Mickey Daniel: ರೆಡ್‌ಲೈಟ್ ಏರಿಯಾಗೆ ಬರೋ 75% ಗಂಡಸರು ಸೆಕ್ಸ್ ಮಾಡಲ್ಲ, ಅವರು ನಮ್ಮಲ್ಲಿಗೆ ಬರೋದೇ ಬೇರೆಯದಕ್ಕಾಗಿ – ಅಚ್ಚರಿ ರಹಸ್ಯ ಬಿಚ್ಚಿಟ್ಟ ಮಹಿಳೆ !!
Mickey Daniel: ರೆಡ್‌ಲೈಟ್ ಏರಿಯಾಗೆ ಬರೋ ಮುಕ್ಕಾಲು ಭಾಗ ಗಂಡಸರು ಸೆಕ್ಸ್ ಬಯಸಲ್ಲ, ಅವರು ನಮ್ಮ ಬಳಿ ಸಂಭೋಗ ಬಯಸಲ್ಲ. ಅವರೆಲ್ಲಾ ನಮ್ಮ ಬಳಿ ಬರೋದೇ ಬೇರೆ ಕಾರಣಕ್ಕೆ ಎಂದು ಲೈಂಗಿಕ ಕಾರ್ಯಕರ್ತೆಯೊಬ್ಬರು ಅಚ್ಚರಿ ರಹಸ್ಯ ಬಿಚ್ಚಿಟ್ಟಿದ್ದಾರೆ.
ಆಸ್ಟ್ರೇಲಿಯಾದ ಬ್ರಿಸ್ಬೇನ್ ಮೂಲದ ಮಿಕಿ ಡೇನಿಯಲ್( Mickey Daniel) ರೆಡ್‌ಲೈಟ್ ಏರಿಯಾದಲ್ಲಿ ಕೆಲಸ ಮಾಡಿಕೊಂಡಿರುವ 29 ವರ್ಷಗಳ ಮಿಕಿ ಡೇನಿಯಲ್ ಎಂಬ ಯುವತಿಯ ಸಂದರ್ಶನದ ವಿಡಿಯೋವೊಂದು ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ, ಸಂದರ್ಶನದಲ್ಲಿ ಮಾತನಾಡಿರುವ ಮಿಕಿ ಡೇನಿಯಲ್ ಅವರು ಇಂದು ಶೇ.80ರಷ್ಟು ಪುರುಷರ ಜೊತೆ ದೈಹಿಕ ಸಂಪರ್ಕ ಬೆಳೆಸಲ್ಲ. ಇಂದು ಪುರುಷರ ಮನಸ್ಥಿತಿ ಬದಲಾಗಿದೆ ಅನ್ನೋದು ನನ್ನ ವೃತ್ತಿ ಜೀವನದ ಅನುಭವ. ಅವರು ಕೇವಲ ನಮ್ಮ ಜೊತೆಯಲ್ಲಿ ಸಮಯ ಕಳೆಯಲು ಬರುತ್ತಾರೆ. ತಮ್ಮ ಮನಸ್ಸಿನಲ್ಲಿರುವ ಮಾತುಗಳನ್ನು ನಮ್ಮೊಂದಿಗೆ ಶೇರ್ ಮಾಡಿಕೊಳ್ಳುತ್ತಾರೆ. ತಮ್ಮ ಜೊತೆ ನಡೆದ ಘಟನೆಗಳು, ದುಃಖ ಮತ್ತು ಯಾರ ಜೊತೆಯಲ್ಲಿಯೂ ಹಂಚಿಕೊಳ್ಳದ ವಿಷಯಗಳ ಕುರಿತು ಮಾತನಾಡುತ್ತಾರೆ. ತುಂಬಾ ಸಮಯದವರೆಗೆ ಮಾತನಾಡಿ ನಗುತ್ತಲೇ ಹೊರಡುತ್ತಾರೆ. ನನ್ನ ಈ ಮಾತುಗಳನ್ನು ಹಲವರು ಸುಳ್ಳು ಎಂದು ಹೇಳಬಹುದು. ಆದ್ರೆ ಇದು ಸತ್ಯ ಎಂದು ಹೇಳಿದ್ದಾರೆ.
ಅಲ್ಲದೆ ಲೈಂಗಿಕ ಸಂಪರ್ಕಕ್ಕಾಗಿಯೇ ಬರೋ ಪುರುಷರ ಸಂಖ್ಯೆ ಇಳಿಮುಖವಾಗಿದೆ. ಪುರುಷರು ಸಹ ಭಾವನಾತ್ಮಕವಾಗಿ ಕುಸಿದಾಗ ಅದೆಲ್ಲವನ್ನು ಹೇಳಲು ಅವರಿಗೆ ಸಂಗಾತಿಯ ಅವಶ್ಯಕತೆ ಇರುತ್ತದೆ. ತುಂಬಾ ಗ್ರಾಹಕರು ಬುಕ್ ಮಾಡುವಾಗಲೇ ನಮಗೆ ಸೆಕ್ಸ್ ಬೇಕಿಲ್ಲ ಅಂತಾನೇ ಹೇಳಿಕೊಂಡಿರುತ್ತಾರೆ. ಮುಕ್ತವಾಗಿ ಮಾತಾನಾಡಲು ಗಂಟೆಗೆ ಸಾವಿರಾರು ಡಾಲರ್ ನೀಡುತ್ತಾರೆ. ತಮ್ಮ ಬಳಿ ಬರುವ ಪುರುಷರ ಅರ್ಧಕ್ಕಿಂತ ಹೆಚ್ಚಿನ ಜನರು ವಿವಾಹಿತರು ಮತ್ತು ಸಂಗಾತಿಯನ್ನು ಹೊಂದಿರುತ್ತಾರೆ. ಪಾರ್ಟನರ್ ಜೊತೆ ಲೈಂಗಿಕ ಸುಖ ಸಿಕ್ಕರೂ, ಅವರಲ್ಲಿ ಒಂಟಿತನ ಕಾಣಿಸಿಕೊಳ್ಳುತ್ತದೆ. ಹಾಗಾಗಿಯೇ ದುಃಖವನ್ನು ಹಂಚಿಕೊಳ್ಳಲು ನಮ್ಮ ಬಳಿ ಬರುತ್ತಾರೆ’ ಎಂದಿದ್ದಾರೆ.
ಇಷ್ಟೇ ಅಲ್ಲದೆ ‘ಪುರುಷರು ತಾನು ಭಾವನಾತ್ಮಕ ಜೀವಿ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಸಮಾಜದಲ್ಲಿ ತಾನು ಸ್ಟ್ರಾಂಗ್ ಎಂಬುದನ್ನು ಬಿಂಬಿಸಲು ಪ್ರಯತ್ನಿಸುತ್ತಿರುತ್ತಾರೆ. ಅತ್ಯಂತ ತೀವ್ರವಾಗಿ ಕುಸಿದಾಗ ನಮ್ಮ ಬಳಿ ಬರುತ್ತಾರೆ. ಈ ಕಾರಣಗಳಿಂದ ರೆಡ್ ಲೈಟ್ ಏರಿಯಾದ ಟ್ರೆಂಡ್ ಬದಲಾಗಿದೆ ಅಂತ ಹೇಳಬಹುದು. ಕೆಲ ಗ್ರಾಹಕರ ಕಥೆಗಳು ನಮ್ಮ ಜೀವನದ ಮೇಲೆಯೂ ಅಗಾಧ ಪರಿಣಾಮ ಬೀರುತ್ತದೆ ಅಂತಾನೂ ಮಿಕಿ ಡೇನಿಯಲ್ ಹೇಳಿದ್ದಾರೆ.
ಅಂದಹಾಗೆ ಮಿಕಿ ಡೇನಿಯಲ್ ತನ್ನ ಬಳಿಯಲ್ಲಿ ಬರುವ ಪುರುಷರ ಜೊತೆ ಲೈಂಗಿಕ ಸಂಪರ್ಕ ಹೊಂದುವುದೇ ಕೆಲಸವನ್ನಾಗಿಸಿಕೊಂಡಿದ್ದಾರೆ. ತನ್ನ ಈ ಕೆಲಸಕ್ಕಾಗಿ ಮಿಕಿ ಡೇನಿಯಲ್ ಗಂಟೆಗೆ 1,300 ಡಾಲರ್ (ಅಂದಾಜು 73,000 ರೂಪಾಯಿ) ಚಾರ್ಜ್ ಮಾಡುವ ಮೂಲಕ ದುಬಾರಿ ಬೆಲೆಯ ವರ್ಕರ್ ಅಂತ ಅನ್ನಿಸಿಕೊಂಡಿದ್ದಾರೆ