Devara Movie: ‘ದೇವರ’ ಸಿನಿಮಾ ರಿಲೀಸ್ಗೂ ಮುನ್ನ 8 ಕೋಟಿ ಗಳಿಕೆ! ಯಾಕಿಷ್ಟು ಡಿಮ್ಯಾಂಡ್ ಈ ಸಿನಿಮಾಗೆ!?
Devara Movie: ‘ದೇವರ’ ಸಿನಿಮಾ (Devara Movie) ರಿಲೀಸ್ಗೂ ಮುನ್ನ 8 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಹೌದು, ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಸೆಪ್ಟೆಂಬರ್ 27ರಂದು ಬಿಡುಗಡೆ ಅಗಲಿದ್ದು, ಕೊರಟಾಲ ಶಿವ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇದು ಜೂನಿಯರ್ ಎನ್ಟಿಆರ್ ಅವರ 30ನೇ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ಬಾಲಿವುಡ್ನ ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ರಮ್ಯಾ ಕೃಷ್ಣ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ವಿಎಫ್ಎಕ್ಸ್ಗೆ ತಂಡ 140 ಕೋಟಿ ರೂಪಾಯಿ ಖರ್ಚು ಮಾಡಿದೆ. ಆಶ್ಚರ್ಯ ಅಂದರೆ ದೇವರ ಈ ಸಿನಿಮಾ ರಿಲೀಸ್ ಮುನ್ನವೇ ಯಶಸ್ಸು ಕಂಡಿದೆ. ಯಾಕಂದ್ರೆ ಈ ಚಿತ್ರ ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಭರ್ಜರಿ ಗಳಿಕೆ ಮಾಡುತ್ತಿದೆ. ಅಮೆರಿಕದಲ್ಲಿ ಈ ಸಿನಿಮಾ ಈಗಾಗಲೇ 8 ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ.
ಮಾಹಿತಿ ಪ್ರಕಾರ, ತೆಲುಗು ಸಿನಿಮಾಗಳಿಗೆ ಅಮೆರಿಕದಲ್ಲಿ ಭರ್ಜರಿ ಬೇಡಿಕೆ ಇದೆ. ಸಿನಿಮಾ ರಿಲೀಸ್ಗೂ ಕೆಲ ವಾರ ಮೊದಲೇ ಅಮೆರಿಕದ 276 ಲೊಕೇಶನ್ಗಳಲ್ಲಿ ಈ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದ್ದು, ಈಗಾಗಲೇ 32 ಸಾವಿರ ಟಿಕೆಟ್ಗಳು ಮಾರಾಟ ಆಗಿವೆ. ಇದರಿಂದ 8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾ ದಾಖಲೆ ಬರೆದಿದೆ.ಸದ್ಯ ಅಮೆರಿಕದ ಹಾಲಿವುಡ್ ಥಿಯೇಟರ್ನಲ್ಲಿ ಸೆಪ್ಟೆಂಬರ್ 26ರಂದು ‘ದೇವರ’ ಚಿತ್ರದ ವಿಶೇಷ ಶೋ ಆಯೋಜನೆ ಮಾಡಲಾಗಿದೆ.
ಎನ್ಟಿಆರ್ ಅವರ ಸಿನಿಮಾ ಸಾಮಾನ್ಯವಾಗಿ ಜನರ ಮನಸು ಗೆಲ್ಲೋದರಲ್ಲಿ ಸಂಶಯ ಇಲ್ಲ. ಅಂತೆಯೇ ಈಗಾಗಲೇ ಜೂನಿಯರ್ ಎನ್ಟಿಆರ್ ಅವರ ನಟನೆಯ ‘ಆರ್ಆರ್ಆರ್’ ಸಿನಿಮಾ ಆಸ್ಕರ್ ಗೆದ್ದಿದೆ. ಈ ಕಾರಣಕ್ಕೆ ಅವರ ಹೆಸರು ಹಾಲಿವುಡ್ನಲ್ಲಿ ಚಿರಪರಿಚತವಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಅವರ ಈ ಚಿತ್ರದ ಬಗ್ಗೆಯೂ ನಿರೀಕ್ಷೆ ಸೃಷ್ಟಿ ಆಗಿದೆ ಎನ್ನಲಾಗುತ್ತಿದೆ.