Indian Railway: ಭಾರತದಲ್ಲಿ ಒಂದು ರೈಲು ತಯಾರಿಸಲು ಆಗುವ ಖರ್ಚೆಷ್ಟು ಗೊತ್ತಾ?! ಲೆಕ್ಕ ಗೊತ್ತಾದ್ರೆ ಹೌಹಾರುತ್ತೀರಾ

Indian Railway : ಭಾರತೀಯ ರೈಲ್ವೆ(Indian Railway) ಇಲಾಖೆ ಬಗ್ಗೆ ಎಲ್ಲರಿಗೂ ತಿಳಿದಿದೆ. ವಿಶ್ವದಾದ್ಯಂತ ನಾಲ್ಕನೇ ಅತಿ ದೊಡ್ಡ ರೈಲ್ವೆ ಪ್ಲಾಟ್ಫಾರ್ಮ್ ನಮ್ಮ ದೇಶದ್ದು ಎಂಬುದು ಎಲ್ಲರಿಗೂ ಹೆಮ್ಮೆಯ ಸಂಗತಿ. ದೇಶದ ಜೀವನಾಡಿಯಾದ ಈ ರೈಲುಗಳು ಪ್ರತಿದಿನ ಸುಮಾರು 2.5 ಕೋಟಿ ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತವೆ. ಪ್ರತಿನಿತ್ಯ 15 ಸಾವಿರ ರೈಲುಗಳು ದೇಶದಲ್ಲಿ ಸಂಚರಿಸುತ್ತವೆ. ಇಂದಿನ ದಿನಗಳಲ್ಲಿ ರೈಲ್ವೇ ಇಲಾಖೆಯಲ್ಲೆ ಆದ ಸುಧಾರಣೆಗಳು, ಅಭಿವೃದ್ಧಗಳು ಊಹೆಗೂ ನಿಲುಕದ್ದು.

ಇಂದು ನಾವು ರೈಲ್ವೆ ಯೋಜನೆಗಳ, ಆದರ ಪ್ರೋಜನಗಳ ಬಗ್ಗೆ ಸಾಕಷ್ಟು ತಿಳಿಯುತ್ತೇವೆ. ಆ ಬಗ್ಗೆ ನಿರಂತರವಾಗಿ ಅಪ್ಡೇಟ್ ಇರುತ್ತೇವೆ. ಆದರೆ ಒಂದು ರೈಲಿನ ನಿರ್ಮಾಣದ ಬಗ್ಗೆ ಎಂದಾದರೂ ತಿಂಕ್ ಮಾಡಿದ್ದೇವೆಯಾ? ಅಷ್ಟು ಉದ್ದದ ರೈಲನ್ನು ಹೇಗೆ ತಯಾರಿಸುತ್ತಾರೆ? ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂದು. ಇಲ್ಲ ಅಲ್ವಾ? ಹಾಗಿದ್ರೆ ಇಲ್ಲಿದೆ ನೋಡಿ ಆ ಕುರಿತು ಸಂಪೂರ್ಣ ಮಾಹಿತಿ.

ರೈಲು ತಯಾರಿಕೆಯಲ್ಲಿ ಒಂದೇ ರೀತಿಯ ಖರ್ಚುವೆಚ್ಚಗಳಿರವುದಿಲ್ಲ. ಬದಲಾವಣೆ ಇದೆ. ಯಾಕೆಂದರೆ ರೈಲಿನಲ್ಲಿ ಹಲವು ರೀತಿಯ ಕೋಚ್‌ಗಳು ಇರುವುದನ್ನು ನೀವು ನೋಡಬಹುದು. ಜನರಲ್ ಕೋಚ್, ಸ್ಲೀಪರ್ ಕೋಚ್ ಮತ್ತು ಎಸಿ ಕೋಚ್. ಹೀಗಾಗಿ ಒಂದೊಂದು ಕೋಚ್‌ಗಳನ್ನು ತಯಾರಿಸಲು ಒಂದೊಂದು ರೀತಿ ಹಣ ಖರ್ಚಾಗುತ್ತದೆ. ಅವುಗಳ ಖರ್ಚು ಈ ಕೆಳಗಿನಂತಿವೆ.

* ಜರಲ್‌ ಕೋಚ್‌: ಜನರಲ್ ಅಥವಾ ಡಿ ದರ್ಜೆಯ ಒಂದು ಕೋಚ್‌ಅನ್ನು ತಯಾರಿಸಲು ರೈಲ್ವೇಸ್‌ಗೆ 1 ಕೋಟಿ ರೂಪಾಯಿ ಖರ್ಚಾಗುತ್ತದೆ.
* ಸ್ಲೀಪರ್‌ ಕೋಚ್ : ಈ ಒಂದು ಬೋಗಿ ತಯಾರು ಮಾಡಲು 1.5 ಕೋಟಿ ರೂಪಾಯಿ ವೆಚ್ಚವಾಗುತ್ತದೆ.
* ಎಸಿ ಕೋಚ್‌: ಎಸಿಯ ಒಂದು ಕೋಚ್ ತಯಾರು ಮಾಡಲು 2 ಕೋಟಿ ರೂಪಾಯಿ ವೆಚ್ಚವಾಗುತ್ತದೆ.

ವಿವಿಧ ರೈರುಗಳ ತಯಾರಿಕಾ ಖರ್ಚು:
20 ಕೋಚ್‌ಗಳ ಸಾಮಾನ್ಯ ಮೆಮು ಟ್ರೇನ್‌ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಖರ್ಚಾಗಲಿದೆ. 25 ಕೋಚ್‌ಗಳ ಐಸಿಎಫ್‌ ಟೈಪ್‌ನ ಮೇಲ್‌ ಎಕ್ಸ್‌ಪ್ರೆಸ್‌ ನಿರ್ಮಾಣಕ್ಕೆ 40.3 ಕೋಟಿ ರೂಪಾಯಿ ಖರ್ಚಾಗಲಿದೆ. ಇನ್ನು 21 ಬೋಗಿಯ ಎಲ್‌ಎಚ್‌ಬಿ ಟೈಪ್‌ನ ರಾಜಧಾನಿ ಎಕ್ಸ್‌ಪ್ರೆಸ್‌ ನಿರ್ಮಾಣಕ್ಕೆ 61.5 ಕೋಟಿ ರೂಪಾಯಿ ಖರ್ಚಾಗುತ್ತದೆ. 19 ಕೋಚ್‌ಗಳ ಎಲ್‌ಎಚ್‌ಬಿ ಟೈಪ್‌ನ ಶತಾಬ್ದಿ ಎಕ್ಸ್‌ಪ್ರೆಸ್‌ ನಿರ್ಮಾಣಕ್ಕೆ 60 ಕೋಟಿ ರೂಪಾಯಿ ವೆಚ್ಚವಾಗುತ್ತದೆ.

ಅಲ್ಲದೆ ರೈಲಿನ ಒಂದು ಇಂಜಿನ್‌ ತಯಾರಿಸಲು 18-20 ಕೋಟಿ ರೂಪಾಯಿ ಬೇಕಾಗುತ್ತದೆ. ಒಟ್ಟಿನಲ್ಲಿ ಇದರಿಂದಾಗಿ 24 ಬೋಗಿಗಳ ಒಂದು ಸಾಮಾನ್ಯ ರೈಲನ್ನು ನಿರ್ಮಾಣ ಮಾಡಲು ಭಾರತೀಯ ರೈಲ್ವೇ ಬರೋಬ್ಬರಿ 60 ರಿಂದ 70 ಕೋಟಿಖರ್ಚು ಮಾಡುತ್ತದೆ.

Leave A Reply

Your email address will not be published.