Instagram Followers: ನರೇಂದ್ರ ಮೋದಿಗಿಂತಲೂ ಈ ಹಾಟ್‌ ನಟಿಗೆ ಇನ್ಸ್ಟಾದಲ್ಲಿ ಫೋಲೋವರ್ಸ್‌ ಜಾಸ್ತಿ: ಯಾರೂ ಈ ನಟಿ?

Instagram Followers: ಫೇಸ್‌ಬುಕ್‌, ಇನ್ಸ್ಟಾಗ್ರಾಂ, Xನಲ್ಲಿ ಹೊಂಬಾಲಕರು ಹೊಂದಿರುವುದರಲ್ಲಿ ನಮ್ಮ ದೇಶದ ಪ್ರಧಾನ ಮಂತ್ರಿ ಸದಾ ಮುಂದು. ಇಡೀ ವಿಶ್ವದಲ್ಲೇ ಇವರನ್ನು ಫೋಲೋ ಮಾಡುವವರು ತುಂಬಾ ಮಂದಿ ಇದ್ದಾರೆ. ಆದರೆ ಇದೀಗ ಮತ್ತೊಬ್ಬ ಬಾಲಿವುಡ್‌ ನಟಿ ಮೋದಿಯವರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ. ಹೌದು ಬಾಲಿವುಡ್ ಹಾಟ್‌ ನಟಿ, ಪಡ್ಡೆ ಹುಡುಗರ ನಿದ್ದೆ ಕದ್ದ ಶ್ರದ್ಧಾ ಕಪೂರ್. ಇವರ ‘ಸ್ತ್ರೀ 2’ (Stree 2) ಸಿನಿಮಾದ ಸಕ್ಸಸ್ ನಂತರ ಅವರ ಫೊಲೋವರ್ಸ್ ಸಂಖ್ಯೆ ಏರಿದೆ. ಅದೆಷ್ಟು ಅಂದರೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನೇ ಮೀರಿಸುವಷ್ಟು ಶ್ರದ್ಧಾ ಕಪೂರ್ (Shraddha Kapoor) ಇನ್ಸ್ಟಾಗ್ರಾಂನಲ್ಲಿ ಮುಂದೆ ಹೋಗಿದ್ದಾರೆ.

 

ಸ್ತ್ರೀ 2’ ಸಿನಿಮಾದ ಯಶಸ್ಸಿನ ಬಳಿಕ ಶ್ರದ್ಧಾಗೆ ಇನ್ಸ್ಟಾಗ್ರಾಂನಲ್ಲಿ 91.5 ಮಿಲಿಯನ್ (9.15 ಕೋಟಿ) ಜನರು ಫಾಲೋ ಮಾಡ್ತಿದ್ದಾರೆ. ಅದೇ ಪ್ರಧಾನಿ ಮೋದಿ ಅವರಿಗೆ 91.3 (9.13 ಕೋಟಿ) ಜನರು ಹಿಂಬಾಲಕರಿದ್ದಾರೆ. ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿ ಸದ್ಯ ನಟಿ ಶ್ರದ್ಧಾ 3ನೇ ಸ್ಥಾನದಲ್ಲಿದ್ದಾರೆ. ಇನ್ನು 2ನೇ ಸ್ಥಾನದಲ್ಲಿ ಬಾಲಿವುಡ್‌ನ ರಸಿಕರ ರಾಣಿ ಪ್ರಿಯಾಂಕಾ ಚೋಪ್ರಾ ಮತ್ತು ಮೊದಲ ಸ್ಥಾನದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ, ಬರೋಬ್ಬರಿ 270 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಇತ್ತೀಚೆಗೆ ದೇಶವನ್ನೇ ಆಳುತ್ತಿದ್ದ ಬಾಲಿವುಡ್‌ ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ಸು ಸಾಧಿಸುತ್ತಿಲ್ಲ. ಅನೇಕ ದಕ್ಷಿಣದ ಸಿನಿಮಾಗಳೇ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡಿಯುತ್ತಿವೆ. ಇದೀಗ ‘ಸ್ತ್ರೀ 2’ ಚಿತ್ರದ ಸಕ್ಸಸ್‌ ಬಾಲಿವುಡ್‌ಗೆ ಕೊಂಚ ಮರು ಜೀವ ತಂದಿದೆ. ಇದರಿಂದ ಶ್ರದ್ಧಾ ಕೆರಿಯರ್‌ಗೂ ಬಲ ಬಂದಂತಾಗಿದೆ. ಶ್ರದ್ಧಾ ನಟಿಸಿದ ಹೆಚ್ಚಿನ ಸಿನಿಮಾಗಳು ಚಿತ್ರಮಂದಿರದಲ್ಲಿ ಅಂತ ಯಶಸ್ಸು ತಂದುಕೊಟ್ಟಿರಲಿಲ್ಲ. ಇದೀಗ ‘ಸ್ತ್ರೀ 2’ 2ನಿಂದ ಶ್ರದ್ಧಾ ಕಪೂರ್ ಡಿಮ್ಯಾಂಡ್‌ ಜಾಸ್ತಿಯಾಗಿದೆ. ಹಾಗಾಗಿ ಬಾಲಿವುಡ್ ಮಾತ್ರವಲ್ಲದೆ ಸೌತ್ ಸಿನಿಮಾಗಳಿಂದ ಆಫರ್ ಬರುತ್ತಿದೆಯಂತೆ.

Leave A Reply

Your email address will not be published.