Puttur: ಮುಸ್ಲಿಂ ವಿದ್ಯಾರ್ಥಿನಿಗೆ ಹಿಂದೂ ಯುವಕ ಚೂರಿ ಇರಿತ; ಸುಳ್ಳು ಹೇಳಿ, ಆಸ್ಪತ್ರೆಗೆ ಕಳುಹಿಸಿರುವ ಪ್ರಾಂಶುಪಾಲ! ವಿಡಿಯೋ ವೈರಲ್
Puttur: ಪುತ್ತೂರಿನಲ್ಲಿ (Puttur) ಹಿಂದೂ ಯುವಕ ತನಗೆ ಚೂರಿ ಇರಿದಿದ್ದಾನೆ ಎಂದು ಮುಸ್ಲಿಂ ವಿದ್ಯಾರ್ಥಿನಿಯೋರ್ವಳು ಆರೋಪಿಸಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದ್ದು, ಈಗಾಗಲೇ ಪೊಲೀಸರು ಸತ್ಯಾಸತ್ಯತೆಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಹೌದು, ಪುತ್ತೂರಿನ ಕೊಂಬೆಟ್ಟು ಸರಕಾರಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ತನಗೆ ಅದೇ ಕಾಲೇಜಿನ ಹಿಂದೂ ವಿದ್ಯಾರ್ಥಿಯೊಬ್ಬ ಚೂರಿಯಿಂದ ಇರಿದಿರುವುದಾಗಿ ಆರೋಪಿಸಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ. ಆದರೆ ಅವಳ ಕೈಯಲ್ಲಿ ಕೇವಲ ಗೀರಿದ ಗುರುತು ಕಂಡು ಬಂದಿದೆ.
ಆದರೆ ಮಾಹಿತಿ ಪ್ರಕಾರ, ವಿದ್ಯಾರ್ಥಿನಿಯ ಕೈಯಲ್ಲಿ ರಕ್ತ ಬರುವುದನ್ನು ಗಮನಿಸಿದ ಕಾಲೇಜಿನ ಪ್ರಾಂಶುಪಾಲ ಕೈಗೆ ಗ್ಲಾಸು ಬಿದ್ದು ಗಾಯಗೊಂಡಿದೆ ಎಂದು ತಪ್ಪು ಮಾಹಿತಿ ನೀಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲು ಕಳುಹಿಸಿ ಕೊಟ್ಟಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿರುವ ವಿಡಿಯೋದಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಹೇಳಿದ್ದಾಳೆ.
ಇದೀಗ ನೈಜ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸುಳ್ಳು ಹೇಳಿ, ಆಸ್ಪತ್ರೆಗೆ ಕಳುಹಿಸಿರುವ ಪ್ರಾಂಶುಪಾಲನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸದ್ಯ ವಿದ್ಯಾರ್ಥಿನಿ ಮಾಡಿದ ಹೈಡ್ರಾಮದ ಕುರಿತು ಪೊಲೀಸ್ ವಿಚಾರಣೆ ನಡೆಯುತ್ತಿದೆ.