Devara Movie: ‘ದೇವರ’ ಸಿನಿಮಾ ರಿಲೀಸ್​ಗೂ ಮುನ್ನ 8 ಕೋಟಿ ಗಳಿಕೆ! ಯಾಕಿಷ್ಟು ಡಿಮ್ಯಾಂಡ್ ಈ ಸಿನಿಮಾಗೆ!?

Devara Movie: ‘ದೇವರ’ ಸಿನಿಮಾ (Devara Movie) ರಿಲೀಸ್​ಗೂ ಮುನ್ನ 8 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಹೌದು, ಜೂನಿಯರ್​ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಸೆಪ್ಟೆಂಬರ್ 27ರಂದು ಬಿಡುಗಡೆ ಅಗಲಿದ್ದು, ಕೊರಟಾಲ ಶಿವ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

 

ಇದು ಜೂನಿಯರ್ ಎನ್​ಟಿಆರ್ ಅವರ 30ನೇ ಸಿನಿಮಾ ಆಗಿದ್ದು, ಈ ಚಿತ್ರದಲ್ಲಿ ಬಾಲಿವುಡ್​ನ ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ರಮ್ಯಾ ಕೃಷ್ಣ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ವಿಎಫ್​ಎಕ್ಸ್​ಗೆ ತಂಡ 140 ಕೋಟಿ ರೂಪಾಯಿ ಖರ್ಚು ಮಾಡಿದೆ. ಆಶ್ಚರ್ಯ ಅಂದರೆ ದೇವರ ಈ ಸಿನಿಮಾ ರಿಲೀಸ್ ಮುನ್ನವೇ ಯಶಸ್ಸು ಕಂಡಿದೆ. ಯಾಕಂದ್ರೆ ಈ ಚಿತ್ರ ಕೇವಲ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಭರ್ಜರಿ ಗಳಿಕೆ ಮಾಡುತ್ತಿದೆ. ಅಮೆರಿಕದಲ್ಲಿ ಈ ಸಿನಿಮಾ ಈಗಾಗಲೇ 8 ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ.

ಮಾಹಿತಿ ಪ್ರಕಾರ, ತೆಲುಗು ಸಿನಿಮಾಗಳಿಗೆ ಅಮೆರಿಕದಲ್ಲಿ ಭರ್ಜರಿ ಬೇಡಿಕೆ ಇದೆ. ಸಿನಿಮಾ ರಿಲೀಸ್​ಗೂ ಕೆಲ ವಾರ ಮೊದಲೇ ಅಮೆರಿಕದ 276 ಲೊಕೇಶನ್​ಗಳಲ್ಲಿ ಈ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಆರಂಭ ಆಗಿದ್ದು, ಈಗಾಗಲೇ 32 ಸಾವಿರ ಟಿಕೆಟ್​ಗಳು ಮಾರಾಟ ಆಗಿವೆ. ಇದರಿಂದ 8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಸಿನಿಮಾ ದಾಖಲೆ ಬರೆದಿದೆ.ಸದ್ಯ ಅಮೆರಿಕದ ಹಾಲಿವುಡ್ ಥಿಯೇಟರ್​ನಲ್ಲಿ ಸೆಪ್ಟೆಂಬರ್ 26ರಂದು ‘ದೇವರ’ ಚಿತ್ರದ ವಿಶೇಷ ಶೋ ಆಯೋಜನೆ ಮಾಡಲಾಗಿದೆ.

ಎನ್​ಟಿಆರ್ ಅವರ ಸಿನಿಮಾ ಸಾಮಾನ್ಯವಾಗಿ ಜನರ ಮನಸು ಗೆಲ್ಲೋದರಲ್ಲಿ ಸಂಶಯ ಇಲ್ಲ. ಅಂತೆಯೇ ಈಗಾಗಲೇ ಜೂನಿಯರ್ ಎನ್​ಟಿಆರ್ ಅವರ ನಟನೆಯ ‘ಆರ್​ಆರ್​ಆರ್’ ಸಿನಿಮಾ ಆಸ್ಕರ್ ಗೆದ್ದಿದೆ. ಈ ಕಾರಣಕ್ಕೆ ಅವರ ಹೆಸರು ಹಾಲಿವುಡ್​ನಲ್ಲಿ ಚಿರಪರಿಚತವಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಅವರ ಈ ಚಿತ್ರದ ಬಗ್ಗೆಯೂ ನಿರೀಕ್ಷೆ ಸೃಷ್ಟಿ ಆಗಿದೆ ಎನ್ನಲಾಗುತ್ತಿದೆ.

1 Comment
  1. Scottie says

    Hey there! Do you know if they make any plugins to assist with SEO?

    I’m trying to get my site to rank for some targeted keywords but
    I’m not seeing very good gains. If you know of any please share.
    Many thanks! You can read similar blog here: Wool product

Leave A Reply

Your email address will not be published.