Most time Flag Hoisted: ಈತನಕ ಅತ್ಯಂತ ಹೆಚ್ಚು ಬಾರಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನ ಮಂತ್ರಿ ಯಾರು ಗೊತ್ತೇ ?

Most time Flag Hoisted: ಸತತ ಮೂರನೆಯ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಅವರು ಸತತ 11ನೇ ಬಾರಿಗೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಮನಮೋಹನ್ ಸಿಂಗ್ ಅವರು ಸತತ 10 ಬಾರಿ ರಾಷ್ಟ್ರದ ಧ್ವಜಾರೋಹಣ ಕೈಗೊಂಡಿದ್ದರು. ಅತ್ಯಂತ ಹೆಚ್ಚು ಬಾರಿ ಧ್ವಜಾರೋಹಣ ಮಾಡಿದವರು ಇವರ್ಯಾರು ಅಲ್ಲ. (Most time Flag Hoisted)

ಭಾರತ ದೇಶದ ಪ್ರಥಮ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರೂ ಅವರು 17 ಬಾರಿ ಧ್ವಜರೋಹಣ ಮಾಡಿ ಇಲ್ಲಿಯತನಕ ಅತ್ಯಂತ ಹೆಚ್ಚು ಬಾರಿ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು 16 ಬಾರಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು.

ಇದೀಗ ನರೇಂದ್ರ ಮೋದಿ ಅವರು 11ನೇ ಬಾರಿಗೆ ಸತತವಾಗಿ ಧ್ವಜಾರೋಹಣ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದಿನ ಐದು ವರ್ಷಗಳ ತಮ್ಮ ಅಧಿಕಾರದ ಅವಧಿಯಲ್ಲಿ ಅವರು ಧ್ವಜ ಹಾರೋಣ ಮಾಡಿದರೆ ಇಂದಿರಾ ಗಾಂಧಿಯ ನಂತರ ಅತ್ಯಂತ ಹೆಚ್ಚು ಬಾರಿ ಧ್ವಜವಾಹರೋಹಣ ಮಾಡಿದ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ.

Leave A Reply

Your email address will not be published.