Actor darshan: ಪವಿತ್ರಾಳ ಕರಾಳ ಮುಖ ಬಯಲು! ಅದೊಂದು ವಿಡಿಯೋ ಮಂದಿಟ್ಟು ದರ್ಶನ್‌ಗೆ ಬ್ಲಾಕ್‌ಮೇಲ್! ವಿಜಯಲಕ್ಷ್ಮೀ ಹೇಳಿಕೆ

Actor darshan: ಪವಿತ್ರಾ ಗೌಡ ತನ್ನ ಆಸೆ ಈಡೇರಿಸಿಕೊಳ್ಳಲು ಇನ್ನೊಂದು ಸಂಸಾರದಲ್ಲಿ ಹುಳಿ ಹಿಂಡಿರುವ ಆಕೆಯ ಕರಾಳ ಮುಖ ಇದೀಗ ಸ್ಪಷ್ಟವಾಗಿ ಬಯಲಾಗಿದೆ. ಹೌದು, ಬೇಕಾದಷ್ಟು ಹಣ ಇರುವ ನಟ ದರ್ಶನ್ ನ್ನು (Actor darshan) ಹೇಗೋ ತನ್ನ ಬುಟ್ಟಿಗೆ ಬೀಳಿಸಿಕೊಂಡು ಸಲುಗೆ ಬೆಳೆಸಿ ಆತನ ಜೊತೆಗೆ ಕಳೆದ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಮುಂದಿಟ್ಟುಕೊಂಡು ಪವಿತ್ರಾ ಗೌಡ, ನಟ ದರ್ಶನ್‌ಗೆ ಬ್ಲಾಕ್‌ಮೇಲ್ ಮಾಡುತ್ತಿದ್ದರು ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ. ಈ ಮಾಹಿತಿಯನ್ನು ಸ್ವತಃ ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಯಲು ಮಾಡಿದ್ದಾರೆ.

 

ಹೌದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್‌ಶೀಟ್ ಹಲವು ರಹಸ್ಯ ಮಾಹಿತಿಗಳನ್ನು ಬಯಲಿಗೆಳೆದಿದ್ದು, ಇದೀಗ ಪವಿತ್ರಾ ಹಾಗೂ ದರ್ಶನ್ ನಡುವಿನ ಈ ಸಂಬಂಧಕ್ಕೆ ಸ್ಪಷ್ಟನೆ ನೀಡಿದ್ದಾರೆ. ಪವಿತ್ರಾ ಗೌಡ ಜೊತೆ ದರ್ಶನ್ ಕಳೆದ ಖಾಸಗಿ ಕ್ಷಣಗಳ ಫೋಟೋ, ವಿಡಿಯೋಗಳನ್ನು ಮಾಧ್ಯಮಗಳಿಗೆ ನೀಡುವುದಾಗಿ ಬೆದರಿಸಿ ದರ್ಶನ್‌ಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಳು ಎಂದು ವಿಜಯಲಕ್ಷ್ಮಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

ಈ ಫೋಟೋ, ವಿಡಿಯೋಗಳನ್ನು ಮುಂದಿಟ್ಟುಕೊಂಡ ಪವಿತ್ರಾ ಗೌಡ, ದರ್ಶನ್‌ಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಳು. ಇದೇ ಬ್ಲಾಕ್‌ಮೇಲ್ ಮೂಲಕ ಪವಿತ್ರಾ ಗೌಡ 1.75 ಕೋಟಿ ರೂಪಾಯಿ ಮನೆಯನ್ನು, 2024ರಲ್ಲಿ ರೇಂಜ್ ರೋವರ್ ಕಾರು, ಹಾಗೂ ತನ್ನ ಇತರ ಶ್ರೀಮಂತಿಕೆಯ ಜೀವನಕ್ಕಾಗಿ ದರ್ಶನ್ ನ್ನು ಬಳಸಿಕೊಂಡು ತನ್ನತ್ತ ಸೆಳೆಯಲು ಪ್ರಯತ್ನಿಸಿದ್ದಾಳೆ ಎಂದು ವಿಜಯಲಕ್ಷ್ಮಿ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.

ಇನ್ನು 2009ರ ವರೆಗೆ ದರ್ಶನ್ ಹಾಗೂ ನನ್ನ ನಡುವೆ ಯಾವುದೇ ಕಲಹ ಇರಲಿಲ್ಲ ನಂತರ 2011ರಲ್ಲಿ ಪತ್ನಿ ವಿಜಯಲಕ್ಷ್ಮಿಗೆ ಹಲ್ಲೆ ಮಾಡಿ ಜೈಲು ಸೇರಿದ್ದ ದರ್ಶನ್ ಬಳಿಕ ಬಿಡುಗಡೆಯಾಗಿದ್ದರು. ಬಳಿಕ 2014ರ ವರೆಗೆ ಸಂಸಾರದಲ್ಲಿ ಮೂರನೆ ವ್ಯಕ್ತಿಗಳ ಪ್ರವೇಶ ಆಗಿರಲಿಲ್ಲ. ಯಾವಾಗ ಪವಿತ್ರಾ ಗೌಡ ನಮ್ಮ ಬದುಕಿನ ನಡುವೆ ಆಗಮಿಸಿದಳೋ ಅಂದಿನಿಂದ ಕಲಹ ಜೋರಾಗಿತ್ತು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

Leave A Reply

Your email address will not be published.