Sandalwood: ಕನ್ನಡ ಚಿತ್ರರಂಗಕ್ಕೆ ಯಾವುದೇ ಕಮಿಟಿ ಬೇಡ- ‘ಫೈರ್’ ಸಂಸ್ಥೆ ಚಿತ್ರರಂಗದಲ್ಲ ಎಂದು ಭಾವನಾ ಆಕ್ರೋಶ!

Share the Article

Sandalwood: ಈಗಾಗಲೇ ಮಾಲಿವುಡ್‌ ಚಿತ್ರ ರಂಗದಲ್ಲಿ ಹೇಮಾ ಕಮಿಟಿಯಂತೆ ಮಹಿಳೆಯರ ಸುರಕ್ಷತೆಗಾಗಿ ಸ್ಯಾಂಡಲ್‌ವುಡ್‌ನಲ್ಲಿಯೂ (sandalwood) ಕಮಿಟಿ ರಚಿಸಲು ಇಂದು (ಸೆ.16) ಫಿಲ್ಮ್ ಚೇಂಬರ್ ಸಭೆ ಆಯೋಜಿಸಿತ್ತು, ಆದ್ರೆ ಈ ಸಭೆಯಲ್ಲಿ ಭಾಗಿಯಾದ ಭಾವನಾ ರಾಮಣ್ಣ (Bhavan Ramanna) ಫೈರ್ ಸಂಸ್ಥೆ ವಿರುದ್ಧವಾಗಿ ಮಾತನಾಡಿದ್ದಾರೆ. ಹೌದು, ಹೇಮಾ ಸಮಿತಿ ರೀತಿ ಕನ್ನಡ ಚಿತ್ರರಂಗಕ್ಕೆ ಕಮಿಟಿ ಬೇಡ, ಅಂತಹ ಕಳಂಕ ನಮ್ಮ ಇಂಡಸ್ಟ್ರಿಯಲ್ಲಿ ಕೇಳಿ ಬಂದಿಲ್ಲ ಎಂದಿದ್ದಾರೆ.

ಕಾಸ್ಟಿಂಗ್ ಕೌಚ್‌ ಎಂಬುದು ನಮ್ಮ ಇಂಡಸ್ಟ್ರಿಯಲ್ಲಿ ಇಲ್ಲ, ಹೆಣ್ಣು ಅಂದಾಗ ಸಮಸ್ಯೆಗಳು ಬರೋದು ಸಹಜನೇ, ಸಿನಿಮಾರಂಗ ಅಂದ್ಮೇಲೆ ಅದು ಇದ್ದೇ ಇರುತ್ತೆ. ಉದಾಹರಣೆಗೆ 100 ಮದುವೆಯಲ್ಲಿ 10 ಮದುವೆ ಸಂಬಂಧ ಗಟ್ಟಿಯಾಗಿ ಉಳಿಯುವುದೇ ಹೆಚ್ಚು. ಅದೇ ರೀತಿ ಚಿತ್ರರಂಗದಲ್ಲೂ ಕೆಟ್ಟದ್ದು ಇದೆ ಅಂದರೆ ಅಲ್ಲಿ ಕೆಲಸ ಮಾಡಲು ಹೋಗಬೇಡಿ ಎಂದಿದ್ದಾರೆ.

ಈ ಬಗ್ಗೆ ವಾಣಿಜ್ಯ ಮಂಡಳಿ, ಕಲಾವಿದರ ಸಂಘ, ನಿರ್ಮಾಪಕರ ಸಂಘ ಇದೆ ಅಲ್ಲಿ ಸಮಸ್ಯೆ ಬಂದು ಹೇಳಬಹುದು. ಅದಕ್ಕಾಗಿ ಬೇರೆ ಸಂಘ ಮಾಡಬೇಕು ಅಂತ ಏನಿಲ್ಲ ಎಂದಿದ್ದಾರೆ. ಅದಲ್ಲದೆ `ಫೈರ್’ ಸಂಸ್ಥೆ ಅವರ ಮಾತು ಕೇಳಬೇಡಿ, ಅವರು ಈ ಚಿತ್ರರಂಗದವರೇ ಅಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Leave A Reply