Ration Shop: ಪಡಿತರ ಅಂಗಡಿ ‘ಜನ ಪೋಷಣಾ ಕೇಂದ್ರ’ ಆಗಲಿದೆ! ಇನ್ಮುಂದೆ ಇಲ್ಲಿ ಸಿರಿಧಾನ್ಯ, ಡೈರಿ ಉತ್ಪನ್ನ, ಬೇಳೆ ಕಾಳು ಮಾರಾಟ!

Ration Shop: ಪಡಿತರ ಅಂಗಡಿಗಳ ಕೆಲವು ಕೊರತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಪ್ರಲ್ಹಾದ್‌ ಜೋಶಿ ಯೋಜನೆ ಒಂದನ್ನು ಜಾರಿ ತಂದಿದ್ದಾರೆ. ಹೌದು, ಪಡಿತರ ಅಂಗಡಿಗಳ ಕಾರ್ಯಕ್ಷಮತೆ ಹಾಗೂ ಪೌಷ್ಟಿಕಾಂಶದ ಲಭ್ಯತೆಯನ್ನು ಹೆಚ್ಚಿಸಲು ಅವುಗಳಲ್ಲಿ ಸಿರಿಧಾನ್ಯ, ಬೇಳೆ ಕಾಳು, ಡೈರಿ ಉತ್ಪನ್ನಗಳನ್ನು ಮಾರುವ ಪ್ರಾಯೋಗಿಕ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಪ್ರಲ್ಹಾದ್‌ ಜೋಶಿ ಚಾಲನೆ ನೀಡಿದ್ದಾರೆ.

ಈ ಯೋಜನೆ ಹಿನ್ನೆಲೆ ಉತ್ತರ ಪ್ರದೇಶ, ಗುಜರಾತ್‌, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ 60 ಪಡಿತರ ಅಂಗಡಿಗಳನ್ನು (Ration Shop)  ‘ಜನ ಪೋಷಣಾ ಕೇಂದ್ರ’ ಎಂದು ಹೆಸರಿಸಲಾಗಿದ್ದು, ಇದರಿಂದ ಎಲ್ಲರಿಗೂ ಲಾಭವಾಗಲಿದೆ ಎಂದು ಜೋಶಿ ಹೇಳಿದ್ದಾರೆ.

ಸದ್ಯ ಈ ಯೋಜನೆಯನ್ನು ಅಖಿಲ ಭಾರತ ನ್ಯಾಯಬೆಲೆ ಅಂಗಡಿ ವಿತರಕರು ಸ್ವಾಗತಿಸಿದ್ದು, ದೇಶಾದ್ಯಂತವಿರುವ 5.38 ಲಕ್ಷ ಪಡಿತರ ಅಂಗಡಿಗಳು ಹೊಸ ರೂಪ ಪಡೆಯಲಿವೆ ಎಂದರು.

Leave A Reply

Your email address will not be published.