Crocodile: ಮನೆಯ ಛಾವಣಿ ಹತ್ತಿ ಕುಳಿತ ಮೊಸಳೆ! ಅಲ್ಲಿ ಹೋಗಿದ್ದು ಹೇಗೆ ?
Crocodile: ನೀವೆಲ್ಲರೂ ಮನೆ ಮೇಲೆ ಹಕ್ಕಿ ಕುಳಿತಿರುವುದನ್ನು ನೋಡಿರುತ್ತೀರ. ಕೆಲವೊಮ್ಮೆ ಬೆಕ್ಕು ಕುಳಿತಿದ್ದನ್ನೂ ನೋಡಿರಬಹುದು. ಆದರೆ ಮೊಸಳೆಯೊಂದು ಮನೆ ಮೇಲ್ಛಾವಣಿ ಮೇಲೆ ಕುಳಿತಿರುವುದನ್ನು ನೋಡಿದ್ದೀರಾ?
ಬೆರಗಾಗಬೇಡಿ. ಇದು ನಡೆದಿರುವುದು ಗುಜರಾತ್ ನ ವಡೋದರದಲ್ಲಿ. ಹೌದು ಗೆಳೆಯರೇ. ಕಳೆದ ಮೂರು ದಿನಗಳಿಂದ ಗುಜರಾತ್ ನಲ್ಲಿ ಸುರಿಯುತ್ತಿರುವ ಮಳೆ ಹಳ್ಳ ಕೊಳ್ಳ, ನದಿ – ಡ್ಯಾಮ್ ಎಲ್ಲವನ್ನೂ ತುಂಬುವಂತೆ ಮಾಡಿದೆ.
ವಡೋದರ ಅಕೋಟ ಕ್ರೀಡಾಂಗಣ ಪ್ರದೇಶದ ಸುತ್ತಮುತ್ತ ನೀರು ಆವರಿಸಿದ್ದು, ಮನೆಯ ಮೇಲ್ಛಾವಣಿವರೆಗೂ ನೀರು ನಿಂತಿದೆ. ಈ ಸಂದರ್ಭದಲ್ಲಿ ದೈತ್ಯ ಮೊಸಳೆಯೊಂದು ಮನೆ ಮೇಲ್ಛಾವಣಿಯಲ್ಲಿ ವಿಶ್ರಾಂತಿ ಪಡೆದಿದೆ.
ಕಳೆದ 24 ಗಂಟೆಗಳಿಂದ ಗುಜರಾತ್ ನ ರಾಜಕೋಟ್, ಪೋರಬಂದರ್, ದ್ವಾರಕ, ಜಾಮನಗರ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೆ 26 ಜನ ಮಳೆಯಿಂದಾಗಿ ಜೀವ ಕಳೆದುಕೊಂಡಿದ್ದಾರೆ. 17, 800 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದು, ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ತಂಡದ ನಿಯೋಜನೆಯಾಗಿದೆ. ಗುರುವಾರವೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.