Snacks: ಡ್ರಿಂಕ್ಸ್ ಮಾಡುವಾಗ ತಪ್ಪಿಯೂ ಇವುಗಳನ್ನು ತಿನ್ನಬೇಡಿ – ಜೀವವೇ ಹೋದೀತು ಹುಷಾರ್ !!

Snacks: ಮದ್ಯ ಸೇವಿಸುವುದು ಇತ್ತೀಚೆಗೆ ಕಾಮನ್ ಆಗಿದೆ. ಆದರೂ ಕೂಡ ಎಷ್ಟು ಕುಡಿಬೇಕು? ಕುಡಿಯುವಾಗ ಏನನ್ನು ನಂಚಿಕೊಳ್ಳಬೇಕು ಎಂಬುದರ ಬಗ್ಗೆ ತಿಳುವಳಿಕೆ ಇರಬೇಕಾದದ್ದು ಒಳ್ಳೆಯದು. ಮುಖ್ಯವಾಗಿ ಮದ್ಯಪಾನ ಮಾಡುವಾಗ ಹಲವರಿಗೆ ಸ್ನ್ಯಾಕ್ಸ್(Snacks) ಇರಲೇ ಬೇಕು. ಆದ್ರೆ ಏನನ್ನು ತಿನ್ನಬೇಕು ಎಂಬ ಅರಿವೂ ಕೂಡ ಇದ್ದರೆ ಒಳಿತು. ಡ್ರಿಂಕ್ಸ್ ಮಾಡುವಾಗ ನಾವು ನಂಚಿಕೊಳ್ಳುವ ಕೆಲವು ಆಹಾರ ಪದಾರ್ಥಗಳು ನಮ್ಮ ಜೀವಕ್ಕೇ ಕುತ್ತುತರಬಹುದು. ಹೀಗಾಗಿ ಈ ಬರಹದಲ್ಲಿ ನಾವು ಇದರ ಬಗ್ಗೆ ತಿಳಿಸಿಕೊಡಲಿದ್ದೇವೆ.

 

* ಮೊಟ್ಟೆಗಳು : ಮೊಟ್ಟೆಯಲ್ಲಿ ಸಾಕಷ್ಟು ಪ್ರೊಟೀನ್ ಇರುತ್ತದೆ. ಇದು ಆಲ್ಕೋಹಾಲ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಹೆಚ್ಚು ಕಾಲ ಮದ್ಯ ದೇಹದಲ್ಲಿ ಇರುವಂತೆ ಮಾಡುತ್ತದೆ.

* ಉಪ್ಪು ಆಹಾರಗಳು : ಆಲ್ಕೋಹಾಲ್ ಜೊತೆಗೆ ಫ್ರೆಂಚ್ ಫ್ರೈಸ್ ನಂತಹ ಉಪ್ಪು ಇರುವ ಆಹಾರಗಳನ್ನು ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಇದರಲ್ಲಿ ಸೋಡಿಯಂ ಅಧಿಕವಾಗಿರುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.

* ಸೋಡಾ ಅಥವಾ ತಂಪು ಪಾನೀಯಗಳು : ಕೆಲವರಿಗೆ ಸೋಡಾ ಅಥವಾ ತಂಪು ಪಾನೀಯಗಳ ಜೊತೆಗೆ ಮದ್ಯಪಾನ ಮಾಡುವ ಅಭ್ಯಾಸವಿರುತ್ತದೆ. ಈ ಅಭ್ಯಾಸವು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ. ಆಲ್ಕೋಹಾಲ್ ಜೊತೆಗೆ ಸೋಡಾ ಅಥವಾ ತಂಪು ಪಾನೀಯಗಳನ್ನು ಮಿಶ್ರಣ ಮಾಡುವುದು ದೇಹವನ್ನು ನಿರ್ಜಲೀಕರಣಗೊಳ್ಳುತ್ತದೆ.

ಪಿಜ್ಜಾ: ಅನೇಕ ಜನರು ಆಲ್ಕೋಹಾಲ್ ಜೊತೆ ಪಿಜ್ಜಾ ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಎರಡು ಪದಾರ್ಥಗಳನ್ನು ಒಟ್ಟಿಗೆ ತಿನ್ನಬಾರದು. ತಿಂದರೆ ಅದು ತೀವ್ರ ಹೊಟ್ಟೆ ನೋವಿಗೆ ಕಾರಣವಾಗುತ್ತದೆ.

* ಹಣ್ಣುಗಳು : ಹಣ್ಣುಗಳಲ್ಲಿ ನೀರಿನಂಶ ಹೆಚ್ಚಿರುವ ಕಾರಣ ಆಲ್ಕೋಹಾಲ್ ಜೊತೆ ತಿನ್ನುವುದರಿಂದ ಕರುಳಿನ ಅಲರ್ಜಿ ಉಂಟಾಗುತ್ತದೆ.

* ಸಿಹಿತಿಂಡಿಗಳು: ಮದ್ಯಪಾನ ಮಾಡುವಾಗ ಸಿಹಿ ತಿನ್ನಬೇಡಿ. ಮದ್ಯದ ಜೊತೆಗೆ ಸಿಹಿಯನ್ನು ಬೆರೆಸಿ ಸೇವಿಸಿದರೆ ಅಮಲು ದುಪ್ಪಟ್ಟಾಗುತ್ತದೆ. ಈ ಕಾರಣದಿಂದಾಗಿ, ವ್ಯಕ್ತಿಯು ತನ್ನ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಾನೆ.

Leave A Reply

Your email address will not be published.