Organic Farming: ಮಣ್ಣಿನ ಆರೋಗ್ಯ ರಕ್ಷಣೆಗಾಗಿ ಸಾವಯವ ಕೃಷಿ ಪದ್ಧತಿ: ಅಳವಡಿಕೆ ಕ್ರಮ ಹೇಗೆ?

Share the Article

Organic Farming: ಅಧಿಕ ಇಳುವರಿಗೆ ಮಣ್ಣಿನ ಆರೋಗ್ಯವನ್ನು(Soil health) ಕಾಪಾಡುವುದು ಅತಿ ಮುಖ್ಯವಾಗಿದೆ. ಪ್ರತಿ ವರ್ಷ ವಿವಿಧ ಬೆಳೆಗಳನ್ನು(Crop) ಬೆಳೆಯುವುದರಿಂದ ವರ್ಷದಿಂದ ವರ್ಷಕ್ಕೆ ಮಣ್ಣಿನಲ್ಲಿರುವ ಸಾವಯವ ಪದಾರ್ಥ(Organic matter) ಕಡಿಮೆಯಾಗುತ್ತಿದೆ. ಮಣ್ಣಿನ ಆರೋಗ್ಯ ರಕ್ಷಣೆ ಮೂಲಕ ಸಾವಯವ ಇಂಗಾಲದ(Carbon) ಪ್ರಮಾಣ ಹೆಚ್ಚಿಸಿ ಭೂಫಲವತ್ತತೆ(Land Fertility) ಕಾಯ್ದುಕೊಳ್ಳುವ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.

• ಸಾವಯವ ಗೊಬ್ಬರ ಉಪಯೋಗ ಪ್ರಮಾಣ ಕಡಿತದಿಂದಾಗಿ ಕೆಲವು ಮುಖ್ಯ ಹಾಗೂ ಲಘುಪೋಷಕಾಂಶಗಳ ಕೊರತೆಯುಂಟಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಬೆಳೆ ಇಳುವರಿ ಕುಂಠಿತಗೊಂಡಿವೆ.
• ಸಾವಯವ ಗೊಬ್ಬರಗಳ ಬಳಕೆಯಿಂದ ಮಣ್ಣಿನಲ್ಲಿ ಸಾವಯವ ಪದಾರ್ಥದ ಪ್ರಮಾಣ ಅಧಿಕಗೊಂಡು ಮಣ್ಣಿನ ಆರೋಗ್ಯ ಸುಧಾರಣೆಗೊಳ್ಳುವುದು.

• ಇದಲ್ಲದೆ ಸಾವಯವ ಕೃಷಿ ಪದ್ಧತಿ ಮೂಲಕ ಬೆಳೆಯುಳಿಕೆ, ಹಸಿರೆಲೆ ಗೊಬ್ಬರ, ಬೆಳೆ ಹೊದಿಕೆ, ಬೆಳೆ ಪರಿವರ್ತನೆ, ಸೂಕ್ತ ಬೆಳೆ ಪದ್ಧತಿ, ಕನಿಷ್ಠ ಉಳುಮೆ ಮತ್ತು ಜೈವಿಕ ಗೊಬ್ಬರಗಳ ಬಳಕೆ ಮೂಲಕ ಮಣ್ಣಿನ ಆರೋಗ್ಯ ಸುಧಾರಿಸಬಹುದು.
• ಮಣ್ಣಿನಲ್ಲಿರುವ ಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸಿ, ಮಣ್ಣಿನ ಕಣರಚನೆ ಉತ್ತಮಗೊಳಿಸಿ, ಮಣ್ಣು ಅಧಿಕ ನೀರು ಹಾಗೂ ಪೋಷಕಾಂಶ ಹಿಡಿದಿಟ್ಟು ಬೆಳೆಗಳಿಗೆ ಒದಗಿಸಲು ಸಹಕಾರಿಯಾಗಿದೆ.
ಇದರಿಂದಾಗಿ ರೈತರು ತಮ್ಮ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆ ಪ್ರಮಾಣ ಕಡಿಮೆಯಾಗಿ, ಕೃಷಿ ವೆಚ್ಚ ತಗ್ಗಿಸಿ, ಅಧಿಕ ಲಾಭ ಪಡೆಯಬಹುದು.

Leave A Reply

Your email address will not be published.