Indian Railway : ಟಿಕೆಟ್ ಇಲ್ಲಾ ಅಂದ್ರೂ ಇಂತ ಪ್ರಯಾಣಿಕರನ್ನು ರೈಲಿನಿಂದ ಹೊರ ಹಾಕೋದು, ಫೈನ್ ಹಾಕೋದು ಮಾಡುವಂತಿಲ್ಲ !!

Indian Railway : ಕೆಲವೊಮ್ಮೆ ರೈಲು ಪ್ರಯಾಣ ಮಾಡುವಾಗ ಗೊತ್ತಿಲ್ಲದೆಯೋ, ಅಥವಾ ಮರೆತೋ ಅವಸರದಲ್ಲಿ ರೈಲು ಹತ್ತಿ ಪ್ರಯಾಣ ಬೆಳೆಸುತ್ತೇವೆ. ಈ ವೇಳೆ ಟಿಕೆಟ್ ಚೆಕರ್ ಬಂದಾಗಲೇ ನಮಗೆ ಇದರ ಅರಿವಾಗುತ್ತದೆ. ಫೈನ್ ಹಾಕುತ್ತಾರೋ ಅಥವಾ ಹೊರ ಹಾಕುತ್ತಾರೋ ಎಂದು ಭಯಭೀತರಾಗುತ್ತೇವೆ. ಆದರೆ ಇಂತಹ ಪ್ರಯಾಣಿಕರು ಟಿಕೆಟ್ ಇಲ್ಲದೆ ಟ್ರೈನ್ ಹತ್ತಿದರೆ ಅವರನ್ನು ಇಳಿಸೋದಾಗಲಿ, ಫೈನ್ ಹಾಕೋದಾಗಲಿ ಮಾಡುವಂತಿಲ್ಲ.
ಹೌದು, ರಾತ್ರಿ ವೇಳೆ ಮಹಿಳೆಯೊಬ್ಬಳು ತನ್ನ ಮಗುವಿನೊಡನೆ ಟಿಕೆಟ್ ಇಲ್ಲದೆ ರೈಲು ಹತ್ತಿ ಪ್ರಯಾಣ ಮಾಡುತ್ತಿದ್ದರೆ ಯಾವುದೇ ಕಾರಣಕ್ಕೂ ಆಕೆಯ ಮೇಲೆ ಕ್ರಮ ಕೈಗೊಳ್ಳದಿರುವಂತೆ ಇಲಾಖೆಯು ತಿಳಿಸಿದೆ. ಮಹಿಳೆ ತನ್ನ ಮಗುವಿನೊಂದಿಗೆ ಅದು ಗಂಡು ಮಗು ಅಥವಾ ಹೆಣ್ಣು ಮಗುವೇ ಆಗಿರಲಿ, ಒಬ್ಬಂಟಿಯಾಗಿ ರೈಲಿನಲ್ಲಿ ರಾತ್ರಿಯ ವೇಳೆ ಪ್ರಯಾಣ ಮಾಡುತ್ತಿದ್ದರೆ, ಆಕೆಯನ್ನು ಯಾವುದೇ ಕಾರಣಕ್ಕೂ ರೈಲಿನಿಂದ ಕೆಳಗೆ ಇಳಿಸುವಂತಿಲ್ಲ ಎಂದು ಭಾರತೀಯ ರೈಲ್ವೆ(Indian Railway)ತಿಳಿಸಿದೆ.
ಇಷ್ಟೇ ಅಲ್ಲದೆ ಯಾವುದೇ ಕಾರಣದಿಂದ ನೀವು ನಿಮ್ಮ ರೈಲನ್ನು ತಪ್ಪಿಸಿಕೊಂಡರೆ ಮುಂದಿನ ಎರಡು ನಿಲ್ದಾಣಗಳಿಂದ ನೀವು ಆ ಟ್ರೇನ್‌ಅನ್ನು ಮರಳಿ ಹಿಡಿಯಬಹುದಾಗಿದೆ. ಇದು ಭಾರತೀಯ ರೈಲ್ವೆಯ ಸ್ತ್ರೀ ಮತ್ತು ಮಕ್ಕಳ ರಕ್ಷಣೆಯ ಅತ್ಯಂತ ಕಠಿಣ ನಿಯಮವಾಗಿದೆ.