Arun Yogi Raj: ಅಯೋಧ್ಯೆ ರಾಮನ ಶಿಲ್ಪಿ ಅರುಣ್ ಯೋಗಿರಾಜ್’ಗೆ ವೀಸಾ ನಿರಾಕರಿಸಿದ ಅಮೇರಿಕಾ!!

Share the Article

Arun Yogi Raj: ಅಯೋಧ್ಯೆಯ ಭವ್ಯ ರಾಮ ಮಂದಿರದ ರಾಮಲಲ್ಲಾ ಮೂರ್ತಿಯನ್ನು ಕೆತ್ತಿ ದೇಶಾದ್ಯಂತ ಖ್ಯಾತಿ ಗಳಿಸಿದ ಶಿಲ್ಪಿ ಅರುಣ್ ಯೋಗಿ ರಾಜ್ ಅವರಿಗೆ ಅಮೇರಿಕಾ ವೀಸಾ(Visa) ನೀಡುವುದನ್ನು ನಿರಾಕರಿಸಿದೆ.

ಹೌದು, ಅಮೇರಿಕಾದಲ್ಲಿ(US) ನಡೆಯುವ ಕನ್ನಡಿಗರ ಅಕ್ಕ(AKKA) ಸಮ್ಮೇಳನಕ್ಕೆ ಅರುಣ್ ಯೋಗಿ ರಾಜ್ ಅವರಿಗೆ ಆಹ್ವಾನ ಬಂದಿತ್ತು. ಹೀಗಾಗಿ ಅಕ್ಕ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮದಲ್ಲಿ ಅಮೇರಿಕಾದಲ್ಲಿ ಭಾಗಿಯಾಗೋದಕ್ಕಾಗಿ ಶಿಲ್ಪಿ ಅರುಣ್ ಯೋಗಿ ರಾಜ್ ಅವರು ಅಮೇರಿಕಾ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೇ ಅವರಿಗೆ ವಿಸಾವನ್ನು ಅಮೇರಿಕಾ ನಿರಾಕಿರಿಸಿರುವುದಾಗಿ ತಿಳಿದು ಬಂದಿದೆ.

ಅಂದಹಾಗೆ ಈಗಾಗಲೇ ಅರುಣ್ ಯೋಗಿರಾಜ್ ಅವರ ಪತ್ನಿ ವಿಜೇತಾ(Vijeta) ಅಮೆರಿಕಕ್ಕೆ ತೆರಳಿದ್ದಾರೆ. 20 ದಿನಗಳ ಪ್ರವಾಸಕ್ಕಾಗಿ ಅಮೇರಿಕಾಕ್ಕೆ ಅರುಣ್ ಯೋಜಿರಾಜ್ ತೆರಳೋದಕ್ಕಾಗಿ ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ತಿರಸ್ಕೃತವಾಗಿದೆ. ಯಾವ ಕಾರಣಕ್ಕೆ ಅರುಣ್‌ ಯೋಗಿರಾಜ್‌ ಅವರಿಗೆ ಅಮೆರಿಕ ವೀಸಾ ನಿರಾಕರಣೆ ಮಾಡಿದೆ ಎನ್ನುವುದು ತಿಳಿದು ಬಂದಿಲ್ಲ.

Leave A Reply