Kangana Ranaut: ರೈತರ ಪ್ರತಿಭಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ – ತನ್ನದೇ ಸಂಸದೆ ಕಂಗನಾಗೆ ಛೀಮಾರಿ ಹಾಕಿದ ಬಿಜೆಪಿ !!

Kangana Ranaut: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರ ಬಗ್ಗೆ ನಟಿ, ಸಂಸದೆ ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದರಿಂದ ಸಿಟ್ಟುಗೊಂಡ ಬಿಜೆಪಿ ಹೈಕಮಾಂಡ್(BJP Highcomand)ಕಂಗನಾಗೆ ಖಡಕ್ ವಾರ್ನಿಂಗ್ ನೀಡಿದೆ.

ಮಂಡಿ (Mandi) ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್(Kangana Ranaut)’ದೇಶದಲ್ಲಿ ಬಾಂಗ್ಲಾದೇಶದಂತಹ ಅರಾಜಕತೆ ಸೃಷ್ಟಿಸಲು ರೈತರ ಪ್ರತಿಭಟನೆಯಲ್ಲಿ ಯೋಜನೆ ರೂಪಿಸಲಾಗಿತ್ತು’ ಎಂದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಕಿಡಿಕಾರಿದ ಬಿಜೆಪಿ, ಕಂಗನಾ ಹೇಳಿಕೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, “ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಕಂಗನಾ ರಣಾವತ್ ನೀಡಿರುವ ಹೇಳಿಕೆ ಪಕ್ಷದ ಅಭಿಪ್ರಾಯವಲ್ಲ. ಸಂಸದೆಯ ರೈತ ವಿರೋಧಿ ಹೇಳಿಕೆ ಒಪ್ಪಲು ಸಾಧ್ಯವಿಲ್ಲ” ಎಂದು ಹೇಳಿದೆ.

ಅಲ್ಲದೆ ಬಿಜೆಪಿ ಪರವಾಗಿ, ಪಕ್ಷದ ಮತ್ತು ಸರ್ಕಾರದ ನೀತಿಗಳ ಕುರಿತು ಹೇಳಿಕೆ ನೀಡಲು ಕಂಗನಾ ರಣಾವತ್ ಅವರಿಗೆ ಅನುಮತಿ ಇಲ್ಲ ಅಥವಾ ಅಧಿಕಾರ ಇಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಜೊತೆಗೆ ಕಂಗನಾ ರಣಾವತ್‌ ಅವರಿಗೆ ಭವಿಷ್ಯದಲ್ಲಿ ಭಾರತೀಯ ಜನತಾ ಪಕ್ಷದ ಪರವಾಗಿ ಇಂತಹ ಯಾವುದೇ ಹೇಳಿಕೆಗಳನ್ನು ನೀಡದಂತೆ ನಿರ್ದೇಶನ ನೀಡಲಾಗಿದೆ. ಭಾರತೀಯ ಜನತಾ ಪಕ್ಷವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್’ ಮತ್ತು ಸಾಮಾಜಿಕ ಸಾಮರಸ್ಯದ ತತ್ವಗಳನ್ನು ಅನುಸರಿಸಲು ಬದ್ಧವಾಗಿದೆ” ಎಂದು ಬಿಜೆಪಿ ಹೇಳಿದೆ.

ಕಂಗನಾ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ರಣಾವತ್, ಬಾಂಗ್ಲದೇಶದಲ್ಲಿ ಆಗಿರುವ ಪರಿಸ್ಥಿತಿ, ಭಾರತದಲ್ಲಿಯೂ ಆಗುವ ದಿನಗಳು ದೂರವಿಲ್ಲ. ನಮ್ಮ ಉನ್ನತ ನಾಯಕತ್ವತೆ ಬಲಿಷ್ಠವಾಗಿರದಿದ್ರೆ, ರೈತರ ಪ್ರತಿಭಟನೆ ಸಮಯದಲ್ಲಿ ಕೊಲೆಗಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿದ್ದವು. ರೈತರ ಪರವಾಗಿದ್ದ ಕಾನೂನುಗಳನ್ನು ಹಿಂಪಡೆದುಕೊಂಡಾಗ ಇಡೀ ದೇಶ ಶಾಕ್ ಆಗಿತ್ತು. ಆದರೂ ಇಂದಿಗೂ ರೈತರು ಅಲ್ಲಿಯೇ ಕುಳಿತಿದ್ದಾರೆ. ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ವಾಪಸ್‌ ತೆಗೆದುಕೊಂಡಿತು. ಇಲ್ಲದಿದ್ದರೆ ದೆಹಲಿ ಗಡಿಯಲ್ಲಿ ಕುಳಿತಿದ್ದ ದುಷ್ಕರ್ಮಿಗಳು ದೇಶದಲ್ಲಿ ಏನೂ ಬೇಕಾದರೂ ಮಾಡುತ್ತಿದ್ದರು’

ಪ್ರತಿಭಟನಾನಿರತ ರೈತರು ಕೃಷಿ ಕಾನೂನುಗಳನ್ನು ಸರ್ಕಾರ ಕೃಷಿ ಬಿಲ್ ವಾಪಸ್ ತೆಗೆದುಕೊಳ್ಳುತ್ತೆ ಅಂತ ಎಂದಿಗ ಊಹಿಸಿರಲಿಲ್ಲ. ಅದೊಂದು ದೊಡ್ಡ ಪ್ಲಾನ್ ಆಗಿತ್ತು. ಇಂದು ಬಾಂಗ್ಲಾದೇಶದಲ್ಲಿ ಆದಂತೆ ಮಾಡುವ ಪ್ಲಾನ್ ಆಗಿತ್ತು. ನಮ್ಮ ದೇಶದಲ್ಲಿ ರೈತರ ಹೆಸರಿನಲ್ಲಿ ವಿದೇಶಿ ಶಕ್ತಿಗಳು ಕೆಲಸ ಮಾಡುತ್ತಿವೆ. ದೇಶಕ್ಕೆ ಏನಾದ್ರೂ ಆಗಲಿ ತಮಗೆ ಲಾಭ ಆಗಬೇಕೆಂದು ಕೆಲವರು ಯೋಚಿಸಿದ್ದರು. ದೇಶ ಅಭಿವೃದ್ಧಿಯಾದರೆ ಎಲ್ಲರ ಬೆಳವಣಿಗೆ ಆದಂತೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು ಎಂದು ಕಂಗನಾ ರಣಾವತ್ ಹೇಳಿಕೆಯನ್ನು ನೀಡಿದ್ದರು.

Leave A Reply

Your email address will not be published.