Sudha Murthy: ‘ರಾಖಿ ಹಬ್ಬ’ ಶುರುವಾಗಿದ್ಧು ಮೊಘಲ್‌ ದೊರೆ ಹುಮಾಯೂನ್-ರಾಣಿ ಕರ್ಣಾವತಿಯಿಂದಲೇ? ವಿವಾದ ಹುಟ್ಟುಹಾಕಿದ ಸಂಸದೆ ಸುಧಾಮೂರ್ತಿ ಪೋಸ್ಟ್‌

Sudha Murthy: ನಿನ್ನೆ ಇಡೀ ದೇಶ ಸಂಭ್ರಮ, ಸಡಗರದಿಂದ ರಕ್ಷಾಬಂಧನವನ್ನು ಆಚರಿಸಿದೆ. ಸಹೋದರರಿಗೆ ಸಹೋದರಿಯರು ರಾಖಿ ಕಟ್ಟಿ, ಉಡುಗೊರೆ ಪಡೆದು ಸಂಭ್ರಮಿಸಿ, ತಮ್ಮ ಬಾಂಧವ್ಯವನ್ನು ಗಟ್ಟಿಗಳಿಸಿಕೊಂಡಿದ್ದಾರೆ.

ರಕ್ಷಾಬಂಧನ ಹೇಗೆ ಆಚರಣೆಗೆ ಬಂತು ಎಂಬುದಕ್ಕೆ ಸಾಕಷ್ಟು ನಮ್ಮ ಪುರಾಣದ ಕಥೆಗಳಿವೆ. ಅದರಲ್ಲಿ ಮಹಾಭಾರತದ ಕೃಷ್ಣ-ದ್ರೌಪದಿ(Krishna-Droupadi) ಕಥೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಹಲವರು ರಕ್ಷಾಬಂಧನದ ಮೂಲ ಮಹಾಭಾರವೇ ಎಂದು ಹೇಳುತ್ತಾರೆ. ಹಿಂದೂ ಧರ್ಮ ಕೂಡ, ಅಷ್ಟೇ ಅಲ್ಲ ಇಡೀ ದೇಶವೂ ಇದನ್ನು ಒಪ್ಪಿದೆ. ಆದರೆ ಈ ನಡುವೆ, ರಕ್ಷಾಬಂಧನ ಆಚರಣೆ ಬೆನ್ನಲ್ಲೇ ಎಲ್ಲರ ಪ್ರೀತಿಯ ಸುಧಾ ಮೂರ್ತಿಯವರು(Sudha Murthy) ಈ ರಾಖಿ ಹಬ್ಬದ ಹಿನ್ನಲೆ ಬಗ್ಗೆ ಒಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಅವರ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹೌದು, ಇನ್ಫೋಸಿಸ್‌ ಅಧ್ಯಕ್ಷೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ (Sudha Murty) ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಚರ್ಚೆ ಹುಟ್ಟುಹಾಕಿದೆ. ರಕ್ಷಾ ಬಂಧನಕ್ಕೆ ಶ್ರೀಮಂತ ಇತಿಹಾಸವಿದೆ. ರಾಣಿ ಕರ್ಣಾವತಿ ಆಪತ್ತಿನಲ್ಲಿದ್ದಾಗ, ರಾಜ ಹುಮಾಯೂನ್‌ಗೆ ಒಡಹುಟ್ಟಿದವರ ಸಂಕೇತವಾಗಿ ಒಂದು ದಾರವನ್ನು ಕಳುಹಿಸಿ, ಅವನ ಸಹಾಯವನ್ನು ಕೇಳಿದಳು. ಇಲ್ಲಿಂದ ದಾರದ ಸಂಪ್ರದಾಯ ಪ್ರಾರಂಭವಾಯಿತು. ಅದು ಇಂದಿಗೂ ಮುಂದುವರೆದಿದೆ ಎಂದು ರಾಖಿ ಹಬ್ಬದ ಇತಿಹಾಸವಿದು ಎಂದು ಸುಧಾಮೂರ್ತಿ ಅವರು ಎಕ್ಸ್‌ನಲ್ಲಿ ವೀಡಿಯೋ ಮಾಡಿ ಪೋಸ್ಟ್‌ ಹಾಕಿದ್ದರು.

ಇದನ್ನು ವಿವರಿಸಿದ ಅವರು ‘ರಾಣಿ ಕರ್ಣಾವತಿ (ಮೇವಾರ್ ಸಾಮ್ರಾಜ್ಯದಿಂದ) ಅಪಾಯದಲ್ಲಿದ್ದಾಗ, ಆಕೆಯ ರಾಜ್ಯವು ಚಿಕ್ಕದಾಗಿತ್ತು ಮತ್ತು ಆಕ್ರಮಣಕ್ಕೆ ಒಳಗಾಗಿತ್ತು. ಅವಳಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವಳು ಮೊಘಲ್ ಚಕ್ರವರ್ತಿ ಹುಮಾಯೂನ್‌ಗೆ ಒಂದು ಸಣ್ಣ ದಾರವನ್ನು ಕಳುಹಿಸಿದಳು. ನಾನು ಅಪಾಯದಲ್ಲಿದ್ದೇನೆ ದಯವಿಟ್ಟು ನನ್ನನ್ನು ನಿಮ್ಮ ಸಹೋದರಿ ಎಂದು ಪರಿಗಣಿಸಿ, ಬಂದು ನನ್ನನ್ನು ರಕ್ಷಿಸಿ ಎಂದು ಸಂದೇಶ ರವಾನಿಸಿದ್ದಳು.

ಹುಮಾಯೂನ್‌ಗೆ ಇದು ಏನೆಂದು ತಿಳಿಯಲಿಲ್ಲ. ಏನೆಂದು ವಿಚಾರಿಸಿದಾಗ, ಸ್ಥಳೀಯರು ‘ಇದು ಸಹೋದರನಿಗೆ ಸಹೋದರಿಯ ಕರೆ’ ಎಂದು ಹೇಳಿದರು. ಇದು ಭೂಮಿಯ ಸಂಪ್ರದಾಯವಾಗಿದೆ ಎಂದರು. ಚಕ್ರವರ್ತಿ, ನಾನು ರಾಣಿ ಕರ್ಣಾವತಿಗೆ ಸಹಾಯ ಮಾಡುತ್ತೇನೆ ಎಂದು ದೆಹಲಿಯಿಂದ ಹೊರಟರು. ಆದರೆ ಸಮಯಕ್ಕೆ ಅಲ್ಲಿಗೆ ತಲುಪಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗಾಗಲೇ ಕರ್ಣಾವತಿ ನಿಧನರಾಗಿದ್ದರು. ನೀವು ತೊಂದರೆಯಲ್ಲಿದ್ದಾಗ, ಯಾರಾದರೂ ಬಂದು ನನಗೆ ಸಹಾಯ ಮಾಡಬೇಕು ಎಂಬ ಅರ್ಥವನ್ನು ಆ ದಾರ ಸೂಚಿಸುತ್ತದೆ. ಇದು ಬಹಳಷ್ಟು ಅರ್ಥಪೂರ್ಣವಾಗಿದೆ ಎಂದಿದ್ದಾರೆ ಸುಧಾಮೂರ್ತಿ.

ಆದರೆ, ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದು ಸುಳ್ಳು ಕಥೆ ಎಂದು ಅನೇಕರು ಕಾಮೆಂಟ್‌ ಮಾಡಿದ್ದಾರೆ. ರಕ್ಷಾ ಬಂಧನದ ಇತಿಹಾಸ ಮಧ್ಯಕಾಲೀನದ್ದಲ್ಲ, ಮಹಾಭಾರತದ ಕಾಲಕ್ಕೆ ಹೋಗುತ್ತದೆ ಎಂದು ನೆಟ್ಟಿಗರು ವಾದಿಸಿದ್ದಾರೆ. ಹಿಂದೂ ಧರ್ಮದ ಹಿನ್ನಲೆಗಳನ್ನು, ಪೌರಾಣಿಕ ಮಹತ್ವ ಸಾರುವ ಈ ಹಬ್ಬಗಳ ಮಹತ್ವವನ್ನು ಬಿಟ್ಟುಕೊಡಬೇಡಿ ಎಂದು ವಾದಿಸಿದ್ದಾರೆ. ಅಲ್ಲದೆ ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋಗೆ ಕಮೆಂಟ್ ಮಾಡಿದ್ದು, “ಈ ಘಟನೆ ಎಂದಿಗೂ ಸಂಭವಿಸಲಿಲ್ಲ. ನಿಮ್ಮ ಐತಿಹಾಸಿಕ ಜ್ಞಾನವನ್ನು ಸುಧಾರಿಸಲು ವಾರಕ್ಕೆ 100 ಗಂಟೆಗಳ ಕಾಲ ಓದಿ” ಎಂದಿದ್ದಾರೆ. ಮತ್ತೊಬ್ಬರು, “ನೀವು ದಿನಕ್ಕೆ 20 ಗಂಟೆಗಳ ಕಾಲ ಇತಿಹಾಸವನ್ನು ಓದಬೇಕು” ಎಂದು ಟೀಕಿಸಿದ್ದಾರೆ.

https://x.com/SmtSudhaMurty/status/1825374632331141397?t=2Kjk4-VvePw5k4ifMiuEew&s=08

ರಕ್ಷಾಬಂಧನಕ್ಕಿರುವ ಮಹಾಭಾರತದ ಹಿನ್ನಲೆ:
ಹಿಂದೂ ಸಂಸ್ಕೃತಿಯಲ್ಲಿ ಹಿನ್ನಲೆಯಿಲ್ಲದೇ ಯಾವುದೇ ಆಚರಣೆಗಳು ನಡೆಯುವುದಿಲ್ಲ. ಹಾಗೆಯೇ, ರಕ್ಷಾಬಂಧನವೂ ಕೂಡ. ರಕ್ಷಾಬಂಧನಕ್ಕೆ ಮಹಾಭಾರತದ ಈ ಘಟನೆ ಪುಷ್ಟಿ ನೀಡುತ್ತದೆ. ಶ್ರೀಕೃಷ್ಣ ಸುದರ್ಶನ ಚಕ್ರ ಹಿಡಿದ ಸಂದರ್ಭದಲ್ಲಿ, ಕೃಷ್ಣನ ಕೈಗೆ ಚಕ್ರ ತಾಗಿ ರಕ್ತಸ್ರಾವವಾಗುತ್ತದೆ. ಆಗ ಕೃಷ್ಣನ ಬಳಿಯೇ ಇದ್ದ ಸಹೋದರಿ ದ್ರೌಪದಿ ತಾನುಟ್ಟ ಸೀರೆಯ ತುದಿಯನ್ನು ಹರಿದು ಕೃಷ್ಣನ ಕೈಗೆ ಕಟ್ಟಿದಳು. ಸಹೋದರಿ ದೌಪದಿಯ ಕಾಳಜಿಯಿಂದ ಸಂತಸಗೊಂಡ ಕೃಷ್ಣ, ದ್ರೌಪದಿಯನ್ನು ಎಲ್ಲಾ ಕಷ್ಟಗಳಿಂದ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಮುಂದೊಂದು ದಿನ ದುಶ್ಯಾಸನ ಸಭೆಯಲ್ಲಿ ವಸ್ತ್ರಾಪಹರಣ ಮಾಡಿದಾಗಸಾಕ್ಷಾತ್ ಭಗವಂತನೇ ಬಂದು ಬ್ರೌಪದಿಗೆ ಅಕ್ಷಯ ವಸ್ತ್ರರವನ್ನು ನೀಡಿ ಕಾಪಾಡುವುದನ್ನೂ ನಾವು ನೋಡಿದ್ದೇವೆ. ಅಂದು ದೌಪದಿಯನ್ನು ಕಾಪಾಡಿದ್ದು ಕೃಷ್ಣನ ಕೈಗೆ ಕಟ್ಟಿದ ಆ ಸಣ್ಣ ‘ನೂಲಿನ’ ಎಳೆಯೇ! ಎನ್ನುವುದು ಇಲ್ಲಿ ಉಲ್ಲೇಖನೀಯ.

ಪೌರಾಣಿಕ ಹಿನ್ನಲೆ ಹಿಂದೆ ದೇವ-ದಾನವರಿಗೆ ಯುದ್ಧವಾಯಿತು. ಯುದ್ಧದಲ್ಲಿ ಸೋತ ದೇವತೆಗಳನ್ನು ದಾನವರು ಸ್ವರ್ಗದಿಂದ ಹೊರ ದೂಡಿದರು. ದಿನನಿತ್ಯದ ಯಜ್ಞಯಾಗಾದಿಗಳು ನಿಂತು ಹೋದವು. ಚಿಂತಿತನಾದ ಇಂದ್ರ ಬೃಹಸ್ಪತಿಗಳಲ್ಲಿ ಬೇಡಿಕೊಂಡ. ಬೃಹಸ್ಪತಿಗಳು, ಮತ್ತೆ ಜಯವಾಗಲು, ಶ್ರಾವಣಪೂರ್ಣಿಮೆಯ ದಿನ ರಕ್ಷಾವಿಧಿಯನ್ನು ಮಾಡಲು ಸೂಚಿಸಿದರು. ಗುರುಗಳ ಆಜ್ಞೆಯ ಮೇರೆಗೆ ಇಂದ್ರಾಣಿ ಶಚೀದೇವಿ ಬೃಹಸ್ಪತಿಗಳಿಂದ ಇಂದ್ರನಿಗೆ ಶ್ರಾವಣಪೂರ್ಣಿಮೆಯ ದಿನ ಸ್ವಸ್ತಿವಾಚನ ಮಾಡಿಸಿ, ಅವರಿಂದ ರಕ್ಷಾಸೂತ್ರ ಪಡೆದು, ಇಂದ್ರನ ಬಲಗೈಗೆ ರಕ್ಷಾಸೂತ್ರವನ್ನು ಕಟ್ಟಿದಳು. ಆಗ ಇಂದ್ರ ದಾನವರನ್ನು ಸೋಲಿಸಿ, ಸ್ವರ್ಗವನ್ನು ವಶಪಡಿಕೊಂಡ ಎಂದು ಭವಿಷ್ಯತ್ ಪುರಾಣದಲ್ಲಿ ಉಲ್ಲೇಖವಿದೆ. ಹಾಗೂ ಇಂದೇ ಭಗವಂತನಾದ ವಾಮನ ಬಲಿರಾಜನಿಗೆ ರಕ್ಷೆಯನ್ನು ಕಟ್ಟಿ, ದಕ್ಷಿಣೆ ಬೇಡಿದ್ದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.

Leave A Reply

Your email address will not be published.