Rahul Gandhi: ರಾಹುಲ್ ಗಾಂಧಿ ನಾಲಿಗೆಯನ್ನು ಕತ್ತರಿಸಿದವ್ರಿಗೆ 11 ಲಕ್ಷ ಬಹುಮಾನ: ಘೋಷಣೆ ಮಾಡಿದ್ಯಾರು ಗೊತ್ತಾ?!

Rahul Gandhi: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯವರ (Rahul Gandhi) ನಾಲಿಗೆಯನ್ನು ಕತ್ತರಿಸುವವರಿಗೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಶಿವಸೇನಾ (Shiv Sena) ಶಾಸಕ ಸಂಜಯ್ ಗಾಯಕ್‍ವಾಡ್ ಹೇಳಿಕೆ ನೀಡಿದ್ದಾರೆ.

 

ಈಗಾಗಲೇ ವಿದೇಶದಲ್ಲಿದ್ದಾಗ ಭಾರತದಲ್ಲಿ ಮೀಸಲಾತಿ ರದ್ದುಪಡಿಸುವ ಕುರಿತು ಹೇಳಿಕೆ ನೀಡಿದ್ದ ರಾಹುಲ್ ಗಾಂಧಿಯನ್ನು, ಇದು ಕಾಂಗ್ರೆಸ್‍ನ ನಿಜವಾದ ಮುಖವನ್ನು ತೆರೆದಿಟ್ಟಿದೆ, ಈ ಹೇಳಿಕೆಯನ್ನು ನಾವು ಬೆಂಬಲಿಸುವುದಿಲ್ಲ ಎಂದು ಮಹಾರಾಷ್ಟ್ರ (Maharashtra) ಬಿಜೆಪಿ (BJP) ಅಧ್ಯಕ್ಷ ಚಂದ್ರಶೇಖರ್ ಬಾವಂಕುಲೆ ಹೇಳಿದ್ದಾರೆ.

ರಾಹುಲ್ ಗಾಂಧಿ ಮೀಸಲಾತಿಯನ್ನು ಕೊನೆಗೊಳಿಸುವ ಕುರಿತು, ರಾಹುಲ್ ಗಾಂಧಿಯವರ ಹೇಳಿಕೆಗಳು ಜನರ ದೊಡ್ಡ ವಿಶ್ವಾಸಘಾತುಕವಾಗಿದೆ. ಮರಾಠರು, ಧಂಗರುಗಳು ಮತ್ತು ಒಬಿಸಿಗಳಂತಹ ಸಮುದಾಯಗಳು ಮೀಸಲಾತಿಗಾಗಿ ಹೋರಾಡುತ್ತಿವೆ. ಆದರೆ ಈ ಮಧ್ಯೆ ಅವರು ಅದರ ಪ್ರಯೋಜನಗಳನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಕಾಂಗ್ರೆಸ್ ದೇಶವನ್ನು 400 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯಲು ಯೋಜಿಸುತ್ತಿದೆ ಎಂದು ಆಕ್ರೋಶ ಗೊಂಡಿದ್ದಾರೆ.

Leave A Reply

Your email address will not be published.