Cigarette ban: ಬೇಕರಿ- ಕಾಂಡಿಮೆಂಟ್ಸ್‌ಗಳಲ್ಲಿ ಸಿಗರೇಟ್, ಗುಟ್ಕಾ ಮಾರಾಟ ನಿಷೇಧ: ಎಲ್ಲೆಲ್ಲಾ ಕೊಕ್ ಕೊಡಲಾಗಿದೆ?

Cigarette ban: ಸಿಗರೇಟ್ (Cigarette) , ಗುಟ್ಕಾ(Gutka), ತಂಬಾಕು(Tobacco) ಆರೋಗ್ಯಕ್ಕೆ ಹಾನಿಕಾರಕ ಅಂತ ಗೊತ್ತಿದ್ದರೂ ಅದನ್ನು ತಿನ್ನುವವರು ಹಾಗೂ ಮಾರಾಟ ಮಾಡುವವರು ಯಾವುದೇ ಗೊಡವೆ ಇಲ್ಲದೆ ಮಾರಾಟವಾಗುತ್ತಿದೆ. ತಿನ್ನುವವರು ತಿನ್ನುತ್ತಲೇ ಇದ್ದಾರೆ. ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್(Cancer) ಪೀಡಿತರ ಸಂಖ್ಯೆ ಏರುತ್ತಲೇ ಇದೆ. ಇದೀಗ ಸರ್ಕಾರ ಬೆಂಗಳೂರು(Bengaluru) ನಗರದಲ್ಲಿ ಸಿಂಗರೇಟ್ , ಗುಟ್ಕಾ, ತಂಬಾಕು ಮಾರಾಟಕ್ಕೆ ಬಿಬಿಎಂಪಿಯಿಂದ(BBMP) ಲೈಸೆನ್ಸ್ ಕಡ್ಡಾಯ ಮಾಡಲು ಬೆಂಗಳೂರು ಮಹಾನಗರ ಪಾಲಿಕೆ ಸಿದ್ದತೆ ಮಾಡಿಕೊಳ್ಳುತ್ತಿದೆ.
ಅನಧಿಕೃತಾಗಿ ಈ ವಸ್ತುಗಳನ್ನು ಬೇಕರಿ, ಕ್ಯಾಂಡಿಮೆಂಟ್ಸ್‌ಗಳಲ್ಲಿ ಮಾರಾಟ ಮಾಡಿದ್ರೆ ₹5000 ದಂಡ ಬೀಳುತ್ತೆ. ಸೆಪ್ಟೆಂಬರ್ ವೇಳೆಗೆ ಲೈಸೆನ್ಸ್ ಕಡ್ಡಾಯದ ಬಗ್ಗೆ ಅಧಿಕೃತ ಆದೇಶ ಹೊರಬೀಳಲಿದೆ. ಲೇಸೆನ್ಸ್ ಪಡೆಯಲು ಮಾರಟಗಾರರಿಗೆ 500 ರು. ಶುಲ್ಕ ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದ 2022ರ ಆದೇಶದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಯಂತ್ರಣಕ್ಕೆ ಬಿಬಿಎಂಪಿ ಮುಂದಾಗಿದೆ. ಈಗಾಗ್ಲೇ ಸುಮಾರು 49 ಸಾವಿರ ವ್ಯಾಪಾರಿಗಳಿಗೆ ಉದ್ದಿಮೆ ಪರವನಾಗಿಯನ್ನು ಬಿಬಿಎಂಪಿ ನೀಡಿದೆ.
ಪ್ರತ್ಯೇಕವಾಗಿ ತುಂಬಾಕು ಉತ್ಪನ್ನಗಳಾದ ಬೀಡಿ, ಸಿಗರೇಟ್, ಗುಟ್ಕಾ ಮಾರಾಟಗಾರರಿಗೆ ಪರವಾನಗಿ ನೀಡಲು ಸಿದ್ಧತೆ ನಡೆಸಿದೆ. ಪ್ರತಿ ವರ್ಷ 500 ರು, ಪರವಾನಗಿ ಶುಲ್ಕ ವಿಧಿಸಲು ಸಿದ್ದತೆ ಮಾಡಲಾಗಿದೆ. ಬಿಬಿಎಂಪಿ ಸಮೀಕ್ಷೆ ಪ್ರಕಾರ ಬೆಂಗಳೂರಿನ ಪ್ರತಿ ವಾರ್ಡ್‌ನಲ್ಲಿ 150 ರಿಂದ 160 ತಂಬಾಕು ವ್ಯಾಪಾರಿಗಳಿದ್ದು, ಒಟ್ಟು ಬೆಂಗಳೂರಿನಲ್ಲಿ 40 ಸಾವಿರ ವ್ಯಾಪಾರಿಗಳು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಲೈಸೆನ್ಸ್ ಪಡೆಯಲು ಇರುವ ನಿಯಮಗಳು
ಬೀದಿ ವ್ಯಾಪಾರಿಗಳಿಗೆ ಸಿಗೋದಿಲ್ಲ ಲೈಸನ್ಸ್
ತಂಬಾಕು ಮಾರಾಟ ಪರವಾನಗಿಯನ್ನು ಪಡೆಯುವುದಕ್ಕೆ 100 ರಿಂದ 150 ಚದರಡಿ ಸ್ಥಿರ ಮಳಿಗೆ ಹೊಂದಿರ ಬೇಕು
ಜಾಗ ಮಾಲೀಕರ ಹೆಸರಿನಲ್ಲಿ ಪರವಾನಗಿ ಪಡೆಯಬೇಕು.
ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರ ನಡೆಸುತ್ತಿರುvವರಿಗೆ ಪರವಾನಗಿ ನೀಡುವುದಿಲ್ಲ.
ಗುಟ್ಕಾ ಮಾರಾಟಕ್ಕೂ ನಿಯಮ ಅನ್ವಯ
ಬಿಬಿಎಂಪಿಯ ಅನುಮತಿ ಇಲ್ಲದೇ ಬೀಡಿ, ಸಿಗರೇಟ್, ಗುಟ್ಕಾ ಮಾರಾಟ ಮಾರಿದರೆ ಅವರಿಗೆ ಮೊದಲ ಬಾರಿಗೆ 5 ಸಾವಿರ ರು. ದಂಡ. ಅದನ್ನೆ ಮತ್ತೆ ಪುನರಾವರ್ತನೆ ಮಾಡಿದರೆ ದಿನಕ್ಕೆ 100 ರು. ನಂತೆ ದಂಡ ಹಾಕಲಾಗುವುದು. ಜೊತೆಗೆ ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು. ಪರವಾನಗಿ ಪಡೆಯಲು ಸೆಪ್ಟೆಂಬರ್ ಮೊದಲ ವಾರದಲ್ಲಿ ಆನ್ ಲೈನ್ ನಲ್ಲಿ ಅರ್ಜಿ ದಾಖಲಿಸಬಹುದು. ಬಿಬಿಎಂಪಿ ಅಧಿಸೂಚನೆ ಹೊರಡಿಸುವ ಮೂಲಕ ಪರವಾನಗಿ ಪಡೆಯುವುದಕ್ಕೆ ಸೂಚನೆ ನೀಡಿದೆ. ಪರವಾನಗಿ ಪಡೆಯುವುದಕ್ಕೆ ವ್ಯಾಪಾರಿಗಳಿಗೆ 1 ತಿಂಗಳ ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದ ವ್ಯಾಪಾರಿಯ ಮಳಿಗೆಯನ್ನು ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪರವಾನಗಿ ನೀಡಲಾಗುವುದು.
ಕೋಟ್ಟಾ ಕಾಯ್ದೆ-2003ರ ಅಡಿಯಲ್ಲಿ ಬೇಕರಿ ಮತ್ತು ಕಾಂಡಿಮೆಂಟ್ಸ್ ನಲ್ಲಿ ತಂಬಾಕು ಉತ್ಪನ್ನ ಮಾರಾಟಕ್ಕೆ ಅವಕಾಶವಿಲ್ಲ. ಹೀಗಾಗಿ ಬೇಕರಿ-ಕಾಂಡಿಮೆಂಟ್ಸ್‌ನಲ್ಲಿ ಸಿಗರೇಟು ಮಾರಾಟ ನಿಷೇಧ (Cigarette ban) ಮಾಡಲಾಗುವುದು ಹಾಗೂ ಅವರಿಗೆ ಪರವಾನಗಿ ನೀಡಲಾಗುವುದಿಲ್ಲ. ಪಾನ್ ಶಾಪ್ ಹಾಗೂ 30 ಆಸನಕ್ಕಿಂತ ಹೆಚ್ಚಿಸುವ ಹೋಟೆಲ್ ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಮಾತ್ರ ಲೈಸೆನ್ಸ್ ಸಿಗಲಿದೆ. ಹೋಟೆಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಧೂಮಪಾನಕ್ಕೆ ಪ್ರತ್ಯೇಕ ಸ್ಥಳ ನಿಗಡಿ ಪಡಿಸಿದರೆ ಮಾತ್ರ ಲೈಸೆನ್ಸ್ ಲಭ್ಯವಾಗಲಿದೆ ಎಂದು ಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ.