Paris Olympics: ಒಲಿಂಪಿಕ್ ನಲ್ಲಿ ಹಿಜಾಬ್ ಧರಿಸಿ ಚಿನ್ನ ಗೆದ್ದ ಆಟಗಾರ್ತಿ ಈಕೆ !
Paris Olympics: ಪ್ಯಾರಿಸ್ ಒಲಿಂಪಿಕ್ಸ್ ನ (Paris Olympics) ಕೊನೆಯ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್ ನಲ್ಲಿ, ಮಹಿಳೆಯರ ಮ್ಯಾರಥಾನ್ ಓಟದಲ್ಲಿ ನೆದರ್ಲೆಂಡ್ಸ್‌ನ ಸಿಫಾನ್ ಹಸನ್ ಚಿನ್ನ ಗೆದ್ದರು. ರವಿವಾರ ಮ್ಯಾರಥಾನ್ ನ ಅಂತಿಮ 250 ಮೀಟರ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಈಕೆ ಒಲಿಂಪಿಕ್ಸ್ ದಾಖಲೆಯ 2 ಗಂಟೆ, 22 ನಿಮಿಷ ಮತ್ತು 55 ಸೆಕೆಂಡುಗಳಲ್ಲಿ ಮಹಿಳೆಯರ ಮ್ಯಾರಥಾನ್ ಮುಗಿಸಿ ಒಲಿಂಪಿಕ್ಸ್ ಚಿನ್ನವನ್ನು ತಮ್ಮದಾಗಿಸಿಕೊಂಡರು. ಆದರೆ ಆ ಓಟ ಹಾಗು ಚಿನ್ನದ ಪದಕಕ್ಕಿಂತ ಹೆಚ್ಚು ಸುದ್ದಿಯಾದದ್ದು ಚಾಂಪಿಯನ್ ಸಿಫಾನ್ ಹಸನ್ ಧರಿಸಿದ್ದ ಹಿಜಾಬ್.
ಫ್ರಾನ್ಸ್ ತನ್ನ ಮಹಿಳಾ ಆಟಗಾರರು ಹಿಜಾಬ್ ಧರಿಸುವುದನ್ನು ನಿಷೇಧಿಸಿದ ಒಲಿಂಪಿಕ್ಸ್ ಕ್ರೀಡಾಕೂಟದ ಕೊನೆಯ ಪೋಡಿಯಂ ಸಮಾರಂಭದಲ್ಲಿ ಮಧ್ಯದಲ್ಲಿ ಚಿನ್ನ ವಿಜೇತೆ ಡಚ್ ಓಟಗಾರ್ತಿ ಹಿಜಾಬ್ ಧಾರಿ ಸಿಫಾನ್ ಹಸನ್.
ಚಿನ್ನದ ಪದಕ ಸ್ವೀಕರಿಸುವಾಗ ಹಿಜಾಬ್ ಧರಿಸಿದ ಸಿಫಾನ್ ಹಸನ್ ವಿಶ್ವದಾದ್ಯಂತ ಪ್ರಚಾರ ಪಡೆದುಕೊಂಡರು. ಆತಿಥೇಯ ರಾಷ್ಟ್ರವು ತನ್ನ ಮಹಿಳಾ ಅಥೀಟ್‌ಗಳಿಗೆ ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದರೆ ಒಲಿಂಪಿಕ್ ಕ್ರೀಡಾಕೂಟವನ್ನು ಸಿಫಾನ್ ಹಸನ್ ಅದೇ ರಾಷ್ಟ್ರದಲ್ಲಿ ಹಿಜಾಪುರ್ ಧರಿಸಿ ಗಮನ ಸೆಳೆದರು. 2024 ರ ಒಲಿಂಪಿಕ್ಸ್ ಪಂದ್ಯಗಳಲ್ಲಿ ಮಹಿಳೆಯರು ಹಿಜಾಬ್ ಧರಿಸುವುದನ್ನು ಫ್ರಾನ್ಸ್ ನಿಷೇಧಿಸಿದ ನಂತರ, ಸಿಫಾನ್ ಹಸನ್ ಮಹಿಳಾ ಮ್ಯಾರಥಾನ್ ನ ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಹಿಜಾಬ್ ಧರಿಸಿದರು.