School Bus: ಎಲ್ಲಾ ಸ್ಕೂಲ್ ಬಸ್ ಗಳು ಹಳದಿ ಬಣ್ಣದಲ್ಲೇ ಇರುತ್ತವೆ, ಯಾಕೆ? ಇಲ್ಲಿದೆ ಇಂಟ್ರೆಸ್ಟಿಂಗ್ ಆನ್ಸರ್

School Bus: ಪ್ರತಿಯೊಂದು ಶಾಲೆಯ ಹೆಸರುಗಳು ಬೇರೆ ಬೇರೆ ಇರುತ್ತವೆ. ಆದರೆ ಎಲ್ಲಾ ಶಾಲಾ ಬಸ್ಸುಗಳ(School Bus) ಬಣ್ಣ ಒಂದೇ ಆಗಿರುತ್ತದೆ. ಅದು ಹಳದಿ(Yellow). ಇದು ಯಾಕೆ ಹೀಗೆ? ಎಲ್ಲಾ ಸ್ಕೂಲ್ ಬಸ್ಸುಗಳಿಗೆ ಹಳದಿ ಬಣ್ಣವನ್ನೇ ಏಕೆ ಬಳಿದಿರುತ್ತಾರೆ ಎಂಬ ಯೋಚನೆ ನಿಮಗೇನಾದರೂ ಎಂದಾದರೂ ಬಂದಿದೆಯಾ? ಬಂದಿರಲೂ ಬಹುದು. ಆದರೆ ಉತ್ತರ ಸಿಕ್ಕದೆ ಇರಬಹುದು. ಹಾಗಾದರೆ ಅದಕ್ಕೆ ಇಲ್ಲಿದೆ ನೋಡಿ ಉತ್ತರ.

ಹೌದು, ಎಲ್ಲಾ ಶಾಲೆಗಳ ಬಸ್​ ಬಣ್ಣ ಹಳದಿಯಾಕಾಗಿರುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ. ನಮ್ಮ ಕಣ್ಣು ಹೆಚ್ಚು ಸೆನ್ಸಿಟಿವ್​​ ಆಗಿರುತ್ತದೆ. ಹಾಗೇ ಕೆಲವು ಮುಖ್ಯ ಬಣ್ಣಗಳನ್ನು ಬಹುಬೇಗ ಗುರುತಿಸುತ್ತದೆ. ಆ ಕಾರಣದಿಂದ ಕೆಲವು ವಸ್ತುಗಳಿಗೆ ನಿಗದಿತವಾಗಿ ಇದೇ ಬಣ್ಣವನ್ನು ಹಚ್ಚಬೇಕು ಎಂದಿರುತ್ತದೆ. ಸ್ಕೂಲ್​ ಬಸ್​ಗಳಿಗೆ ಯಾವಾಗಲೂ ಹಳದಿ ಬಣ್ಣವನ್ನು ಹಚ್ಚಲಾಗುತ್ತದೆ. ಇದಕ್ಕೆ ಕಾರಣ ಹಳದಿ ಕಣ್ಣಿಗೆ ಎದ್ದು ಕಾಣುತ್ತದೆ. ಇತರ ವಾಹನಗಳಿಗೆ ಅಂತರ ಕಾಪಾಡಿಕೊಂಡು ಸಾಗಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. ಇತರ ಬಣ್ಣಗಳಿಗಿಂತ ಹೆಚ್ಚು ಹಳದಿ ಬಣ್ಣ ನಮ್ಮ ಗಮನ ಸೆಳೆಯುತ್ತದೆ.

ಹಳದಿ ಬಣ್ಣವು ಅಂತಹ ಬಣ್ಣವಾಗಿದ್ದು ಅದನ್ನು ನಾವು ಬಹಳ ದೂರದಿಂದ ಸುಲಭವಾಗಿ ನೋಡಬಹುದು, ಮಳೆ, ಮಂಜು ಮತ್ತು ಇಬ್ಬನಿಯಲ್ಲಿಯೂ ನಾವು ಈ ಬಣ್ಣವನ್ನು ಸುಲಭವಾಗಿ ನೋಡಬಹುದು. ಅಷ್ಟೇ ಅಲ್ಲ, ಹಲವು ಬಣ್ಣಗಳನ್ನು ಒಟ್ಟಿಗೆ ನೋಡಿದರೆ ಹಳದಿ ಬಣ್ಣ ಮೊದಲು ನಮ್ಮ ಗಮನ ಸೆಳೆಯುತ್ತದೆ. ವಿಜ್ಞಾನಿಗಳ ಪ್ರಕಾರ, ಹಳದಿ ಬಣ್ಣದ ಪಾರ್ಶ್ವದ ಬಾಹ್ಯ ದೃಷ್ಟಿ ಕೆಂಪು ಬಣ್ಣಕ್ಕಿಂತ 1.24 ಪಟ್ಟು ಉತ್ತಮವಾಗಿದೆ. ಅಂದರೆ ಹಳದಿ ಬಣ್ಣವು ಇತರ ಬಣ್ಣಗಳಿಗಿಂತ 1.24 ಪಟ್ಟು ಹೆಚ್ಚು ಆಕರ್ಷಣೆಯನ್ನು ಹೊಂದಿದೆ ಮತ್ತು ಇತರ ಬಣ್ಣಗಳಿಗಿಂತ ಹೆಚ್ಚು ಕಣ್ಣುಗಳಿಗೆ ಗೋಚರಿಸುತ್ತದೆ. ನೀವು ನೇರವಾಗಿ ನೋಡದಿದ್ದರೂ ಸಹ, ಹಳದಿ ಬಣ್ಣವನ್ನು ನೀವು ಇನ್ನೂ ಸುಲಭವಾಗಿ ನೋಡಬಹುದು.

ಹೀಗಾಗಿ ಈ ಎಲ್ಲಾ ಕಾರಣಗಳಿಂದ 1930 ರಲ್ಲಿ ಅಮೇರಿಕಾದ ಕೊಲಂಬಿಯ ಯುನಿವರ್ಸಿಟಿಯ ಪ್ರಾಧ್ಯಾಪಕರು ಶಾಲಾ ವಾಹನಗಳಿಗೆ ಹಳದಿಬಣ್ಣ ಇದ್ದರೆ ತುಂಬಾ ಒಳ್ಳೆಯದು ಎಂದು ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದರಂತೆ ಹಾಗಾಗಿ ಅಂದಿನಿಂದಲೂ ಇದೇ ಬಣ್ಣವನ್ನು ಬಳಸಲಾಗುತ್ತಿದೆ.

Leave A Reply

Your email address will not be published.