ʼನಿನ್ನ ಫೋಟೋ ನೋಡಿ ನಾನು ಹಸ್ತಮೈಥುನ ಮಾಡಿಕೊಂಡೆʼ ; ಪವಿತ್ರಾ- ರೇಣುಕಾಸ್ವಾಮಿ ಚಾಟ್ ಬಹಿರಂಗ
Renukaswamy Murder Case: ʼನನ್ನ ಜೊತೆ ಲಿವ್‌ಇನ್ ರಿಲೇಷನ್‌ಶಿಪ್‌ಗೆ ಒಪ್ಪು, ನಿನಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಕೊಡ್ತೇನೆ” ಎಂದು ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಸಂದೇಶ ಕಳುಹಿಸುತ್ತಿದ್ದ. ಈ ಕುರಿತು ಆರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಇನ್ಸ್‌ಟಾಗ್ರಾಮ್ ಮೆಸೇಜ್‌ನಲ್ಲಿ ತನ್ನ ಮರ್ಮಾಂಗದ ಫೋಟೋವನ್ನು, ನಗ್ನ ವೀಡಿಯೋ ಕೂಡಾ ಕಳುಹಿಸಿದ್ದ. ನಂತರ ನಿನ್ನ ಫೋಟೋ ನೋಡಿ ನಾನು ಹಸ್ತಮೈಥುನ ಮಾಡಿಕೊಂಡೆ ಎಂಬ ಮೆಸೇಜ್ ಕಳುಹಿಸಿದ್ದ ಎಂದು ಆರೋಪ ಪಟ್ಟಿಯಲ್ಲಿ ದಾಖಲಾಗಿದೆ.
ಇತ್ತ ಈ ಅಶ್ಲೀಲ ಮೆಸೇಜ್, ವೀಡಿಯೋಗಳನ್ನು ಪವಿತ್ರಾಗೌಡ ಅಳಿಸಿ ಹಾಕಿದ್ದಳು. ಮೊಬೈಲ್ ರಿಟ್ರೀವ್ ಮಾಡಿದಾಗ ರೇಣುಕಾಸ್ವಾಮಿ 17 ಸಂದೇಶಗಳ ಸ್ಕ್ರೀನ್‌ಶಾಟ್‌ಗಳು, ವೀಡಿಯೋಗಳು ಪೊಲೀಸರು ಸಂಗ್ರಹಿಸಿದ್ದಾರೆ.
ಇನ್ಸ್‌ಟಾಗ್ರಾಮ್‌ನಲ್ಲಿ ಫೆಬ್ರವರಿಯಿಂದ ಗೌತಮ್ ಎಂಬ ನಕಲಿ ಹೆಸರಿನಿಂದ ನಿರಂತರ ಅಶ್ಲೀಲ ಮೆಸೇಜ್ ಬರುತ್ತಿತ್ತು. ಇದನ್ನು ಕಂಡ ಬೇಸತ್ತು ಹೋದ ಪವಿತ್ರಾ, ಕೊನೆಗೆ ರೇಣುಕಾಸ್ವಾಮಿಗೆ ಗತಿ ಕಾಣಿಸಲು ನಿರ್ಧಾರ ಮಾಡುತ್ತಾಳೆ.
ನಿನ್ನ ಸೌಂದರ್ಯಕ್ಕೆ ನಾನು ಸೋತು ಹೋಗಿದ್ದೇನೆ, ನಿನ್ನ ಜೊತೆ ನಾನು ಮಾತನಾಡಬೇಕು ಕಣೆ, ನಿನ್ನಷ್ಟು ರೂಪಸಿ ಯಾರೂ ಇಲ್ಲ ಬಿಡು, ನಿನ್ನ ಫೋಟೋ ನೋಡಿಕೊಂಡೇ ನಾನು ಹಸ್ತಮೈಥುನ ಮಾಡಿಕೊಂಡು ಕಣೆ, ನೀನು ನನ್ನ ನೋಡುತ್ತೀಯಾ ನನ್ನ…….ಎಂದು ಹೇಳಿ ಮರ್ಮಾಂಗದ ಫೊಟೋ ವೀಡಿಯೋ ಕಳುಹಿಸಿದ್ದಾನೆ ರೇಣುಕಾಸ್ವಾಮಿ.
ಲಿವಿಂಗ್ ಇನ್ ರಿಲೇಷನ್‌ಷಿಪ್‌ನಲ್ಲಿರು. ನಿನಗೆ 10 ಸಾವಿರ ರೂಪಾಯಿ ಕೊಡುತ್ತೇನೆ. ಬೆಂಗಳೂರಿಗೆ ನಾನು ಬರುತ್ತೇನೆ. ನಿನ್ನ ಜೊತೆ ಯಾವಾಗ ಸೇರುತ್ತೇನೋ, ನೀನು ಫೋಟೋದಲ್ಲಿ ನೋಡೋದಕ್ಕೆ ಹೀಗಿದ್ದೀಯ, ಇನ್ನೂ…….ಹೀಗೆ ನಿರಂತವಾಗಿ ಅಶ್ಲೀಲ ಮೆಸೇಜ್ ಬಂದಿದೆ ಎಂದು ಆರೋಪಪಟ್ಟಿಯಲ್ಲಿ ವಿವರಿಸಲಾಗಿದೆ.