Huli Rum: ಮಾರುಕಟ್ಟೆಗೆ ಇನ್ನೇನು ಬರಲಿದೆ ‘ಹುಲಿ’ ಹೆಸರಿನ ರಮ್, ರೇಟ್ ಎಷ್ಟು, ಬಿಡುಗಡೆ ಯಾವಾಗ ?
Huli Rum: ಸಂಜೆಯ ಸನ್ನಿವೇಶಗಳಲ್ಲಿ ಕಲರವ ಮೂಡಿಸಬಲ್ಲ ಹೊಸ ಗೆಳೆಯನೊಬ್ಬ ಬರುತ್ತಿದ್ದಾನೆ. ಇದು ಮದ್ಯಪ್ರಿಯರಿಗೆ ಒಂದು ದೊಡ್ಡ ಸಂತಸದ ಸುದ್ದಿ. ಸದ್ಯದಲ್ಲೇ ಮತ್ತೊಂದು ಹೊಸ ಬ್ರಾಂಡ್ ಮಾರುಕಟ್ಟೆಗೆ ಬರಲಿದೆ. ಮುಂದಿನ ವಾರದಿಂದ ದೇಶೀಯವಾಗಿ ಉತ್ಪಾದನೆಯ ಹೊಸ ಮಾದರಿಯ ರಮ್ ಒಂದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಹುಲಿ ಬರ್ತಾ ಇದೆ!!
ವಿವಿಧ ರೀತಿಯ ಮದ್ಯದ ರುಚಿಯನ್ನು ಚಪ್ಪರಿಸಿ ಸವಿಯಲು ಬಯಸುವ ಜನರಿಗೆ ಮತ್ತೊಂದು ಹೊಸ ರೀತಿಯ ರುಚಿ ನೋಡುವ ಅವಕಾಶ ಸಿಕ್ಕಿದೆ. ಅದೇನೆಂದರೆ ಬೆಲ್ಲದಿಂದ ತಯಾರಿಸಿದ ಮೊದಲ ದೇಶೀಯ ರಮ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಅದಷ್ಟೇ ವಿಶೇಷವಲ್ಲ, ಈ ಬ್ರ್ಯಾಂಡ್ ನ ಹೆಸರೇ ಸಖತ್ ವಿಶೇಷ ಮತ್ತು ಪವರ್ ಫುಲ್ ಆಗಿದೆ.
ಹೌದು, ಅತ್ತ ಆಗಸ್ಟ್ 15 ರ ಸ್ವತಂತ್ರದ ಹಬ್ಬ ಮುಗಿದು ಸಂಜೆ ಬೀಳುತ್ತಿರುವ ಹಾಗೆ ‘ಹುಲಿ ‘ ಹೆಸರಿನಲ್ಲಿ ರಮ್ ಮಾರುಕಟ್ಟೆಗೆ ಬರಲಿದೆ. ಈ ಮೈಸೂರು ಸ್ಪೆಷಲ್ ಬ್ರಾಂಡ್ ಸವಿಯಲು ಮದ್ಯಪ್ರಿಯರಲ್ಲಿ ಇನ್ನಿಲ್ಲದ ಕಾತರ. ಬೆಲ್ಲದಿಂದ ತಯಾರಿಸಿದ ಈ ಹುಲಿ ಬಿಡುಗಡೆಯಾದ ಮೊದಲ ದಿನವೇ ಅದರ ಒಂದು ಗುಟುಕು ಕುಡಿದು ಗಂಟಲು ಬಿಸಿಮಾಡಿಕೊಳ್ಳಲು ಮದ್ಯದ ಮಲ್ಲರು ತಯಾರಿ ನಡೆಸಿದ್ದಾರೆ.
ಈ ಹುಲಿ ಹೆಸರಿನ ನಂಜನಗೂಡಿನಲ್ಲಿ ಉತ್ಪಾದನೆಯಾಗಿದೆ. 8 ವರ್ಷಗಳ ನಿರಂತರ ಪರಿಶ್ರಮದ ನಂತರ ಹೊಸ ಬ್ರಾಂಡ್ ನ ಮದ್ಯದ ಪೂರ್ಣ ಆವಿಷ್ಕಾರ ಆಗಿದೆ. ಈಗ ಕನ್ನಡ ಹೆಸರಿನ ಮದ್ಯ ಮಾರುಕಟ್ಟೆಗೆ ಬಿಡುಗಡೆಯಾಗಲು ಸಜ್ಜಾಗಿರೋದು ವಿಶೇಷ. ಮೈಸೂರೂ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿರುವ ಭಾರತದ ಮೊದಲ ಮೈಕ್ರೋ-ಡಿಸ್ಟಿಲರಿಯಲ್ಲಿ ಇದನ್ನ ತಯಾರಿಸಲಾಗುತ್ತದೆ. ಇದರ ಮೊದಲ ಸುಮಾರು 2,000 ಬಾಟಲಿಗಳನ್ನು ಒಳಗೊಂಡಿದ್ದು, ಪ್ರಥಮ ಬ್ಯಾಚ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಹುಲಿ ಬಿಡುಗಡೆಯ ದಿನಾಂಕ ಖಚಿತವಾಗಿದ್ದು, ಈ ರಮ್ ಮೊದಲು ಬೆಂಗಳೂರು ಮತ್ತು ಮೈಸೂರು ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.
ಹುಲಿ ಬೆಲೆ 2800 ರೂಪಾಯಿ
ಹುಲಿಗೆ ಬೆಲೆ ನಿರ್ಧಾರವಾಗಿದ್ದು, ಫುಲ್ ಬಾಟಲ್ ಅಂದರೆ 750ಎಂಎಲ್ ಬಾಟಲಿಯು 630 ರೂಪಾಯಿ ಮೂಲ ಬೆಲೆಯನ್ನು ಹೊಂದಿದೆ. ಅಬಕಾರಿ ಸುಂಕ ಮತ್ತು ಚಿಲ್ಲರೆ ಮಾರ್ಜಿನ್‌ಗಳ ಸೇರಿ ಜನರ ಕೈಗೆ ಬಂದಾಗ ಅದರ ಬೆಲೆ ಏರಲಿದ್ದು, ಹುಲಿ 2,800 ರೂಪಾಯಿಗೆ ಲಭ್ಯವಿರುತ್ತದೆ.
ಭಾರತದಲ್ಲಿ ಈಗಾಗಲೇ ಹಲವಾರು ಬ್ರ್ಯಾಂಡ್ ರಮ್‌ಗಳಿವೆ. ಕೆರಿಬಿಯನ್ ರಾಷ್ಟ್ರದಲ್ಲಿ ರಮ್ ಜನಿಸಿದರೂ, ನಮ್ಮ ಭಾರತದಲ್ಲಿ ಬಹಳಷ್ಟು ರಮ್ ಪ್ರಿಯರಿದ್ದಾರೆ. ವ್ಯಕ್ತಿಗೆ ಹೋಲಿಸಿದರೆ, ರಮ್ ಉಷ್ಣ ಕಾರಕವಾಗಿದ್ದು, ಕೊಡಗು ಬತ್ತಿತರ ಚಳಿ ಪ್ರದೇಶಗಳಲ್ಲಿ ಹೆಚ್ಚಿದ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಇದೀಗ ಭಾರತದಲ್ಲೇ ತಯಾರಾದ ನಮ್ ರಮ್, ಅದೂ ಅಚ್ಚ ಕನ್ನಡ ಭಾಷೆಯ ಪವರ್ಫುಲ್ ಹೆಸರಿನೊಂದಿಗೆ ‘ಹುಲಿ ‘ ಥರ ಗುರಾಯಿಸಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿದೆ.