Butt Lift Surgery: ಬಟ್ ಲಿಫ್ಟ್ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಸಾವು: ಶವದಲ್ಲಿ ಅಂಗಾಂಗ ಕಣ್ಮರೆ!
Butt Lift Surgery: ಸುಂದರ ದೇಹ ಮೈ ಕಟ್ಟು ಹೊಂದುವ ಶಸ್ತ್ರ ಚಿಕಿತ್ಸೆಯಲ್ಲಿ ಬಟ್ ಲಿಫ್ಟ್ ಸರ್ಜರಿ ಕೂಡಾ ಒಂದಾಗಿದೆ. ಹೌದು, ಟರ್ಕಿಯ ಇಸ್ತಾಂಬುಲ್‌ನಲ್ಲಿ ಬಟ್ ಲಿಫ್ಟ್ ಸರ್ಜರಿಗೆ ಒಳಗಾದ ಮಹಿಳೆಯೊಬ್ಬರು ಶಸ್ತ್ರಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಬಟ್ ಲಿಫ್ಟ್ ಸರ್ಜರಿ ಎಂದರೆ ದೇಹದ ಹಿಂಭಾಗಕ್ಕೆ ಸುಂದರ ಆಕಾರ ನೀಡುವ ಶಸ್ತ್ರಚಿಕಿತ್ಸೆ ಮಾಡುವುದುದಾಗಿದೆ.
ಹೌದು, ಬ್ರಿಟನ್‌ನ 38 ವರ್ಷದ ಕೆಡೆಲ್ ಬ್ರೌನ್ ಬಟ್ ಲಿಫ್ಟ್ ಸರ್ಜರಿ (Butt Lift Surgery) ವೇಳೆ ಸಾವನ್ನಪ್ಪಿದ್ದು, ಘಟನೆಯ ನಂತರ ಅವರ ದೇಹದಿಂದ ಕಿಡ್ನಿ, ಹೃದಯ, ಮೆದುಳು ಸೇರಿದಂತೆ ಇತರ ಅಂಗಾಂಗಗಳು ನಾಪತ್ತೆಯಾಗಿವೆ ಎಂದು ಮಹಿಳೆಯ ಸೋದರಿ ಆರೋಪಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆಗಾಗಿ ಕೆಡೆಲ್ ಬ್ರೌನ್ ಟರ್ಕಿಯ ಆಸ್ಪತ್ರೆಗೆ 5,400 ಪೌಂಡ್ ಹಣ ನೀಡಿ ಮಮ್ಮಿ ಮೊಟ್ ಎಂಬ ಪ್ಯಾಕೇಜ್‌ನ್ನು ಪಡೆದಿದ್ದರು. ಈ ಟಮ್ಮಿ ಟಕ್ ಹಾಗೂ ಸ್ತನ ವರ್ಧನೆ ಚಿಕಿತ್ಸೆಯನ್ನು ಒಳಗೊಂಡಿತ್ತು. ಆದರೆ ಬ್ರೆಜಿಲಿಯನ್ ಬಟ್ ಲಿಫ್ಟ್ ಸರ್ಜರಿಗೆ ಎಂದು ಆಪರೇಷನ್ ಥಿಯೇಟರ್ ಒಳಗೆ ಹೋದ ಅವರು ಮತ್ತೆ ಜೀವಂತವಾಗಿ ವಾಪಸ್ ಹೊರಗೆ ಬಂದಿಲ್ಲ ಅಲ್ಲದೆ ನನ್ನ ಸೋದರಿಯ ಮರಣದ ನಂತರ ಆಸ್ಪತ್ರೆ ಸಿಬ್ಬಂದಿ ಒಂದು ಲಕೋಟೆಯ ತುಂಬ ಹಣವನ್ನು ನೀಡಿ ಬಳಿಕ ವಾಪಸ್ ಮನೆಗೆ ತೆರಳಲು ಟಿಕೆಟ್ ಬುಕ್ ಮಾಡಿ ನೀಡಿದ್ದರು. ಇನ್ನು ಶಸ್ತ್ರಚಿಕಿತ್ಸೆಗೆಂದು ಒಳಗೆ ಹೋದ ಕೆಡೆಲ್ ಬ್ರೌನ್ ಬಗ್ಗೆ 10 ಗಂಟೆಗಳಾದರೂ ಅವರು ಯಾವುದೇ ಮಾಹಿತಿ ನೀಡಿರಲಿಲ್ಲ, ಆಕೆಯ ಬಗ್ಗೆ ಕೇಳಿದಾಗಲೆಲ್ಲಾ ಆಕೆ ಶೀಘ್ರದಲ್ಲೇ ಹೊರಗೆ ಬರುತ್ತಾಳೆ ಎಂದು ಹೇಳುತ್ತಲೇ ಇದ್ದರು. ಆದರೆ 10 ಗಂಟೆಗಳ ಕಾಯುವಿಕೆಯ ನಂತರ ಆಕೆ ಬದುಕಿಲ್ಲ ಎಂದು ಮಾಹಿತಿ ನೀಡಿದರು ಎಂದು ಸೋದರಿ ಲಿಯನ್ನೆ ಆರೋಪ ಮಾಡಿದ್ದಾರೆ.
ಮುಖ್ಯವಾಗಿ ಕಡೆಲ್ ಬ್ರೌನ್ ಅವರ ಸಾವಿನ ನಂತರ ಆಕೆಯ ಮೃತದೇಹವನ್ನು ನೋಡುವುದಕ್ಕೂ ಅವಕಾಶ ನೀಡಿಲ್ಲ, ಘಟನೆಯ ಮರುದಿನವೇ ಲಿಯನ್ನೆ ಅವರಿಗೆ ವಿಮಾನ ಟಿಕೆಟ್ ಬುಕ್ ಮಾಡಿ ಮನೆಗೆ ಕಳುಹಿಸಿದರು. ಬಳಿಕ ವಿಮಾನದಲ್ಲಿ ಕೆಡೆಲ್ ಅವರ ದೇಹ ಬ್ರಿಟನ್‌ಗೆ ಬಂದಾಗ ಆ ಆಕೆಯ ದೇಹದಲ್ಲಿ ಮೆದುಳು, ಶ್ವಾಸಕೋಶ ಮತ್ತು ಹೃದಯದ ದೊಡ್ಡ ಭಾಗಗಳು ಕಾಣೆಯಾಗಿತ್ತು ಎಂದು ಲಿಯನ್ನೆ ಹೇಳಿದ್ದಾರೆ. ಆದರೆ ಲಿಯನ್ನೆ ಅವರ ಆರೋಪಗಳನ್ನು ಕ್ಲಿನಿಕ್ ಸಿಬ್ಬಂದಿ ನಿರಾಕರಿಸಿದ್ದಾರೆ. ಘಟನೆಯಲ್ಲಿ ಯಾವುದೇ ತಪ್ಪು ನಡೆದಿಲ್ಲ, ಶಸ್ತ್ರಚಿಕಿತ್ಸೆ ವೇಳೆ ಉಂಟಾದ ಸಂಕೀರ್ಣ ಸಮಸ್ಯೆಗಳಿಂದಾಗಿ ಅವರು ಸಾವನ್ನಪ್ಪಿದರು ಎಂದು ಹೇಳಿದ್ದಾರೆ.