D K Shivkumar : ರಾಜ್ಯಪಾಲರಿಂದ ಪ್ರಾಸಿಕ್ಯೂಶನ್ ನಿರ್ಣಯ- ಸಿದ್ದರಾಮಯ್ಯ ರಾಜೀನಾಮೆ ನೀಡುವ ಕುರಿತು ಡಿ ಕೆ ಶಿವಕುಮಾರ್ ಮಹತ್ವದ ಹೇಳಿಕೆ !!

D K Shivkumar: ರಾಜ್ಯದಲ್ಲಿ ಮೂಡಾ ಹಗರಣ ಭಾರೀ ಸದ್ದುಮಾಡುತ್ತಿದ್ದು, ಈ ಮುಡಾ ಹಗರಣದ(Muda Scam) ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thavar Chand Gehlot) ಪ್ರಾಸಿಕ್ಯೂಶನ್ ನಿರ್ಣಯವನ್ನು ಹೊರಡಿಸಿದ್ದಾರೆ.
ಸಿದ್ದರಾಮಯ್ಯ(CM Siddaramaiah) ವಿರುದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಶನ್ ನಿರ್ಣಯವನ್ನು ಹೊರಡಿಸುತ್ತಿದ್ದಂತೆ ಹಾಗೂ ಬಿಜೆಪಿ, ಜೆಡಿಎಸ್ ರಾಜೀನಾಮೆಗೆ ಆಗ್ರಹ ತೀವ್ರಗೊಳಿಸುತ್ತಿದ್ದಂತೆ ಇತ್ತ ಸಚಿವ ಸಂಪುಟ ಸಭೆ ನಡೆಸಿದ ಕಾಂಗ್ರಸ್ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಸಭೆ ಬಳಿಕ ಸುದ್ದಿಗೋಷ್ಠಿ ಮೂಲಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್(D K Shivkumar), ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನಯೇ ಇಲ್ಲ ಎಂದು ಮಹತ್ವದ ಹೇಳಿಕೆ ನೀಡಿದ್ದಾರೆ.
ಅಲ್ಲದೆ ರಾಜ್ಯಪಾಲರು ತೀರ್ಮಾನ ಸರಿಯಾಗಿ ಮಾಡಿಲ್ಲ. ಇಡೀ ಸಚಿವ ಸಂಪುಟ, ಪಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿದೆ. ನಮ್ಮ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಿಲ್ಲ. ಹಿಂದಿನ ಸಂಪುಟ ಸಭೆಯಲ್ಲ ನಾವು ಕೈಗೊಂಡ ನಿರ್ಣಯವನ್ನು ರಾಜ್ಯಪಾಲರು ಸ್ವೀಕರಿಸಿಲ್ಲ. ರಾಜಭವನವನ್ನು ದುರಪಯೋಗ ಮಾಡಿ ನಿರ್ಧಾರ ಹೊರಡಿಸಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆ ಉದ್ಭವಿಸಲ್ಲ ಎಂದು ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.