೆ ಈಗಾಗಲೇ ಪೇಜರ್, ವಾಕಿಟಾಕಿ, ರೇಡಿಯೋ ಸೆಟ್, ಸೋಲಾರ್ ಸಿಸ್ಟಂ ಬಳಸಿ ಸ್ಫೋಟ ನಡೆಸಿದ್ದು ಅಲ್ಲದೇ ಇದೀಗ ಇಸ್ರೇಲ್‌ನಿಂದ ಲೆಬನಾನಲ್ಲಿ ಕುರಿಗಳ ಸ್ಫೋಟ (Israel sheep blasts) ನಡೆಸಲಾಗಿದೆ. ಈ ಪರಿಣಾಮ ಭಾರೀ ಪ್ರಮಾಣದ ಸಾವು ನೋವು ಸಂಭವಿಸಿದೆ.

ಹೌದು, ಹಮಾಸ್ ಉಗ್ರರಿಗೆ ಹಿಜ್ಜುಲ್ಲಾ ಉಗ್ರರ ನೆರವನ್ನು ಖಂಡಿಸಿ ಬುಧವಾರ ಮಾತನಾಡಿದ್ದ ಇಸ್ರೇಲಿನ ರಕ್ಷಣಾ ಸಚಿವ, ‘ನಾವು ಏನು ಬೇಕಾದರೂ ಮಾಡಬಲ್ಲೆವು. ನಮ್ಮ ಬಳಿ ಬಲಿಷ್ಠ ಸಾಮರ್ಥ್ಯ ಇದೆ. ನಾವು ಸರಿಯಾಗಿ ಏಟು ನೀಡಿದರೆ ಹಿಜ್ಜುಲ್ಲಾಗಳು ಊಟ ಮಾಡಲೂ, ಶೌಚಾಲಯಕ್ಕೆ ಹೋಗಲು ಯೋಚಿಸಬೇಕಾಗುತ್ತದೆ’ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದರು. ಇದೀಗ ಈ ಹೇಳಿಕೆ ನೀಡಿದ ಬೆನ್ನಲ್ಲೇ ಕುರಿ ಬಾಂಬ್ ಸ್ಫೋಟ ಮಾಡಲಾಗಿದೆ. ಆದರೆ ಈ ಕುರಿತು ಲೆಬನಾನ್ ಸರ್ಕಾರವಾಗಲೀ, ಹಿಜ್ಜುಲ್ಲಾ ಉಗ್ರರಾಗಲೀ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮಾಹಿತಿ ಪ್ರಕಾರ, ಹಿಜ್ಜುಲ್ಲಾಗಳ ಮೇಲೆ ದಾಳಿಗೆ ಈ ಮೊದಲೇ ಯೋಜಿಸಿದ್ದ ಇಸ್ರೇಲಿ ಸೇನಾಪಡೆ, ಹಿಜ್ಜುಲ್ಲಾಗಳು ಬಳಸುವ ಕುರಿಗಳನ್ನು ಅಪಹರಿಸಿ ಅವುಗಳ ಗುದನಾಳದಲ್ಲಿ ಸ್ಫೋಟಕಗಳನ್ನು ಅಡಗಿಸಿದ್ದರು ಎನ್ನಲಾಗಿದೆ. ಬಳಿಕ ಗುರುವಾರ ಹಿಜ್ಜುಲ್ಲಾ ಉಗ್ರರು ಕುರಿಗಳನ್ನು ಮಂದೆ ಮದ್ಯೆ ಏಕಕಾಲಕ್ಕೆ ಸ್ಪೋಟ ನಡೆಸಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

1 Comment
  1. eyüp elektrikçi says

    eyüp elektrikçi SEO optimizasyonu ile web sitemiz daha fazla ziyaretçi çekmeye başladı. https://royalelektrik.com/

Leave A Reply

Your email address will not be published.