Funeral: ಅಂತ್ಯ ಸಂಸ್ಕಾರದ ವೇಳೆ ಮಡಿಕೆ ಯಾಕೆ ಒಡೆಯುತ್ತಾರೆ? ಇದರ ಹಿಂದಿರುವ ಅರ್ಥವೇನು?
Funeral: ಹಿಂದೂ ಧರ್ಮದಲ್ಲಿ(Hindu Religion) ಶವ ಸಂಸ್ಕಾರ(Funeral) ಅಥವಾ ಅಂತ್ಯ ಸಂಸ್ಕಾರ ಮಾಡುವಾಗ ಅನೇಕ ವಿಧಿ ವಿಧಾನಗಳನ್ನು ಮಾಡಲಾಗುತ್ತದೆ. ಇದರಲ್ಲಿ ನೀರು ತುಂಬಿದ ಮಣ್ಣಿನ ಮಡಕೆಯನ್ನು(Mud Pot) ಒಡೆದು ಹಾಕಲಾಗುತ್ತದೆ. ನೀರು ತುಂಬಿದ ಮಣ್ಣಿನ ಮಡಕೆಯನ್ನು ಶವ ಸಂಸ್ಕಾರದ ವೇಳೆ ಯಾಕೆ ಒಡೆಯುತ್ತಾರೆ? ಇದರ ಹಿಂದಿನ ಉದ್ದೇಶವೇನು?
ಹಿಂದೂ ಆಚರಣೆಗಳ ಪ್ರಕಾರ, ಇದು ಅಂತ್ಯವನ್ನು ಕಂಡ ಮಾನವ ದೇಹ ಮತ್ತು ಆತ್ಮದ ಕಲ್ಪನೆಯೊಂದಿಗೆ ಸಂಪರ್ಕ ಹೊಂದಿದೆ. ಚಿತೆಗೆ ಬೆಂಕಿಯಿಡುವ ವ್ಯಕ್ತಿ ತನ್ನ ಹೆಗಲ ಮೇಲೆ ಮಣ್ಣಿನ ಮಡಕೆಯಲ್ಲಿ ನೀರು ತುಂಬಿ ಸತ್ತ ವ್ಯಕ್ತಿಯ ಚಿತೆಯ ಸುತ್ತ ಸುತ್ತುತ್ತಾನೆ. ಒಟ್ಟು ಮೂರು ಸುತ್ತು ಹಾಕಲಾಗುತ್ತದೆ. ಈ ವೇಳೆ ಒಂದೊಂದು ಸುತ್ತು ಬರುವಾಗಲೂ ಮಡಕೆಯನ್ನು ಕತ್ತಿಯಿಂದ ರಂಧ್ರ ಮಾಡಲಾಗುತ್ತದೆ. ತೂತಿನಿಂದ ಚಿತೆಯ ಸುತ್ತ ನೀರು ಬೀಳಲಾರಂಭಿಸುತ್ತದೆ. ಕೊನೆಗೆ ಮಡಿಕೆಯನ್ನು ಹಿಂದಕ್ಕೆ ಬೀಳಿಸಿ ಒಡೆಯುತ್ತಾನೆ.
ಮಡಿಕೆಯನ್ನು ಒಡೆದಾಗ ದೇಹದಿಂದ ಆತ್ಮ ಮುಕ್ತಿ ಪಡೆಯುತ್ತದೆ. ಅಂದರೆ ದೇಹವನ್ನು ಬಿಟ್ಟು ಹೋಗುತ್ತದೆ ಎಂಬ ನಂಬಿಕೆ ಇದೆ. ದೇಹವೂ ಮಣ್ಣಿಗೆ ಸೇರುವುದು. ಒಡೆದ ಮಡಕೆಯಂತೆ ದೇಹವೂ ಮಣ್ಣಿಗೆ ಸೇರುತ್ತದೆ. ಜೀವನ ಮಡಕೆ ರೀತಿ. ಒಂದಲ್ಲ ಒಂದು ದಿನ ಒಡೆದು ಮಣ್ಣು ಸೇರುತ್ತದೆ. ಹಾಗೆ ವ್ಯಕ್ತಿ ಮಣ್ಣಿನ ತೂತು ಮಡಿಕೆಯಲ್ಲಿ ನೀರನ್ನು ಬೀಳೂತ್ತಾ ಹೋದಂದೆ ಸಮಯವೂ ಹೋಗುತ್ತದೆ ಎಂಬ ಅರ್ಥವನ್ನು ಸೂಚಿಸುತ್ತದೆ.