Rahul Gandhi: ‘ಚೀನಾಗಿಂತ ಭಾರತದಲ್ಲಿ ಹೆಚ್ಚು ನಿರುದ್ಯೋಗವಿದೆ’ ಎಂದು ಅಮೇರಿಕಾದಲ್ಲಿ ಭಾಷಣ ಬಿಗಿದ ರಾಹುಲ್ ಗಾಂಧಿ !!
Rahul Gandhi: ಭಾರತ, ಅಮೆರಿಕ ಮತ್ತು ಇತರ ಪಶ್ಚಿಮದ ರಾಷ್ಟ್ರಗಳು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿವೆ. ಆದರೆ ಆದರೆ ಜಾಗತಿಕ ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಚೀನಾ(China) ದಲ್ಲಿ ಉದ್ಯೋಗ ಸಮಸ್ಯೆಯಿಲ್ಲ, ಭಾರತದಲ್ಲಿ ಹೆಚ್ಚು ಅದು ಕಾಡುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಅಮೆರಿಕಾದಲ್ಲಿ ಭಾಷಣ ಮಾಡಿದ್ದಾರೆ.
ಭಾನುವಾರ ಅಮೆರಿಕಾದ ಡಲ್ಲಾಸ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದ್ರೆ, ಭಾರತದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಇದೆ. ಆದ್ರೆ ಚೀನಾ, ವಿಯೆಟ್ನಾಂನಂತರ ದೇಶಗಳಲ್ಲಿ ಉದ್ಯೋಗ ಸಮಸ್ಯೆಯೇ ಇಲ್ಲ. ಭಾರತವು ಉತ್ಪಾದನಾ ಪರಿಕಲ್ಪನೆ ಕೈಬಿಟ್ಟಿದ್ದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು ಭಾರತದಲ್ಲಿ ಕೌಶಲ್ಯ ಹೊಂದಿರುವವರಿಗೆ ಕೊರತೆಯಿಲ್ಲ. ಉತ್ಪಾದನೆಯಲ್ಲಿ ಶ್ರೇಷ್ಠತೆ ಸಾಧಿಸಿದರೆ ಭಾರತ ದೇಶವು ಚೀನಾದೊಂದಿಗೆ ಸ್ಪರ್ಧಿಸಬಹುದು. ಉತ್ಪಾದನಾ ಪರಿಕಲ್ಪನೆಯು ಉದ್ಯೋಗ ಸೃಷ್ಟಿಸುತ್ತದೆ ಎಂದು ಸಲಹೆ ನೀಡಿದರು.
ಅಲ್ಲದೆ 1940, 50 ಮತ್ತು 60ರ ದಶಕಗಳಲ್ಲಿ ಅಮೆರಿಕವನ್ನು ನೋಡಿದರೆ, ಅದು ಜಾಗತಿಕ ಉತ್ಪಾದನೆಯ ಕೇಂದ್ರವಾಗಿತ್ತು. ಕಾರುಗಳು, ವಾಷಿಂಗ್ ಮಿಷಿನ್‌ಗಳು, ಟಿವಿಗಳು, ಎಲ್ಲವೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉತ್ಪಾದನೆಯಾಗುತ್ತಿತ್ತು. ನಂತರ, ಉತ್ಪಾದನಾ ಪ್ರಮಾಣ ಕೊರಿಯಾಕ್ಕೆ ಸ್ಥಳಾಂತರಗೊಂಡಿತು. ಅಲ್ಲಿಂದ ಜಪಾನ್‌ಗೆ ಹೋಯ್ತು. ಅಂತಿಮವಾಗಿ, ಅದು ಚೀನಾಕ್ಕೆ ಹೋಯಿತು. ಇಂದು ನೋಡಿದ್ರೆ ಜಾಗತಿಕ ಉತ್ಪಾದನೆಯಲ್ಲಿ ಚೀನಾ ಮೇಲುಗೈ ಸಾಧಿಸುತ್ತಿದೆ. ಹೀಗಾಗಿ ನಾವು ಉತ್ಪಾದನೆ ಪರಿಕಲ್ಪನೆ ರೂಡಿಸಿಕೊಳ್ಳಬೇಕು ಎಂದರು.
ಇನ್ನು ಇದೇ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ (RSS) ವಿರುದ್ಧ ಹರಿಹಾಯ್ದರು. ಆರ್‌ಎಸ್‌ಎಸ್ ಭಾರತವನ್ನು ಒಂದು ಕಲ್ಪನೆ ಎಂದು ನಂಬುತ್ತದೆ. ಆದ್ರೆ ಕಾಂಗ್ರೆಸ್‌ಗೆ ಬಹುತ್ವ ಭಾರತದಲ್ಲಿ ನಂಬಿಕೆಯಿದೆ ಎಂದಿದ್ದಾರೆ.