Varsha Kaveri: ವರುಣ್ ಮೇಲೆ ಯಾಕೆ FIR ಹಾಕಿದೆ ಗೊತ್ತಾ? ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟ ವರ್ಷ!!

Share the Article

Varsha Kaveri: ನಟ ಹಾಗೂ ರೀಲ್ಸ್ ಸ್ಟಾರ್ ಆಗಿರೋ ವರುಣ್ ಆರಾಧ್ಯ(Varun Aradhya) ತನ್ನ ಮಾಜಿ ಪ್ರಿಯತಮೆ ವರ್ಷ ಕಾವೇರಿಯ ಖಾಸಗಿ ಪೊಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ಆತನ ವಿರುದ್ಧ ದೂರು ದಾಖಲಾಗಿತ್ತು. ಆದರೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಿಯತಮೆ ವರ್ಷ ಕಾವೇರಿ(Varsha Kaveri) ಪ್ರತಿಕ್ರಿಯಿಸಿದ್ದು, ತಾನೇಕೆ FIR ಹಾಕಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಹೌದು, ಈ ಬಗ್ಗೆ ಸ್ಪೀಡ್‌ ಪ್ಲಸ್‌ ಕರ್ನಾಟಕ ಯೂಟ್ಯೂಬ್‌ ಚಾನೆಲ್‌ನೊಂದಿಗೆ ಮಾತನಾಡಿದ ವರ್ಷ, ಎಫ್‌ಐಆರ್‌ ಎನ್ನುವುದು ನನ್ನ ಭವಿಷ್ಯಕ್ಕೆ ಯಾವುದೇ ತೊಂದರೆ ಆಗಬಾರದು ಅಂತಾ ನಾನು ತೆಗೆದುಕೊಂಡಿರುವ ಮುನ್ನೆಚ್ಚರಿಕೆ. ನಾನು ಕಾನೂನು ಪ್ರಕಾರವೇ ಹೋಗಬೇಕಿತ್ತು. ಹೀಗಾಗಿ ದೂರು ಕೊಟ್ಟು ಎಫ್‌ಐಆರ್ ಮಾಡಿಸಿದೆ ಎಂದು ಹೇಳಿದ್ದಾರೆ.

ನಾವು ಪ್ರೀತಿಯಲ್ಲಿದ್ದಾಗ ಟ್ರಿಪ್‌ಗೆ ಹೋದಾಗ ಎಲ್ಲಾ ಫೋಟೋ ತೆಗೆದುಕೊಳ್ಳುತ್ತಿದ್ದೆವು. ಆಗ ತೆಗೆದುಕೊಂಡಿರುವ ಫೋಟೋ ಅವರ ಮೊಬೈಲ್‌ನಲ್ಲಿ ಇತ್ತು. ಒಂದು ಸಲ ಸಂಬಂಧ ಬ್ರೇಕ್‌ ಆದ ಮೇಲೆ ಇಬ್ಬರಿಗೂ ಸಂಬಂಧಪಟ್ಟಿದ್ದು ಏನೂ ಇರಬಾರದು. ಸೋಶಿಯಲ್‌ ಮೀಡಿಯಾದಲ್ಲಿ ಸಹ ಎನೂ ಇರಬಾರದು. ಈ ರೀತಿ ಇಬ್ಬರೂ ಒಪ್ಪಿ ಪ್ರತಿಯೊಂದು ಡಿಲೀಟ್‌ ಮಾಡಿದ್ದು, ಹೀಗಾಗಿ ನನ್ನ ಪ್ರೊಫೈಲ್‌ನಲ್ಲಿ ಏನೂ ಇಲ್ಲ. ಆದರೆ ಅವರ ಬಳಿ ಇನ್ನೂ ಇದೆ. ಡಿಲೀಟ್ ಮಾಡಲು ಹೇಳಿದರೂ ಆದು ಆಗಿಲ್ಲಾ. ಫ್ಯಾನ್‌ ಪೇಜ್‌ ಹಾಗೂ ಇತರರು ಅವರ ಪೇಜ್‌ನಿಂದ ವಿಡಿಯೋ ತೆಗೆದುಕೊಂಡು ಹಾಕುತ್ತಿದ್ದರು. ನಾನು ಕೇಳಿದಕ್ಕೆ ಅವರೇ ಹಾಕಿದ್ದಾರೆ ನಾವು ಯಾಕೆ ಹಾಕಬಾರದು ಅಂದರು. ಹಾಗಾಗಿ ಯಾರಿಗೂ ಹೇಳಲಾದೇ ನಾನು ಕಾನೂನು ಕ್ರಮಕ್ಕೆ ಹೋದೆ ಎಂದಿದ್ದಾರೆ.

ಕಾನೂನು ಪ್ರಕಾರ ಹೋಗುವ ಮುಂಚೆ ಅವರ ಗೆಳೆಯರ ಮೂಲಕ ವಿಡಿಯೋಗಳನ್ನು ಡಿಲೀಟ್‌ ಮಾಡಲು ಹೇಳಿದ್ದೇನೆ. ಡಿಲೀಟ್ ಮಾಡಿಸಲು ಈ ರೀತಿ ಮೂರು ಬಾರಿ ಪ್ರಯತ್ನಿಸಿದ್ದೇನೆ. ಮುಂದೆ ನನ್ನ ಭವಿಷ್ಯಕ್ಕೆ ತೊಂದರೆ ಆಗ ಬಾರದು ಅಂತಾ ಅವರ ಬಳಿ ಕೇಳಿಕೊಂಡಿದ್ದೇನೆ. ಅವರು ಡಿಲೀಟ್‌ ಮಾಡಲ್ಲ ಎಂದು ಹೇಳಿದಕ್ಕೆ ನಾನು ಎಫ್‌ಐಆರ್‌ ಮಾಡಲು ಕಾರಣ ಎಂದು ಹೇಳಿದ್ದಾರೆ.

Leave A Reply

Your email address will not be published.