Actor Darshan: ದರ್ಶನ್‌ ನಟನೆಯಲ್ಲಿ ದೇವರಾಗೋ ಬದಲು ನಿಜಜೀವನದಲ್ಲಿ ದೇವರಾಗಬಹುದಿತ್ತು- ಫೋಟೋ ವೈರಲ್‌ ಬೆನ್ನಲ್ಲೇ ರೇಣುಕಾಸ್ವಾಮಿ ತಂದೆಯ ಮಾತು

Share the Article

Actor Darshan: ಇಂದು ರೇಣುಕಾಸ್ವಾಮಿ ಸಾವು ಕಾಣುವ ಮುನ್ನ ತೆಗೆಯಲಾದ ಕೊನೆಯ ಕ್ಷಣದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆದ ಬೆನ್ನಲ್ಲೇ ರೇಣುಕಾಸ್ವಾಮಿಯ ಪೋಷಕರ ದುಃಖ ಮುಗಿಲು ಮುಟ್ಟಿದೆ. ತಾವು ಹೆತ್ತ ಮಗ ಜೀವಕ್ಕಾಗಿ ಗೋಗೆರೆಯುವ ದೃಶ್ಯ ಕಂಡು ತಂದೆ ತಾಯಿಯ ಕರುಳು ಚುರುಕ್‌ ಎನ್ನದೇ ಇರದೇ. ಆತ ತಪ್ಪಾಯ್ತು ಅಂತಾ ಕ್ಷಮೆ ಕೇಳಿದ್ದರೂ ಆ ರಾಕ್ಷಸರು ಬಿಡಲಿಲ್ಲ, ಪ್ರಾಣಭಿಕ್ಷೆ ನೀಡುವಂತೆ ಬೇಡಿಕೊಳ್ಳುತ್ತಿದ್ದರೆ ಇದನ್ನು ಕಂಡು ಹೆತ್ತ ಕರುಳು ಚುರ್‌ ಎಂದಿದೆ.

ಪರಿಪರಿಯಾಗಿ ಆತ ಅಷ್ಟು ಬೇಡಿಕೊಂಡರೂ ಅವರು ಬಿಟ್ಟಿಲ್ಲ, ಅವರಿಗೆ ಏನ್‌ ಹೇಳ್ಬೇಕು ಅಂತಾನೇ ಅರ್ಥ ಆಗ್ತಿಲ್ಲ. ಸ್ವಲ್ಪ ದಯೆ ತೋರಿಸಿದ್ದರೆ ಇಂದು ಆತ ಮನೆಯಲ್ಲಿರ್ತಿದ್ದ. ಅಷ್ಟು ಕೇಳಿಕೊಂಡ ಮೇಲಾದರೂ ಆತನನ್ನು ಬಿಟ್ಟಿದ್ದರೆ ಆತ ಮನೆಗೆ ಬರುತ್ತಿದ್ದ. ಅವನನ್ನು ನಾವು ಹೇಗಾದರೂ ನೋಡಿಕೊಳ್ಳುತ್ತಿದ್ದೆವು ಎಂದು ಹೆತ್ತ ತಾಯಿ ರತ್ನಪ್ರಭಾ ಕಣ್ಣೀರು ಹಾಕಿದ್ದಾರೆ.

ತುಂಬಾ ನೋವನ್ನು ಅನುಭವಿಸಿ ನರಳಿ ನರಳಿ ಪ್ರಾಣ ಬಿಟ್ಟ. ಏನ್‌ ಶಿಕ್ಷೆ ಕೊಡಬೇಕು ಅಂತಾ ನಾನು ಹೇಳೋದಿಲ್ಲ. ಕಾನೂನು ಅವರಿಗೆ ಶಿಕ್ಷೆ ನೀಡುತ್ತೆ. ಆದರೆ ಅವರನ್ನು ಬಿಡಬಾರದು. ಶಿಕ್ಷೆ ಆಗಬೇಕು. ಕಠಿಣ ಶಿಕ್ಷೆ ಆಗಬೇಕು. ನನ್ನ ಮಗ ಯಾವ ರೀತಿ ನರಳಿದ್ದಾನೆ ಅನ್ನೋದರ ಫೋಟೋ ನೋಡಿದರೆ ಕರುಳು ಹಿಂಡುತ್ತೆ ಎಂದು ಹೇಳಿದ್ದಾರೆ.

ಇವರು ರಾಕ್ಷಸರಲ್ಲಿ ರಾಕ್ಷಸರಾಗಿದ್ದಾರೆ. ಎಷ್ಟು ಸಮಾಧಾನ ಮಾಡಿಕೊಂಡರೂ ಆ ಫೋಟೋ ನೋಡಿದ ಮೇಲೆ ಸಮಾಧಾನ ಆಗ್ತಿಲ್ಲ. ಪೊಲೀಸ್‌ಗೆ ಹೇಳಬಹುದಿತ್ತು. ನಮಗೆ ಹೇಳಬಹುದಿತ್ತು. ಆದರೆ ದರ್ಶನ್‌ ನಟನೆಯಲ್ಲಿ ದೇವರಾಗುವ ಬದಲು ನಿಜಜೀವನದಲ್ಲಿ ದೇವರಾಗಬಹುದಿತ್ತು ಎಂದು ರೇಣುಕಾಸ್ವಾಮಿ ತಂದೆ ಹೇಳಿದ್ದಾರೆ.

 

Leave A Reply

Your email address will not be published.