Cement Garlic: ಮಾರ್ಕೆಟ್‌ನಲ್ಲಿ ಸಿಗುತ್ತೆ ಸಿಮೆಂಟ್ ಬೆಳ್ಳುಳ್ಳಿ: ಹೀಗೂ ಮೋಸ ಮಾಡೋದಾ..?

Cement Garlic: ಲಾಭದ ದೃಷ್ಟಿಯಿಂದ ಗ್ರಾಹಕರಿಗೆ ಈ ವ್ಯಾಪಾರಿಗಳು ಹೇಗೆಲ್ಲಾ ಮೋಸ ಮಾಡಲಿಕ್ಕೆ ಆಗುತ್ತೋ ಹಾಗೆಲ್ಲಾ ಮೋಸ ಮಾಡುತ್ತಾರೆ. ಬೆಳ್ಳುಳ್ಳಿ ಅಡುಗೆ ಮನೆಯಲ್ಲಿ ಅತಿಯಾಗಿ ಬಳಸುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲೇ ಬೇಕು. ಹೀಗೆ ತರಕಾರಿ ಕೊಂಡುಕೊಳ್ಳಲು ಹೋದ ವ್ಯಕ್ತಿಯೋರ್ವರಿಗೆ ಅಚ್ಚರಿ ಕಾದಿದೆ. ಮಹಾರಾಷ್ಟ್ರದ ಅಕೋಲಾ ಎಂಬ ಜಿಲ್ಲೆಯ ಮಾರುಕ್ಕಟ್ಟೆಯೊಂದರಲ್ಲಿ ಖರೀದಿ ಮಾಡಿದ ಬೆಳ್ಳುಳ್ಳಿ (Garlic) ಸಿಪ್ಪೆ ಸುಲಿದಾಗ ಸಿಮೆಂಟ್ ಬೆಳ್ಳುಳ್ಳಿ ಪತ್ತೆಯಾಗಿದೆ.  ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವ್ಯಕ್ತಿಯೊಬ್ಬರು  ಬೆಳ್ಳುಳ್ಳಿ ಸಿಪ್ಪೆ ಸುಲಿಯುವಾಗ ಬೆಳ್ಳುಳ್ಳಿ ಗಟ್ಟಿ ಗಟ್ಟಿ, ಭಾರ ಭಾರವಾದ ಅನುಭವ ಆಗಿದೆ. ಸುಲಿದು ಒಳಗೆ ನೋಡಿದೆರೆ ಒಳಗೆ ಸಿಮೆಂಟ್‌ ಗಟ್ಟಿ ಕಂಡುಬಂದಿದೆ. ಇತ್ತೀಚೆಗೆ ಬೆಳ್ಳುಳ್ಳಿ ದರ ದಿನದಿಂದ ದಿನಕ್ಕೆ ಏರುತ್ತಿದೆ. ಮಾರುಕಟ್ಟೆಯಲ್ಲಿ 300 ರಿಂದ 350 ರೂ ಕೆಜಿ ಬೆಳ್ಳುಳ್ಳಿಗೆ ಬೆಲೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಾಪಾರಿಗಳು ಸಿಮೆಂಟ್‌ ಬೆಳ್ಳುಳ್ಳಿ (Cement Garlic) ತಯಾರಿಸುತ್ತಿದ್ದಾರೆ. ಅದರ ಮೇಲೆ ಬಿಳಿ ಪೈಂಟ್‌ ಬಳಿದು ಪಕ್ಕಾ ಬೆಳ್ಳುಳ್ಳಿ ಶೇಪ್‌ ಕೊಟ್ಟು ಅಸಲಿ ಬೆಳ್ಳುಳ್ಳಿ ಜೊತೆ ಮಿಕ್ಸ್ ಮಾಡುತ್ತಿದ್ದಾರೆ.

ಈ ರೀತಿ ಮಾಡುವ ಮೂಲಕ ಕೆಜಿಯಲ್ಲಿ ಗ್ರಾಹಕರಿಗೆ ಪಂಗನಾಮ ಹಾಕೋದಲ್ಲದೆ, ದುಡ್ಡು ಮಾಡುತ್ತಿದ್ದಾರೆ. ಮಹಾರಾಷ್ಟ್ರ ಅಲ್ಲದೆ ಇತರ ಪ್ರದೇಶಗಳಲ್ಲೂ ಈ ತರದ ಬೆಳ್ಳುಳ್ಳಿ ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಬೆಳ್ಳುಳ್ಳಿ ಖರೀದಿಸುವಾಗ ಎಚ್ಚರ ವಹಿಸುವುದು ಒಳಿತು.

Leave A Reply

Your email address will not be published.