White hair home remedies: ಕೂದಲು ಬಿಳಿಯಾಗದಂತೆ ದಷ್ಟಪುಷ್ಟವಾಗಿ ಬೆಳೆಸುವ ಸೀಕ್ರೆಟ್ ಇಲ್ಲಿದೆ!

Share the Article

White hair home remedies: ಕೂದಲು ಬಿಳಿಯಾಗುವ ಸಮಸ್ಯೆಯಿಂದ ಹಲವರು ಹತಾಶೆ ಹೊಂದಿರುವುದಂತು ಸತ್ಯ. ಹಾಗಿದ್ರೆ ವಯಸ್ಸಾದಂತೆ ಕೂದಲು ಬೆಳ್ಳಗಾಗುವುದನ್ನು ತಡೆಯಲು ಏನು ಮಾಡಬೇಕು ಅನ್ನೋದು ಇಲ್ಲಿದೆ ನೋಡಿ.

ಮುಖ್ಯವಾಗಿ ಬಿಳಿ ಕೂದಲು ಇದ್ದರೆ ಅದನ್ನು ಕಪ್ಪಾಗಾಗಿಸಲು ಅಲೋವೆರಾ ಜೆಲ್‌ ಅನ್ನು ಬಳಕೆ ಮಾಡಬಹುದು. ಇದರ ಸಹಾಯದಿಂದ ಕೂದಲು ಕಪ್ಪಾಗುವುದು ಮಾತ್ರವಲ್ಲದೆ ದಟ್ಟವಾಗಿ, ಮೃದುವಾಗಿ ಮತ್ತು ಉದ್ದವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ನೀವು ಅಲೋವೆರಾ ಜೆಲ್ ಹೇರ್ ಮಾಸ್ಕ್ ಮಾಡಲು ಇದಕ್ಕೆ ಬೇಕಾಗಿರೋದು ಅಲೋವೆರಾ ಜೆಲ್ 1 ಸಣ್ಣ ಕಪ್, ತೆಂಗಿನ ಎಣ್ಣೆ 2 ಟೀ ಚಮಚ, ಮೆಹಂದಿ ಪುಡಿ 2 ಟೀ ಚಮಚ.

ಅಲೋವೆರಾ ಜೆಲ್ ಹೇರ್ ಮಾಸ್ಕ್ ಮಾಡುವ ನಿಧಾನ: ಮೊದಲು 1 ಬೌಲ್ ತೆಗೆದುಕೊಳ್ಳಿ. ಅದರಲ್ಲಿ ಅಲೋವೆರಾ ಜೆಲ್, ಗೋರಂಟಿ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಸೇರಿಸಿ. ನಂತರ, ಈ ಎಲ್ಲಾ ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿ. ಈಗ ಅಲೋವೆರಾ ಜೆಲ್ ಹೇರ್ ಮಾಸ್ಕ್ ಸಿದ್ಧವಾಗಿದೆ.

ಅಲೋವೆರಾ ಜೆಲ್ ಹೇರ್ ಮಾಸ್ಕ್ ಅನ್ನು ಹಚ್ಚುವ ಮೊದಲು ಕೂದಲನ್ನು ಚೆನ್ನಾಗಿ ತೊಳೆಯಿರಿ. ನಂತರ ಸಿದ್ಧಪಡಿಸಿದ ಪ್ಯಾಕ್ ಅನ್ನು ನೆತ್ತಿ ಮತ್ತು ಕೂದಲಿಗೆ ಸಂಪೂರ್ಣವಾಗಿ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ.

Leave A Reply

Your email address will not be published.