Unhealthy food: ವಿಶ್ವ ಆರೋಗ್ಯ ಸಂಸ್ಥೆಯಿಂದ ಅನಾರೋಗ್ಯ ಆಹಾರ ಪಟ್ಟಿ ಬಿಡುಗಡೆ: ದಿನನಿತ್ಯದ ಈ ಆಹಾರ ಜೀವಕ್ಕೆ ಹಾನಿ!

Unhealthy food: ನಾವು ಎಷ್ಟೆಲ್ಲ ಅನಾರೋಗ್ಯಕರ ಆಹಾರಗಳನ್ನು ಸೇವಿಸುತ್ತಿದ್ದೇವೆ ಎಂಬ ಯೋಚನೆ ಆರಂಭಗೊಂಡಿರುವುದಂತೂ ಸತ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಈ ವಿಚಾರ ತಿಳಿಯಲೇಬೇಕು. ಹೌದು, ವಿಶ್ವ ಆರೋಗ್ಯ ಸಂಸ್ಥೆಯು ಅನಾರೋಗ್ಯಕರ ಆಹಾರ (Unhealthy food) ಪದಾರ್ಥಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಶಾಕಿಂಗ್ ವಿಚಾರ ಏನೆಂದರೆ ಈ ಪಟ್ಟಿಯಲ್ಲಿ ನಾವು ದಿನನಿತ್ಯ ಅಡುಗೆ ಮನೆಯಲ್ಲಿ ಬಳಕೆ ಮಾಡುವ ವಸ್ತುಗಳೇ ಪಟ್ಟಿಯಲ್ಲಿ ಮೊದಲಿದೆ.
ಹಾಗಾದರೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆಗೊಳಿಸಿರುವ ಆ ಪಟ್ಟಿಯಲ್ಲಿ ಇರುವ ಕೆಟ್ಟ ಆಹಾರಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ :
ಕಾಫಿ:
ಕಾಫಿ ಇಲ್ಲದೆ ಬಹುತೇಕರ ದಿನ ಆರಂಭ ಆಗೋದೇ ಇಲ್ಲ. ಆದ್ರೆ ಈ ಕಾಫಿಯಲ್ಲಿ ಕೆಫಿನ್ ಇರುವ ಕಾರಣ ಇದು ತಲೆನೋವು, ನಿದ್ರಾಹೀನತೆ, ಖಿನ್ನತೆ, ಅಧಿಕ ರಕ್ತದೊತ್ತಡ ಹಾಗೂ ಆಯಾಸ ಸೇರಿದಂತೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಅಲ್ಲದೆ ಅಧಿಕ ರಕ್ತದೊತ್ತಡ ಹಾಗೂ ಹೃದಯ ರಕ್ತನಾಳ ಸಂಬಂಧಿ ಸಮಸ್ಯೆಗಳಿಗೂ ಕಾಫಿ ಸೇವನೆ ಕಾರಣ ಆಗಿದೆ.
ಸಕ್ಕರೆ:
ದಿನನಿತ್ಯ ಸಕ್ಕರೆ ಬಳಕೆ ಕಡಿಮೆ ಪ್ರಮಾಣದಲ್ಲಿ, ಸೇವಿಸುವುದು ಸೂಕ್ತ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಸಲಹೆ ನೀಡಿದೆ. ಯಾಕೆಂದರೆ ಸ್ಥೂಲಕಾಯ ಹಾಗೂ ಮಧುಮೇಹದಂತಹ ಮಾರಕ ಸಮಸ್ಯೆಗಳಿಗೆ ಪ್ರಮುಖ ಕಾರಣ ಸಕ್ಕರೆ ಆಗಿದೆ. ಇನ್ನು ಯಕೃತ್ತು ಹಾಗೂ ಜೀರ್ಣಕ್ರಿಯೆ ವ್ಯವಸ್ಥೆಗೆ ಸಕ್ಕರೆ ಪರಿಣಾಮ ಬೀರುತ್ತೆ.
ಕರಿದ ಆಹಾರ ಪದಾರ್ಥಗಳು:
ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ ದೇಹದಲ್ಲಿ ಕೊಬ್ಬು ಹೆಚ್ಚಿಸುವುದರ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣ ಆಗುತ್ತೆ. ಇನ್ನು ಸ್ಥೂಲಕಾಯದ ಸಮಸ್ಯೆಗೆ ಕರಿದ ಆಹಾರ ಪದಾರ್ಥಗಳ ಸೇವನೆ ಕೂಡ ಪ್ರಮುಖ ಕಾರಣವಾಗಿದೆ.
ಪಾಸ್ತಾ ಹಾಗೂ ಬ್ರೆಡ್:
ಅನಾರೋಗ್ಯಕರ ಆಹಾರದ ಪೈಕಿ ಸಂಸ್ಕರಿಸಿ ಇರಿಸಲಾದ ಕಾರ್ಬೋಹೈಡ್ರೇಟ್ ಪದಾರ್ಥಗಳನ್ನು ತಿನ್ನಲೇ ಬಾರದು. ಇದರಿಂದ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತದೆ. ಹೀಗಾಗಿ ಸಂಸ್ಕರಿಸಿದ ಆಹಾರಗಳನ್ನು ತ್ಯಜಿಸಿ ತಾಜಾ ಆಹಾರಗಳನ್ನು ಸೇವನೆ ಮಾಡಬೇಕು.
ಆಲೂಗಡ್ಡೆ ಚಿಪ್ಸ್ ಮತ್ತು ಪಾಪ್ಕಾರ್ನ್:
ಆಲೂಗಡ್ಡೆ ಚಿಪ್ಸ್ ಹಾಗೂ ಮೈಕ್ರೋವೇವ್ ಪಾಪ್ಕಾರ್ನ್ ಗಳಂತಹ ಸಂಸ್ಕರಿಸಿದ ತಿಂಡಿಗಳನ್ನು ಸೇವನೆ ಮಾಡದಿರುವುದೇ ಸೂಕ್ತ. ಇವುಗಳು ಕೆಟ್ಟ ಕೊಬ್ಬನ್ನು ಉತ್ಪತ್ತಿ ಮಾಡುತ್ತದೆ.
ಸಂಸ್ಕರಿಸಿದ ಮಾಂಸಗಳು:
ಸಂಸ್ಕರಿಸಿದ ಮಾಂಸಗಳನ್ನು ಎಂದಿಗೂ ಸೇವನೆ ಮಾಡಬಾರದು. ಇವುಗಳಲ್ಲಿ ಸೋಡಿಯಂ ಹಾಗೂ ನೈಟ್ರೇಟ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳನ್ನು ತರುತ್ತದೆ.
ಚೀಸ್:
ಚೀಸ್‍ನಂತಹ ಕೊಬ್ಬಿನಂಶ ಅಧಿಕವಾಗಿರುವ ಡೈರಿ ಉತ್ಪನ್ನಗಳನ್ನು ಸೇವಿಸಬಾರದು. ಇವುಗಳು ಹೃದ್ರೋಗ ಹಾಗೂ ಸ್ಥೂಲಕಾಯದಂತಹ ಅಪಾಯಕಾರಿ ಕಾಯಿಲೆಗಳನ್ನು ತರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಪಟ್ಟಿ ಮಾಡಿದೆ.