Cotton crop: ಹತ್ತಿಯಲ್ಲಿ ಹಸಿರು ಜಿಗಿಹುಳು ನಿರ್ವಹಣೆ: ಹತೋಟಿ ಹೇಗೆ?
Cotton crop: ವಾಣಿಜ್ಯ ಬೆಳೆ ಹತ್ತಿಯಲ್ಲಿ ರಸಹೀರುವ ಕೀಟಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಇಳುವರಿ ಮತ್ತು ಆದಾಯ ಕುಂಠಿತಗೊಳಿಸುತ್ತಿವೆ. ಈ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾಹಿತಿ ನೀಡಿದ್ದಾರೆ. ಹಸಿರು ಜಿಗಿ ಹುಳುಗಳ ಬಾಧೆ 15-20 ದಿನಗಳ ಬೆಳೆಯಲ್ಲಿ ಕಾಣಿಸಿ ಹತ್ತಿ ಬಿಡಿಸುವವರೆಗೂ ಇರುತ್ತದೆ. ಯಾವುದೇ ಹತ್ತಿಯಲ್ಲಿ ಇದು ಮೊದಲ ಹಂತದ ಪೀಡೆಯಾಗಿದೆ.
ತಡವಾಗಿ ಬಿತ್ತಿದ ಹತ್ತಿಯಲ್ಲಿ (Cotton crop) ಇದರ ಬಾಧೆ ಹೆಚ್ಚು. ಆದರೆ ಯಾವುದೇ ಹತ್ತಿಯಲ್ಲಿ ಸೆಪ್ಟೆಂಬರ್/ ಅಕ್ಟೋಬರ್ ತಿಂಗಳುಗಳಲ್ಲಿ ಈ ಕೀಟದ ಬಾಧೆ ಹೆಚ್ಚಾಗಿ ಕಂಡುಬರುತ್ತದೆ. ಈ ಕೀಡೆಯು 30-38 ಡಿಗ್ರಿ ಸೆಲ್ಸಿಯಸ್ ತಾಪಮಾನ ಶೇ. 70-75 ರಷ್ಟು ಆದ್ರತೆಯೊಂದಿಗೆ ಕಡಿಮೆ ಮಳೆ ಅಥವಾ ಮಳೆ ಇಲ್ಲದಿದ್ದ ದಿನಗಳಲ್ಲಿ ಹೆಚ್ಚಾಗುತ್ತದೆ. ತಿಗಣೆ ಜಾತಿಗೆ ಸೇರಿದ ಹಸಿರು ಬಣ್ಣದ ಈ ಕೀಟವು ರಸ ಹೀರುತ್ತ, ತನ್ನ ವಿಷಕಾರಕ ಜೊಲ್ಲನ್ನು ಎಲೆಗಳ ಕೋಶಗಳಲ್ಲಿ ಸ್ರವಿಸುವುದರಿಂದ, ಎಲೆಗಳು ಅಂಚಿನಿಂದ ಮಧ್ಯ ಭಾಗದವರೆಗೆ ಹಳದಿ ಆಗಿ ಕೆಂಪಾಗ ತೊಡಗುವುವು.
ಡ್ರಿಪ್ಸ್, ಹಸಿರು ಮತ್ತು ಕರಿ ಜಿಗಿಗಳು ಕಂಡರೆ ಹತೋಟಿಗೆ ಪ್ರತಿ ಎಲೆಗೆ 2 ಹಸಿರು ಜಿಗಿಯ ಮರಿಗಳು ಅಥವಾ 10 ಸ್ಕ್ರಿಪ್ಸ್ ನುಸಿಗಳು ಇರುವಾಗ ಮಾತ್ರ ಸಿಂಪರಣೆ ಕೈಗೊಳ್ಳಬೇಕು. ಸಿಂಪರಣೆಗೆ 0.3 ಗ್ರಾಂ ಫ್ಲೋನಿಕ್ಸ್ ಮಿಡ್ 50 ಡಬ್ಲ್ಯೂಜಿ ಅಥವಾ 0.3 ಗ್ರಾಂ ಡೈನೆಟಿಫೊರಾನ್, 20 ಎಸ್‌ಜಿ ಅಥವಾ 0.2 ಗ್ರಾಂ ಅಸಿಟಾಮಿಪ್ರಿಡ್, 20 ಎಸ್‌ಪಿ ಅಥವಾ 1.0 ಮಿಲಿ ಫಿಪ್ರೊನಿಲ್, 5 ಎಸ್‌ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.