Chennapattana election: ಚನ್ನಪಟ್ಟಣದಿಂದ ನಾನು ಸ್ಪರ್ಧಿಸಲ್ಲ ಎಂದ ನಿಖಿಲ್! ಹಾಗಾದರೆ ಟಿಕೆಟ್‌ ಯಾರಿಗೆ..?

Chennapattana election: ಮುಂಬರುವ ಚನ್ನಪಟ್ಟಣ(Chennapattana) ಕ್ಷೇತ್ರದ ಉಪ ಚುನಾವಣೆಗೆ(By Elction) ನಾನು ಜೆಡಿಎಸ್ ಟಿಕೆಟ್(JDS tiket) ಆಕಾಂಕ್ಷಿಯಲ್ಲ, ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಯುವ ಜೆಡಿಎಸ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ(NiKhil Kumaraswami) ಸ್ಪಷ್ಟಪಡಿಸಿದ್ದಾರೆ. ಚನ್ನಪಟ್ಟಣದ ಹೊಂಗನೂರು ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಸದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಆಲಿಸುವ ಜತೆಗೆ ಜನರ ಸಮಸ್ಯೆಗಳನ್ನು ಅರಿಯಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಚನ್ನಪಟ್ಟಣ, ಶಿಗ್ಗಾಂವ್, ಸಂಡೂರು ಕ್ಷೇತ್ರಗಳ ಉಪ ಚುನಾವಣೆಗೆ ಶೀಘ್ರವೇ ದಿನಾಂಕ ಘೋಷಣೆಯಾಗಲಿದೆ.

ತಳಮಟ್ಟದ ಕಾರ್ಯಕರ್ತನನ್ನು ಗುರ್ತಿಸಿ, ಟಿಕೆಟ್ ನೀಡುವ ಮೂಲಕ ಗೆಲ್ಲಿಸಿಕೊಳ್ಳುವ ಉದ್ದೇಶವನ್ನು ಅವರು ಇದೇ ವೇಳೆ ಬಹಿರಂಗಪಡಿಸಿದರು. ಜನರ ಸಮಸ್ಯೆ ಆಲಿಸುವುದಲ್ಲದೆ, ಉಪ ಚುನಾವಣೆ ಸಂಬಂಧ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜತೆ ಚರ್ಚೆ ನಡೆಸಲಾಗುವುದು. ಉಪ ಚುನಾವಣೆಗೆ ಎನ್‌ಡಿಎ(NDA) ಮೈತ್ರಿಕೂಟದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿದರೆ, ಗೆಲುವು ಸುಲಭ ಸಾಧ್ಯ ಎಂದು ಹೇಳಿದರು. ಚನ್ನಪಟ್ಟಣ ಕ್ಷೇತ್ರದ ಚಿತ್ರಣ ಕುರಿತಂತೆ ಈಗಾಗಲೇ ವರದಿ ಸಿದ್ಧಪಡಿಸಿದ್ದೇವೆ. ಸದರಿ ವರದಿಯನ್ನು ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್(BJP High Commmand) ನಾಯಕರ ಗಮನಕ್ಕೆ ತಂದು, ಚರ್ಚೆ ನಡೆಸಲಿದ್ದಾರೆ. ಯಾವ ಕಾರಣಕ್ಕೂ ನಾನು ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ಅಂತಹ ಆಲೋಚನೆಯಿಂದ ಕ್ಷೇತ್ರ ಪ್ರವಾಸ ಕೈಗೊಂಡಿಲ್ಲ ಎಂದು ನಿಖಿಲ್ ಸ್ಪಷ್ಟಪಡಿಸಿದರು.

ಸಾರ್ವತ್ರಿಕ ಚುನಾವಣೆಗೆ ಮೂರು ಮುಕ್ಕಾಲು ವರ್ಷ ಬಾಕಿ ಇದೆ. ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಲು ನಾನು ಕೆಲಸ ಮಾಡಲು ಇಲ್ಲಿಗೆ ಬಂದಿದ್ದೇನೆ. ಮುಂದಿನ ವಾರ ಜಿಲ್ಲಾ ಪ್ರವಾಸ ನಿಗದಿಪಡಿಸಿದ್ದು, ಸದ್ಯ ಚನ್ನಪಟ್ಟಣದ ಕಾರ್ಯಕರ್ತರ ಭಾವನೆಗೆ ಸ್ಪಂದಿಸಲು ಮುಂದಾಗಿದ್ದೇನೆ ಎಂದರು.

ಚನ್ನಪಟ್ಟಣ ಉಪ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಂಬಂಧ ದೆಹಲಿ ಮಟ್ಟದಲ್ಲೇ ತೀರ್ಮಾನವಾಗಲಿದೆ. ಸಿ.ಪಿ.ಯೋಗೇಶ್ವರ್(C P Yogeshwar) ಅವರು ಬಿಜೆಪಿ ಪಕ್ಷದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಉಪ ಚುನಾವಣೆ ಎದುರಿಸಲಾಗುವುದು ಎಂದು ನಿಖಿಲ್ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಯೋಗೇಶ್ವರ್ ಮತ್ತು ಕುಮಾರಸ್ವಾಮಿ ನಡುವೆ ಯಾವುದೆ ಅಪಸ್ವರಕ್ಕೂ ದಾರಿ ಮಾಡಿಕೊಟ್ಟಿಲ್ಲ. ದೆಹಲಿ ಮಟ್ಟದಲ್ಲಿ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ತಲೆಬಾಗಿ ಕೆಲಸ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಯೋಗೇಶ್ವರ್ ಅವರನ್ನು ಬಿಟ್ಟು ಚುನಾವಣೆ ಎದುರಿಸುವ ಮಾತೇ ಇಲ್ಲ ಎಂದರು. ನಾನು ಶಾಸಕನಾಗಬೇಕು, ವಿಧಾನಸಭೆ ಪ್ರವೇಶಿಸಬೇಕು ಎನ್ನುವ ನಿರೀಕ್ಷೆ ಇಟ್ಟುಕೊಂಡಿಲ್ಲ.

ಎಚ್.ಡಿ.ದೇವೇಗೌಡ ಅವರು ಕಟ್ಟಿರುವ ಪ್ರಾದೇಶಿಕ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ, ಬಲತುಂಬುವ ಕೆಲಸವನ್ನಷ್ಟೇ ನಾನು ಪ್ರಾರಂಭಿಸಿದ್ದೇನೆ. ನನ್ನ ಗುರಿ ಇಡೀ ರಾಜ್ಯದಲ್ಲಿ ಪಕ್ಷ ಸಂಘಟಿಸುವುದಾಗಿದೆ ಎಂದು ಸ್ಪಷ್ಟನೆ ನೀಡಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಅನಿವಾರ್ಯ ಎನ್ನುವ ಪರಿಸ್ಥಿತಿ ಎದುರಾದಲ್ಲಿ ಅಂತಹ ಅವಕಾಶವನ್ನು ಪಕ್ಷದ ಸಾಮಾನ್ಯ ಕಾರ್ಯಕರ್ತರೊಬ್ಬರಿಗೆ ಮಾಡಿಕೊಡಲಾಗುವುದು. ಇಲ್ಲಿ ಯಾವುದೇ ವೈಯಕ್ತಿಕ ಪ್ರತಿಷ್ಠೆಗೆ ಅವಕಾಶವಿಲ್ಲ. ನನಗಂತೂ ಯಾವುದೇ ಆಸೆ, ಆಕಾಂಕ್ಷೆಯೂ ಇಲ್ಲ ಎಂದು ತಿಳಿಸಿದರು.

Leave A Reply

Your email address will not be published.