Rishab Shetty: ರಿಷಬ್ ಶೆಟ್ಟಿ ನಿಜವಾದ ಹೆಸರಿನ ಹಿಂದೆ ಒಂದು ಪವಾಡದ ಕಥೆಯೇ ಇದೆ?

Rishab Shetty: ನಮಗೆಲ್ಲರಿಗೂ ಪರಿಚಯ ಇರುವ ರಿಷಬ್ ಶೆಟ್ಟಿ ಇದಕ್ಕೂ ಮೊದಲು ಈ ರೀತಿ ಇರಲಿಲ್ಲ. ಅವರ ಜೀವನ ಕಷ್ಟಕರವಾಗಿತ್ತು. ಆದ್ರೆ ಹೆಸರು ಬದಲಿಸಿಕೊಂಡ ಮೇಲೆ ಎಲ್ಲವೂ ಸರಿ ಆಯಿತು ಎಂಬುದು ಅವರ ಭಾವನೆ. ಹೌದು, ರಿಷಬ್ ಶೆಟ್ಟಿ ಇವತ್ತು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಅಂದರೆ ಅದಕ್ಕೆ ಕಾರಣ ಅವರ ಹೆಸರು ಬದಲಾವಣೆ.

 

ಮೂಲತಃ ಕುಂದಾಪುರದ ಕೆರಾಡಿಯಲ್ಲಿ ಜನಿಸಿದ ರಿಷಬ್ ಶೆಟ್ಟಿ (Rishab Shetty) ಅವರ ಮೂಲ ಹೆಸರು ಪ್ರಶಾಂತ್. ಇವರು ಸಣ್ಣ ವಯಸ್ಸಿನಲ್ಲೇ ಹೀರೋ ಆಗಬೇಕು ಎಂದು ಕನಸು ಕಂಡಿದ್ದರು. ಹಾಗೆಯೇ ಸಿನಿಮಾಗಳನ್ನು ನೋಡುವ ಕ್ರೇಜ್ ಬೆಳೆದಿತ್ತು. ಜೊತೆಗೆ ಉಪೇಂದ್ರ ಅವರ ಸಿನಿಮಾಗಳನ್ನು ನೋಡಿ ಅವರ ಬಗ್ಗೆ ಕುತೂಹಲ ಮೂಡಿತು.

ರಿಷಬ್ ಒಂದು ಕಾಲದಲ್ಲಿ ಮಾಡದ ಕೆಲಸವಿಲ್ಲ. ಸಾಮಾನ್ಯ ಬದುಕಿನ ಹೋರಾಟದಲ್ಲಿ ರಿಷಬ್ ಶೆಟ್ಟಿ ಅವರು ಡ್ರೈವಿಂಗ್ ಕೆಲಸ,  ಟೀ ಪುಡಿ ಮಾರಾಟ, ಸೋಲಾರ್ ಫಿಕ್ಸ್ ಹೀಗೆ ಹಲವು ಸಣ್ಣ ಪುಟ್ಟ ಕೆಲಸ ಮಾಡಿದ್ದರು. ಕೆಲವು ಸಮಯ ಯಾವುದೇ ಕೆಲಸ ಇರಲಿಲ್ಲ. ಆಗ ಸಿಕ್ಕಿದ್ದು ರಿಷಬ್ ಅವರ ಗೆಳೆಯ ಪ್ರಸಾದ್ ಎಂಬವರ ಒಂದು ಅದ್ಬುತ ಸಲಹೆ ಅವರ ಬದುಕನ್ನೇ ಬದಲಿಸಿದೆ. ಹೌದು, ರಿಷಬ್ ಶೆಟ್ಟಿ ಹುಟ್ಟಿದ್ದು ಜುಲೈ 7ರಂದು. ಮುಂಜಾನೆ ಏಳು ಗಂಟೆಗೆ. ಇಲ್ಲಿ ಎಲ್ಲವೂ ಏಳೇ ಇದೆ. ಅದರ ಪ್ರಕಾರ ಹೆಸರು ಬದಲಿಸಿಕೊಳ್ಳುವಂತೆ ಗೆಳೆಯ ಸೂಚನೆ ನೀಡಿದ್ದ.

ಆದ್ರೆ ರಿಷಬ್ ಶೆಟ್ಟಿ ಅವರು ಜೋತಿಷಿ ಹೇಳುವ ಅನುಭವ ಹೊಂದಿದ್ದ ತಂದೆಯ ಬಳಿ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಆಗ ರಿಷಬ್ ತಂದೆ R ಇಂದ ಬರುವ ಹೆಸರನ್ನು ಇಟ್ಟುಕೊಳ್ಳುವಂತೆ ಹೇಳಿದ್ದರು. ಆದ್ರೆ ಆ ಸಮಯದಲ್ಲಿ ಹೆಸರು ಬದಲಿಸಿಕೊಂಡ ಮಾತ್ರಕ್ಕೆ ಏನೂ ಬದಲಾಗುವುದಿಲ್ಲ ಎಂಬುದು ರಿಷಬ್ ಶೆಟ್ಟಿ ಅಭಿಪ್ರಾಯ ಆಗಿತ್ತು. ಆದರೂ ಹೆಸರು ಬದಲಿಸಿಕೊಂಡರು.

ಆ ನಂತರ ರಿಷಬ್ ಶೆಟ್ಟಿ ಅವರು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ರಿಕ್ಕಿ’. ಈ ಚಿತ್ರ ಪೂರ್ತಿ ಅಲ್ಲದಿದ್ದರೂ ಸಾಧಾರಣ ಗೆಲುವು ಕಂಡಿತು. ನಂತರ ‘ಕಿರಿಕ್ ಪಾರ್ಟಿ’ ಕೂಡ ಅದೇ ವರ್ಷ ರಿಲೀಸ್ ಆಗಿ ಭರ್ಜರಿ ಮೆಚ್ಚುಗೆ ಪಡೆಯಿತು.

ಇನ್ನು 2018ರಲ್ಲಿ ರಿಲೀಸ್ ಆದ ಅವರ ನಿರ್ದೇಶನದ ‘ಸಹಿಪ್ರಾ ಶಾಲೆ ಕಸಾರಗೋಡು’ ಸಿನಿಮಾ ಮೆಚ್ಚುಗೆ ಪಡೆಯಿತು. ನಾಲ್ಕು ವರ್ಷಗಳ ಬಳಿಕ ರಿಲೀಸ್ ಆದ ‘ಕಾಂತಾರ’ ಸಿನಿಮಾ ಅದೂ ಕೂಡಾ ಜನರ ಮೆಚ್ಚುಗೆ ಪಡೆಯಿತು. ಅಲ್ಲದೆ ಈ ಚಿತ್ರದ ನಟನೆಗೆ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ ಅನ್ನೋದು ವಿಶೇಷ. ಜೊತೆಗೆ  ‘ಕಾಂತಾರ’ ಸಿನಿಮಾ ನಟನೆಗಾಗಿ ಅವರಿಗೆ ಅತ್ಯುತ್ತಮ ನಟ ಅವಾರ್ಡ್​ ಸಿಕ್ಕಿದೆ. ಅದೇ ರೀತಿ ‘ಕಾಂತಾರ’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಅವಾರ್ಡ್ ದೊರೆತಿದೆ. ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅವರ ಜೀವನ ಈಗ ಸಂಪೂರ್ಣವಾಗಿ ಬದಲಾಗಿದೆ.

1 Comment
  1. MichaelLiemo says

    ventolin cost: buy albuterol inhaler – buy ventolin online canada
    ventolin nz

Leave A Reply

Your email address will not be published.