Delhi: ನಡು ಬೀದಿಯಲ್ಲಿ ಬಟ್ಟೆ ಹರಿದುಕೊಂಡು ಅರೆಬೆತ್ತಲಾಗಿ ಹೊಡೆದಾಡಿದ ಮಹಿಳೆಯರು – ದೇಹ ಮುಚ್ಚಲು ಓಡೋಡಿ ಬಂದ ದಾರಿಹೋಕರು !!

Share the Article

Delhi: ಕುಟುಂಬ ಕಲಹ ಒಂದನ್ನು ಬೀದಿಗೆ ತಂದು ರಂಪ ಮಾಡಿಕೊಂಡು ಇಬ್ಬರು ಮಹಿಳೆಯರು ಬಟ್ಟೆ ಹರಿಯುವ ರೀತಿಯಲ್ಲಿ ಹೊಡದಾಡಿಕೊಂಡ ಪ್ರಸಂಗ ನವದೆ(Delhi) ಹಲಿಯಲ್ಲಿ ಬೆಳಕಿಗೆ ಬಂದಿದೆ.

ಹೌದು, ನೈ ಮಂಡಿ ಕೊತ್ವಾಲಿ ಪ್ರದೇಶದ ಅಲ್ಮಾಸ್‌ಪುರದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ರಸ್ತೆಯಲ್ಲಿ ತೀವ್ರ ಹೊಡೆದಾಟ ನಡೆದಿದೆ. ಈ ಹೊಡೆದಾಟದಲ್ಲಿ ರೊಚ್ಚಿಗೆದ್ದ ಎರಡೂ ಕಡೆಯ ಮಹಿಳೆಯರು ರಸ್ತೆಯಲ್ಲೇ ಬಟ್ಟೆ ಹರಿದುಕೊಂಡು ಹೊಡೆದಾಡಿದ್ದಾರೆ.

ಗಲಾಟೆ ಮಾಡುತ್ತಾ, ಹೊಡೆದಾಡಿಕೊಳ್ಳುತ್ತಾ ಇಬ್ಬರು ಬಟ್ಟೆಹರಿದುಕೊಳ್ಳುತ್ತಿದ್ದಂತೆ ದಾರಿಹೋಕರು ಆ ಮಹಿಳೆಯರ ದೇಹ ಮುಚ್ಚಲು ತಮ್ಮ ಟವೆಲ್ ನೀಡಿದರು. ಬಳಿಈ ಮಾಹಿತಿ ತಿಳಿದ ಪೊಲೀಸರು ಆಗಮಿಸಿ ಎರಡೂ ಕಡೆಯ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಎರಡೂ ಕಡೆಯವರ ದೂರಿನ ಆಧಾರದ ಮೇಲೆ ಪೊಲೀಸರು ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ.

ಅಂದಹಾಗೆ ಈ ಎರಡೂ ಕುಟುಂಬದ ಮನೆಗಳು ಹತ್ತಿರದಲ್ಲಿವೆ. ಸೋಮವಾರ ಸಂಜೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆಸಿದ್ದರು. ಇಬ್ಬರ ನಡುವೆ ಜಗಳ ಆರಂಭವಾದಾಗ ಅತ್ತಿಗೆ ಮತ್ತು ಸಹೋದರ ಆಗಮಿಸಿದರು. ಅತ್ತ ಕಡೆಯ ಮಹಿಳೆಯರೂ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಎರಡೂ ಕಡೆಯ ಮಹಿಳೆಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಮಹಿಳೆಯರು ಪರಸ್ಪರ ಬಟ್ಟೆ ಹರಿದುಕೊಂಡರು ಎಂದು ತಿಳಿದುಬಂದಿದೆ.

 

Leave A Reply