Alto Car: 50 ಲಕ್ಷಕ್ಕೂ ಅಧಿಕ ಕುಟುಂಬಗಳು ಖರೀದಿಸಿದ ವಿಶ್ವದ ಏಕೈಕ ಕಾರು ಇದು !! ಪಕ್ಕಾ ಮೈಲೇಜ್, ಫ್ರೆಂಡ್ಲಿ ಬಜೆಟ್

Alto Car: ಭಾರತವು ಆಟೋಮೊಬೈಲ್ ಕ್ಷೇತ್ರದಲ್ಲಿ ಇಂದು ಮುಂಚೂಣಿಯಲ್ಲಿ ಮುನ್ನುಗ್ಗುತ್ತಿದೆ. ಐಶಾರಾಮಿ ಕಾರು ಕಂಪೆನಿಗಳು ಕೂಡ ಇಂದು ಭಾರತದತ್ತ ಮುಖ ಮಾಡುತ್ತಿವೆ. ಆದ್ರೆ ಯಾವ ಶ್ರೀಮಂತ ಕಾರುಗಳಿಗೂ ಕೂಡ ನಮ್ಮ ಭಾರತದ ಈ ಒಂದು ಚಿಕ್ಕ ಕಾರಿನ ದಾಖಲೆ ಮುರಿಯಲು ಸಾಧ್ಯವಾಗಿಲ್ಲ.

ದೇಶದ ಹೆಸರಾಂತ ಮತ್ತು ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ಭಾರತದಲ್ಲಿ ಬಿಡುಗಡೆಗೊಳಿಸಿರುವ ಅದೊಂದು ಕಾರಿನ ದಾಖಲೆಯನ್ನು ಇಂದಿಗೂ BMW, ಬೆಂಝ್‌ ಅಂತ ಐಷಾರಾಮಿ ಕಾರಿಗೂ ಹಿಂದಿಕ್ಕಲು ಸಾಧ್ಯವಾಗಿಲ್ಲ. ಹೌದು, ಮಾರುತಿ ಸುಜುಕಿ ಆಲ್ಟೋ, 5 ಮಿಲಿಯನ್ ಯುನಿಟ್‌ಗಳ (50 ಲಕ್ಷ ಕಾರುಗಳ) ಮಾರಾಟದ ಮೈಲಿಗಲ್ಲನ್ನು ದಾಟಿದ ಭಾರತದ ಏಕೈಕ ಕಾರು ಎಂದು ನಿಮಗೆ ತಿಳಿದಿದೆಯೇ? 2000 ರಲ್ಲಿ ಬಿಡುಗಡೆಯಾದ ಜನಪ್ರಿಯ ಹ್ಯಾಚ್ ಬ್ಯಾಕ್ ಇಲ್ಲಿಯವರೆಗೆ ಸುಮಾರು 5.06 ಮಿಲಿಯನ್ ಯುನಿಟ್‌ಗಳ ಮಾರಾಟವನ್ನು ಕಂಡಿದೆ.

ಈ ಮೂಲಕ ಮಾರುತಿ ಸುಜುಕಿಯ ಜನಪ್ರಿಯ ಹ್ಯಾಚ್‌ಬ್ಯಾಕ್‌ ಆಲ್ಟೋ(Alto) ಭಾರತದಲ್ಲಿ 50 ಲಕ್ಷ ಗ್ರಾಹಕರ ಮನೆ ಸೇರುವ ಮೂಲಕ ಮಹತ್ವದ ಮೈಲುಗಲ್ಲನ್ನು ಸಾಧಿಸಿದೆ. ಇದರಿಂದಾಗಿ ಭಾರತೀಯರ ಹೃದಯಕ್ಕೆ ಹತ್ತಿರವಾದ ಕಾರುಗಳಲ್ಲಿ ಇದೂ ಒಂದು ಎಂಬುದು ಸಾಬೀತಾಗಿದೆ.

ಇದು ಟಾಪ್-10 ಕಾರುಗಳ ಪಟ್ಟಿಯಲ್ಲಿ ಇಲ್ಲದಿದ್ದರೂ, ಪ್ರತಿ ತಿಂಗಳು 10 ಸಾವಿರಕ್ಕೂ ಹೆಚ್ಚು ಗ್ರಾಹಕರು ಖರೀದಿಸುತ್ತಾರೆ. ಇದು ಕಂಪನಿಯ ಎಂಟ್ರಿ ಲೆವೆಲ್‌ ಕಾರು ಕೂಡ ಹೌದು. ಇದು ದೇಶದ ಅತ್ಯಂತ ಅಗ್ಗದ ಕಾರು ಕೂಡ ಆಗಿದೆ. ಮೊದಲು ಟಾಟಾ ನ್ಯಾನೊ ಕಡಿಮೆ ದರದ ಕಾರೆಂಬ ಹಿರಿಮೆಗೆ ಪಾತ್ರವಾಗಿತ್ತು. ಆಲ್ಟೋ ಕಾರಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 3.99 ಲಕ್ಷ ರೂ. ಮೊದಲ ಬಾರಿಗೆ ಕಾರು ಖರೀದಿಸುವವರ ಅಚ್ಚುಮೆಚ್ಚಿನ ಆಯ್ಕೆ ಇದಾಗಿದೆ. ಸೆಕೆಂಡ್‌ ಹ್ಯಾಂಡ್‌ ಮಾರುಕಟ್ಟೆಯಲ್ಲೂ ಆಲ್ಟೋಗೆ ಸಾಕಷ್ಟು ಬೇಡಿಕೆಯಿದೆ. ಉತ್ತಮ ಮೈಲೇಜ್‌ ದೊರಕುವ ಕಾರಣಕ್ಕೆ ಹೆಚ್ಚಿನ ಜನರು ಆಲ್ಟೋ ಕಾರು ಖರೀದಿಗೆ ಆದ್ಯತೆ ನೀಡುತ್ತಾರೆ.

ಅಂದಹಾಗೆ ಬಡ ಕುಟುಂಬಗಳಿಂದ ಹಿಡಿದು ಮಧ್ಯಮ ವರ್ಗದವರೆಗೆ ಕೈಗೆಟುಕುವ ದರದಲ್ಲಿ ಸಿಗುವುದರಿಂದ ಹೆಚ್ಚಾಗಿ ಮಾರುತಿ ಆಲ್ಟೋ ಮಾರಾಟವಾಗುತ್ತದೆ. ಯಾವ ಮಟ್ಟಿಗೆ ಅಂದ್ರೆ ಇದು ಎಂದಿಗೂ ಮುರಿಯಲಾಗದ ದಾಖಲೆಯನ್ನು ನಿರ್ಮಿಸಿ ತನ್ನ ಹತ್ತಿರಕ್ಕೂ ಯಾವುದೇ ಬ್ರಾಂಡ್‌ ನಿಲ್ಲದಂತೆ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಒಟ್ಟಿನಲ್ಲಿ ಮಾರುತಿ ಸುಜುಕಿ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ಪ್ರಾಬಲ್ಯ ಉಳಿಸಿಕೊಂಡು ಬಂದಿದೆ.

ಆಲ್ಟೋ ಇತಿಹಾಸ:
ಕಡಿಮೆ ದರಕ್ಕೆ ಫ್ಯಾಮಿಲಿ ಕಾರು ಹುಡುಕುವವರಿಗೆ ಮಾರುತಿ ಆಲ್ಟೋ ಅಚ್ಚುಮೆಚ್ಚಿನ ಆಯ್ಕೆ. ಇದನ್ನು ಮೊದಲು ವಿದೇಶಿ ಮಾರುಕಟ್ಟೆಯಲ್ಲಿ 1979 ರಲ್ಲಿ ಪರಿಚಯಿಸಲಾಯಿತು. 1984ರಲ್ಲಿ 2ನೇ ತಲೆಮಾರಿನ ಮಾದರಿ, 1988ರಲ್ಲಿ 3ನೇ ತಲೆಮಾರಿನ ಮಾದರಿ, 1993ರಲ್ಲಿ 4ನೇ ತಲೆಮಾರಿನ ಮಾದರಿ, 1998ರಲ್ಲಿ 5ನೇ ತಲೆಮಾರಿನ ಮಾದರಿ ಬಿಡುಗಡೆಯಾಗಿತ್ತು. ಇದರ 8 ನೇ ಪೀಳಿಗೆಯು ಪ್ರಸ್ತುತ ಸಾಗರೋತ್ತರ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿದೆ.

1982ರಲ್ಲಿ ಮಾರುತಿ ಮತ್ತು ಸುಜುಕಿ ನಡುವಿನ ಪಾಲುದಾರಿಕೆಯ ನಂತರ ಆಲ್ಟೊ 2000 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದನ್ನು ಭಾರತದಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್ 27, 2000 ರಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಬಿಡುಗಡೆಯಾದ ಆಲ್ಟೋ ಮಾಡೆಲ್‌ ವಿದೇಶಿ ಮಾರುಕಟ್ಟೆಯಲ್ಲಿ ಮಾರಾಟವಾದ 5 ನೇ ತಲೆಮಾರಿನ ಆಲ್ಟೊದಿಂದ ಸ್ಫೂರ್ತಿ ಪಡೆದಿದೆ. ಆಲ್ಟೊದ ಮುಂದಿನ ಪೀಳಿಗೆಯ ಮಾದರಿಯನ್ನು ಅಕ್ಟೋಬರ್ 16, 2012 ರಂದು ಬಿಡುಗಡೆ ಮಾಡಲಾಯಿತು. ಈ ಫ್ಯಾಮಿಲಿ ಹ್ಯಾಚ್‌ಬ್ಯಾಕ್ ಉತ್ತಮ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಆ ಸಮಯದಲ್ಲಿ ಮಾರುಕಟ್ಟೆಯನ್ನು ಅಲ್ಲಾಡಿಸಿತು. ಆಗ ಇದರ ಮೈಲೇಜ್ ಪ್ರತಿ ಲೀಟರ್ ಗೆ 24.7 ಕಿ.ಮೀ. ಇತ್ತು. ಇದು ಗ್ರಾಹಕರನ್ನು ಸೆಳೆಯಿತು.

ಆದರೆ ವಿಷಾದ ಎಂದರೆ ಸದ್ಯ ಆಲ್ಟೋ, ಆಲ್ಟೋ 800 ಮ್ಯಾನಿಫ್ಯಾಕ್ಚರಿಂಗ್ ಅನ್ನು ಕಂಪೆನಿ ನಿಲ್ಲಿಸಿದೆ. ಪ್ರಸ್ತುತ, ಮಾರುತಿ ಸುಜುಕಿ ಆಲ್ಟೋ ಕೆ 10 ಮಾತ್ರ ಮಾರಾಟದಲ್ಲಿದೆ. ಏಪ್ರಿಲ್ 1, 2023 ರಿಂದ ಜಾರಿಗೆ ಬಂದ ಬಿಎಸ್ 6 ಹಂತ – 2 ಮಾನದಂಡಗಳಿಗೆ ಅನುಸಾರವಾಗಿ ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಆದ ಆಲ್ಟೋ 800 ಅನ್ನು ಮಾರ್ಚ್ 2023 ರಲ್ಲಿ ನಿಲ್ಲಿಸಲಾಯಿತು. ಮಾರುತಿ ಸುಜುಕಿ ಆಲ್ಟೋ ಕೆ10 ಪ್ರಸ್ತುತ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.3.99 ಲಕ್ಷದಿಂದ ರೂ.5.96 ಲಕ್ಷಗಳಾಗಿದೆ.

ಆಲ್ಟೋ ಕೆ10 ಬಳಿಕ ಹೆಚ್ಚಿದ ಬೇಡಿಕೆ
2015 ರಲ್ಲಿ ಆಲ್ಟೊ ಹೊಸ, ಶಕ್ತಿಯುತ 1.0 ಲೀಟರ್ ಕೆ10ಬಿ ಎಂಜಿನ್‌ನೊಂದಿಗೆ ಆಗಮಿಸಿತು. ಇದರ ಕಾರ್ಯಕ್ಷಮತೆ, ಇಂಧನ ದಕ್ಷತೆ ಹೆಚ್ಚಿತು. ಆಲ್ಟೊ ಕೆ10 ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಆಲ್ಟೊ ಸಿಎನ್‌ಜಿ ಆಯ್ಕೆಯಲ್ಲಿಯೂ ಲಭ್ಯವಿದೆ. ಇದರ ಮೈಲೇಜ್ ಪ್ರತಿ ಕೆಜಿಗೆ 33 ಕಿಮೀಗಿಂತ ಹೆಚ್ಚು. ಇದರ ಮೈಲೇಜ್ ಈ ವಿಭಾಗದ ಇತರ ಕಾರುಗಳಿಗಿಂತ ಹೆಚ್ಚು. ಇದು ಗ್ಲೋಬಲ್ ಎನ್‌ಕ್ಯಾಪ್‌ನಲ್ಲಿ 2 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ.

Leave A Reply

Your email address will not be published.