Kasaragod: ಸಮುದ್ರ ಪಾಲಗಿದ್ದ ವ್ಯಕ್ತಿಯ ಮೃತದೇಹ ಪತ್ತೆ!

Kasaragod: ಹತ್ತು ದಿನಗಳ ಹಿಂದೆ ಕಾಸರಗೋಡುವಿನ ಕಿಯೂರು ಆಳಿವೆ ಬಾಗಿಲಿನಲ್ಲಿ (Kasaragod) ಸಮುದ್ರಪಾಲಾಗಿದ್ದ ಚೆಮ್ಮಾಡ್ ಕಲ್ಲುವಳಪ್ಪು ನಿವಾಸಿ ಮುಹಮ್ಮದ್ ರಿಯಾಜ್ ಮೃತದೇಹ ತೃಶೂರು ಸಮೀಪದ ಅಝಿಕ್ಕೋಡ್ ಸಮುದ್ರ ಕಿನಾರೆಯಲ್ಲಿ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.

 

ಆಗಸ್ಟ್ 31 ರಂದು ಮುಂಜಾನೆ 5:30 ರ ಸುಮಾರಿಗೆ ಕಿಯೂರು ಆಳಿವೆ ಬಾಗಿಲಿನಲ್ಲಿ ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದ ರಿಯಾಜ್ ನಾಪತ್ತೆಯಾಗಿದ್ದರು. ಬಳಿಕ ಮೇಲ್ಪರಂಬ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು, ಮೀನುಗಾರಿಕಾ ಇಲಾಖೆ ಹಾಗೂ ಮೀನುಗಾರರರು ಶೋಧ ನಡೆಸಿದ್ದರು ಕೂಡಾ ಮೃತದೇಹ ಪತ್ತೆಹಚ್ಚುವ ಪ್ರಯತ್ನ ವಿಫಲ ವಾಗಿತ್ತು.

ಇದೀಗ ಸೋಮವಾರ ಮಧ್ಯಾಹ್ನ ತೃಶ್ಯರು ಅಝಿಕ್ಕೋಡ್ ಕಡಲ ಕಿನಾರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಪ್ಯಾಂಟ್ ಕಿಸೆಯಿಂದ ಲಭಿಸಿದ ಮೊಬೈಲ್ ನಲ್ಲಿದ್ದ ಸಿಮ್ ಹಾಗೂ ಧರಿಸಿದ್ದ ಜಾಕೆಟ್ ನೋಡಿ ಸಂಬಂಧಿಕರು ಮೃತ ದೇಹದ ಗುರುತು ಪತ್ತೆಹಚ್ಚಿದ್ದಾರೆ.

Leave A Reply

Your email address will not be published.