WHO: ಎಷ್ಟೇ ಮೊಬೈಲ್ ಬಳಸಿದರೂ, ಫೋನ್ ನಲ್ಲಿ ಮಾತಾಡಿದರೂ ಯಾವುದೇ ರೀತಿ ಕ್ಯಾನ್ಸರ್ ಬರುವುದಿಲ್ಲ – ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಘೋಷಣೆ !!

Share the Article

WHO: ಮೊಬೈಲ್ ಫೋನ್​ನಿಂದ ಮೆದುಳಿನ ಕ್ಯಾನ್ಸರ್ ಬರುತ್ತಾ? ಎಂಬ ಪ್ರಶ್ನೆಗೆ ಬಹುತೇಕರಿಗೆ ಕಾಡುತ್ತಿತ್ತು. ಆದರೆ, ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಅಧ್ಯಯನದಿಂದ, ಮೊಬೈಲ್ ಫೋನ್‌ಗಳಿಂದ ಮೆದುಳಿನ ಕ್ಯಾನ್ಸರ್‌ ಬರುವುದಿಲ್ಲ. ಮೊಬೈಲ್ ಫೋನ್‌ಗಳು ಮತ್ತು ಮೆದುಳಿನ ಕ್ಯಾನ್ಸರ್​ಗೆ ಯಾವುದೇ ಸಂಬಂಧವಿಲ್ಲ ಎಂಬ ಸಂತೋಷದ ಸಂಗತಿ ಬಹಿರಂಗವಾಗಿದ್ದು ಇದನ್ನು ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ (WHO) ಬಹಿರಂಗಪಡಿಸಿದೆ.

ಹೌದು, ಅತಿಯಾದ ಮೊಬೈಲ್ ಬಳಕೆಯಿಂದ ಮೆದುಳಿನ ಕ್ಯಾನ್ಸರ್(Brain cancer from the phone) ಬರುವ ಸಾಧ್ಯತೆ ಇದೆಯೇ? ಈ ವಿಷಯದ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ ನಡೆಯುತ್ತಿವೆ. ಈ ಕುರಿತಂತೆ ಕೆಲವು ತಪ್ಪು ಕಲ್ಪನೆಗಳು ಹಲವರಲ್ಲಿ ಮೂಡಿದ್ದವು. ಈ ಹಿಂದೆ ಪ್ರಕಟವಾದ ಕೆಲವು ಅಧ್ಯಯನಗಳು ಮೊಬೈಲ್ ಫೋನ್‌ಗಳಿಂದ ಬರುವ ರೇಡಿಯೊ ತರಂಗಗಳು ಮೆದುಳಿನ ಕ್ಯಾನ್ಸರ್‌ಗೆ ಕಾರಣವಾದ ಗ್ಲಿಯೊಮಾ ಟ್ಯೂಮರ್‌ಗಳನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ತಿಳಿಸಿದ್ದವು. ಆದರೆ, ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಅಧ್ಯಯನವು ಈ ತಪ್ಪು ಕಲ್ಪನೆಗಳನ್ನು ತಿರಸ್ಕರಿಸಿ, ಸತ್ಯ ಬಹಿರಂಗಪಡಿಸಿದೆ.

WHO ನ ಈ ವರದಿ ಮಹತ್ವದ್ದಾಗಿದ್ದು, ವರ್ಷಗಳಿಂದ, ಮೊಬೈಲ್ ಫೋನ್‌ಗಳಂತಹ ವೈರ್‌ಲೆಸ್ ತಂತ್ರಜ್ಞಾನ ಸಾಧನಗಳಿಂದ ಉಂಟಾಗುವ ಹಾನಿಯ ಬಗ್ಗೆ ಹಲವು ಸುಳ್ಳುಗಳನ್ನು ಹರಡಲಾಗುತ್ತಿದೆ. ಈ ಸಾಧನಗಳು ರೇಡಿಯೋ-ಫ್ರೀಕ್ವೆನ್ಸಿ ವಿದ್ಯುತ್ಕಾಂತೀಯ ವಿಕಿರಣವನ್ನು ಉತ್ಪಾದಿಸುತ್ತವೆ. ಇವುಗಳನ್ನು ರೇಡಿಯೋ ತರಂಗಗಳು ಎಂದೂ ಕರೆಯುತ್ತಾರೆ. WHO ನ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (IARC) 2011 ರಲ್ಲಿ ರೇಡಿಯೋ ಆವರ್ತನ ಮತ್ತು ವಿದ್ಯುತ್ಕಾಂತೀಯ ಕ್ಷೇತ್ರಗಳನ್ನು ಕ್ಯಾನ್ಸರ್‌ಗೆ ಕಾರಣವಾಗಬಲ್ಲವು ಎಂದು ವರ್ಗೀಕರಿಸಿತ್ತು.

ಆದ್ರೆ, ಇತ್ತೀಚಿನ ಸಂಶೋಧನೆಯಲ್ಲಿ, ARPANSA ದೊಡ್ಡ ಪ್ರಮಾಣದ ಡೇಟಾವನ್ನು ವಿಶ್ಲೇಷಿಸಿದೆ. ಈ ವಿಷಯದ ಬಗ್ಗೆ ಇತ್ತೀಚಿನ ಎಲ್ಲ ಅಧ್ಯಯನಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಮತ್ತು ಸಂಪೂರ್ಣವಾಗಿ ಪರಿಶೀಲಿಸಲಾಗಿದೆ. ನಂತರ, ವೈರ್‌ಲೆಸ್ ತಂತ್ರಜ್ಞಾನದಿಂದ ಹೊರಸೂಸುವ ರೇಡಿಯೊ ತರಂಗಗಳು ಮಾನವನ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Leave A Reply

Your email address will not be published.