Belthangady : ಒಂದು ರೂಪಾಯಿ ಕೂಡ ಭ್ರಷ್ಟಾಚಾರ ಮಾಡಿಲ್ಲ – ಬೆಳ್ತಂಗಡಿಯ ಮಾರಿಗುಡಿಯಲ್ಲಿ ಶಾಸಕ ಹರೀಶ್ ಪೂಂಜ ಪ್ರಮಾಣ !!
Belthangady : ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ(MLA Harish Poonja), ನಿನ್ನೆ ದಿನ(ಆ 14) ಬೆಳಿಗ್ಗೆ ಬೆಳ್ತಂಗಡಿಯ(Belthangady) ಮಾರಿಗುಡಿಯಲ್ಲಿ(Marigudi) ಇದುವರೆಗೂ ನಾನು ಒಂದು ರೂಪಾಯಿ ಕೂಡ ಭ್ರಷ್ಟಾಚಾರ ನಡೆಸಿಲ್ಲ ಎಂಬುದಾಗಿ ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.
ಹೌದು ಹರೀಶ್ ಪೂಂಜ ಅವರು ‘ನಾನು ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ಎಸಗಿಲ್ಲ. ನಾನು ಒಂದು ರೂಪಾಯಿ ಮುಟ್ಟಿಲ್ಲ. ಒಂದು ವೇಳೆ ತಪ್ಪುಮಾಡಿದ್ದರೆ ತಕ್ಕ ಶಿಕ್ಷೆಯನ್ನು ಮಾರಿಗುಡಿಯ ಮಹಾದೇವಿ ನೀಡಲಿ ಎಂದು ಬೆಳ್ತಂಗಡಿ ಮಾರಿಗುಡಿ ದೇವಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿದ್ದಾರೆ.
ಅಂದಹಾಗೆ ಕಾಂಗ್ರೆಸ್ ಮುಖಂಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ(Rakshith Shivaram) ಅವರು ಶಾಸಕ ಪೂಂಜಾ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡಿದ್ದರು. ಬೆಳ್ತಂಗಡಿ ಪ್ರವಾಸಿ ಬಂಗಲೆ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಪೂಂಜಾ ಭ್ರಷ್ಟಾಚಾರ ಎಸಗಿದ್ದಾರೆ ಹಾಗೂ 3 ಕೋಟಿ ರೂ. ಕಮಿಷನ್ ಪಡೆದು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಗೆ ಪ್ರತಿಯಾಗಿ, ಹರೀಶ್ ಪೂಂಜಾ ಮಾರಿಗುಡಿಯ ಮಹಾದೇವಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಭ್ರಷ್ಟಾಚಾರ ನಡೆಸಿಲ್ಲ ಎಂಬುದಾಗಿ ಪ್ರಮಾಣ ಮಾಡಿದ್ದಾರೆ.
ಇದರೊಂದಿಗೆ ಪೂಂಜ ಅವರು ‘ಆರೋಪಗಳನ್ನು ಮಾಡುತ್ತಿರುವ ರಕ್ಷಿತ್ ಶಿವರಾಂ ಸೇರಿದಂತೆ ಎಲ್ಲರಿಗೂ ತಕ್ಕ ಶಿಕ್ಷೆ ನೀಡಲಿ’ ಎಂದು ದೇವರಲ್ಲಿ ಪ್ರಾರ್ಥಿಸಿದರು. ಈ ಸಂದರ್ಭ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಧರ್ಮಸ್ಥಳದ ಕೆಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಪ್ರಮಾಣ ಮಾಡಿದ್ದೇಕೆ?
ಹರೀಶ್ ಪೂಂಜಾ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಬೆಳ್ತಂಗಡಿ ಪ್ರವಾಸಿ ಮಂದಿರ ನಿರ್ಮಾಣ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಾಮಗಾರಿಗೆ ಸಂಬಂಧಿಸಿದ್ದಾಗಿದೆ. ಮಾರ್ಚ್ 28, 2023 ರಲ್ಲಿ ಬೆಳ್ತಂಗಡಿಲ್ಲಿ ಪ್ರವಾಸಿ ಮಂದಿರ ಉದ್ಘಾಟನೆಯಾಗಿತ್ತು. ಈ ಪ್ರವಾಸಿ ಮಂದಿರ 7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಪ್ರವಾಸಿ ಮಂದಿರದ ಅನುದಾನವನ್ನು ಚುನಾವಣೆ ಪ್ರಚಾರಕ್ಕೆ ಬಳಸಿದ್ದಾರೆ ಎಂದು ಆರೋಪಿಸಿ ಶಿವರಾಂ ಅವರು ಲೋಕಾಯುಕ್ತಕ್ಕೂ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದಾರೆ. ಇಬ್ಬರ ನಡುವಿನ ವಾಕ್ಸಮರ ಜೋರಾಗುತ್ತಿದ್ದಂತೆ ಇಂದು ಹರೀಶ್ ಪೂಂಜಾ ಅವರು ಮಾರಿಗುಡಿಗೆ ಬಂದು ಪ್ರಮಾಣ ಮಾಡಿದ್ದಾರೆ
I got what you intend, regards for posting.Woh I am thankful to find this website through google.